ಮೈಸೂರು: ಇಲ್ಲಿನ ಎಪಿಎಂಸಿಯಲ್ಲಿ ಗೋಲ್ಡ್ ವಿನ್ನರ್ (ಕಾಳೀಶ್ವರಿ ರಿಫೈನರಿ ಪ್ರೈವೇಟ್ ಲಿಮಿಟೆಡ್) ವತಿಯಿಂದ ‘ಗೋಲ್ಡ್ ವಿನ್ನರ್ ಮಂಡಿ ಧಮಾಕ ಸೇಲ್’ ಲಕ್ಕಿ ಡ್ರಾ ಸ್ಪರ್ಧೆ ಶುಕ್ರವಾರ ನಡೆಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಗಟು ವ್ಯಾಪಾರಿಗಳಿಗಾಗಿ ಆಯೋಜಿಸಿದ್ದ ವಿಶೇಷ ರಿಯಾಯಿತಿ ಕೊಡುಗೆಯ ಲಕ್ಕಿ ಡ್ರಾ ಸ್ಪರ್ಧೆ ಇದಾಗಿತ್ತು. ಗೋಲ್ಡ್ ವಿನ್ನರ್ ಸನ್ ಫ್ಲವರ್ ಎಣ್ಣೆಯ 10 ಲೀಟರ್ ಸ್ಲ್ಯಾಬ್ ಬಾಕ್ಸ್ ಖರೀದಿಯ ಮೇಲೆ ಬೆಲೆ ಕಡಿತ ನೀಡಲಾಗಿತ್ತು.

5 ಬಾಕ್ಸ್ ಖರೀದಿಯ 10 ಅದೃಷ್ಟಶಾಲಿಗಳಿಗೆ ಪ್ರೆಷರ್ ಕುಕ್ಕರ್, 10 ಬಾಕ್ಸ್ ಖರೀದಿ ಅದೃಷ್ಟಶಾಲಿಗಳಿಗೆ ಇಂಡಕ್ಷನ್ ಸ್ಟವ್ ಹಾಗೂ 25 ಬಾಕ್ಸ್ ಖರೀದಿಯ ವಿಜೇತರಲ್ಲಿ ಬಂಡಿಪಾಳ್ಯದ ‘ಅಂಗೈ’ ಎಂಟರ್ಪ್ರೈಸಸ್ಗೆ ಮೆಗಾ ಬಂಪರ್ ಹೀರೊ ಕಂಪನಿಯ ಬೈಕ್ ನೀಡಲಾಯಿತು.

ಗೋಲ್ಡ್ ವಿನ್ನರ್ ಕಂಪನಿ ಸಿಇಒ ಪ್ರೇಮ್ಕುಮಾರ್, ‘ಉತ್ಪನ್ನವನ್ನುಯಶಸ್ವಿಯಾಗಿ ಉತ್ತೇಜಿಸಲು, ವ್ಯಾಪಾರಿ ಮತ್ತು ಗ್ರಾಹಕರನ್ನು ಆಕರ್ಷಿಸಲು ಲಕ್ಕಿ ಡ್ರಾ ಸ್ಪರ್ಧೆ ನಡೆಸಲಾಗಿದೆ. ಉತ್ತಮ ಸ್ಪಂದನೆ, ಸಹಕಾರ ದೊರೆತಿದೆ. ಉತ್ಪನ್ನದ ವೈಶಿಷ್ಟ್ಯ ಹೆಚ್ಚಿಸುವಲ್ಲಿ ಇನ್ನು ಉತ್ತಮ ಮಟ್ಟದ ಸ್ಪರ್ಧೆ ಆಯೋಜಿಸಲಾಗುವುದು’ ಎಂದರು.

ಆರ್ಎಸ್ಎಂ ಮಹೇಶ್, ‘ಇದು ಮೊದಲ ಪ್ರಯತ್ನ. ಲಕ್ಕಿ ಡ್ರಾದಲ್ಲಿ 3 ಸ್ಕೀಮ್ ಮಾಡಲಾಗಿತ್ತು. ಒಂದು ಬಾಕ್ಸ್ ತೆಗೆದುಕೊಳ್ಳುವರು, ಐದು ಬಾಕ್ಸ್ ತೆಗೆದುಕೊಂಡರು’ ಎಂದು ಹೇಳಿದರು.

ಎಎಸ್ಎಂ ಅಬ್ದುಲ್ ರೆಹಮಾನ್ ಖಾನ್, ಕೆಆರ್ಪಿಎಲ್ನ ಸಿಎಫ್ಎ ಶ್ರೀಧರ್, ಮಹಾಲಕ್ಷ್ಮಿ ಟ್ರೇಡರ್ಸ್ನ ಪ್ರದೀಪ್, ಮಾರ್ಕೆಟಿಂಗ್ ವಿಭಾಗದ ಶ್ರೀನಿವಾಸನ್, ಸದ್ದಾಂ ಹುಸೇನ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-39-1468980023

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.