ಎಚ್.ಡಿ. ಕೋಟೆ: ನಾನು ಶಾಸಕನಾಗಿ ಬಂದಾಗ ನನ್ನ ಕ್ಷೇತ್ರದ ಅಭಿವೃದ್ಧಿಗೂ ಮೊದಲು ಕನಸು ಕಂಡಿದ್ದು ಹ್ಯಾಂಡ್ ಪೋಸ್ಟ್ ವೃತ್ತದ ಅಭಿವೃದ್ದಿಪಡಿಸಬೇಕೆಂದು, ಅದು ಇಂದು ಸಾಕಾರಗೊಳ್ಳುತ್ತಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ಪಟ್ಟಣದ ಹ್ಯಾಂಡ್ ಪೋಸ್ಟ್ನಲ್ಲಿ ಬುಧವಾರ ಲೋಕೋಪಯೋಗಿ ಇಲಾಖೆಯಿಂದ ₹4.5 ಕೋಟಿ ವೆಚ್ಚದ ಯರಹಳ್ಳಿ ಹ್ಯಾಂಡ್ ಪೋಸ್ಟ್ ವೃತ್ತ, ಕೊಲ್ಲೇಗೌಡನಹಳ್ಳಿ ವೃತ್ತ ಹಾಗೂ ಎಚ್.ಡಿ. ಕೋಟೆ ಸಂಪರ್ಕ ರಸ್ತೆ ಅಭಿವೃದ್ಧಿ ಮತ್ತು ₹3 ಕೋಟಿ ವೆಚ್ಚದ ರಸ್ತೆ ನವೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ವೃತ್ತದ ನಾಲ್ಕು ರಸ್ತೆಗಳ ಇಕ್ಕೆಲದಲ್ಲಿ ನಾಲ್ಕು ಹೈಟೆಕ್ ಬಸ್ ನಿಲ್ದಾಣ ಮತ್ತು ಶೌಚಾಲಯ ನಿರ್ಮಿಸ ಲಾಗುವುದು. ಈ ವೃತ್ತ ತಾಲ್ಲೂಕಿನ ಹೃದಯ ಭಾಗವಾಗಿ ಗುರುತಿಸಿಕೊಳ್ಳಲಿದೆ ಎಂದರು. ಕುಡಿಯುವ ನೀರು ಕೂಡ ಈ ನಿಲ್ದಾಣದಲ್ಲಿ ಸಿಗಲಿದ್ದು, 60 ಕ್ಕೂ ಹೆಚ್ಚು ಮಂದಿ ಕುಳಿತುಕೊಳ್ಳುವಆಸನ ವ್ಯವವಸ್ಥೆ ಇರಲಿದೆ. ಕಾಮಗಾರಿಯನ್ನು ಆರು ತಿಂಗಳಲ್ಲಿ ಮುಗಿಸಲು ಎಂಜಿನಿಯರ್ ಗಳಿಗೆ ಸೂಚಿಸಲಾಗಿದೆ ಎಂದರು.

ಎಚ್.ಡಿ. ಕೋಟೆಯಿಂದ ಸರಗೂರಿಗೆ ಸಂಪರ್ಕ ರಸ್ತೆ ಕಾಮಗಾರಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಜೊತೆಗೆ ತುಂಬಸೋಗೆ ಸೇತುವೆಯನ್ನು ಬೀಚನಹಳ್ಳಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಮಾದರಿಯಲ್ಲಿ ಸ್ಟೀಲ್ ಸೇತುವೆ ನಿರ್ಮಾಣಕ್ಕೂ ಪ್ರಸ್ತಾವ ಸಲ್ಲಿಸಲಾಗುವುದು ಎಂದರು. ಮುಖಂಡರಾದ ಎಚ್.ಸಿ. ನರಸಿಂಹಮೂರ್ತಿ ಮಾತನಾಡಿ, ಮೈಸೂರಿನಲ್ಲಿ ಅತಿ ಹೆಚ್ಚು ಪ್ರವಾಸಿತಾಣಗಳನ್ನು ಹೊಂದಿರುವ ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ ಅಭಿವೃದ್ಧಿ ಕೆಲಸಗಳು ಹಂತ ಹಂತವಾಗಿ ನಡೆಯುತ್ತಿದೆ. ನಾಗರಹೊಳೆ ಮತ್ತು ಕೇರಳಕ್ಕೆ ತೆರಳುವ ಮುಖ್ಯರಸ್ಥೆಯಲ್ಲಿ ಹ್ಯಾಂಡ್ಪೋಸ್ಟ್ ವೃತ್ತ ಇದ್ದು, ಈ ವೃತ್ತದ ಅಭಿವೃದ್ಧಿಗೆ ಭೂಮಿಪೋಜೆ ನೆರವೇರಿದೆ ಎಂದರು. ಮೈಮುಲ್ ಅಧ್ಯಕ್ಷ ಈರೇಗೌಡ ಮಾತನಾಡಿ, ‘ತಾಲ್ಲೂಕನ್ನು ಸಂಪೂರ್ಣ ವೀಕ್ಷಿಸಲು ಇನ್ನೂ 20 ವರ್ಷ ಕಳೆಯಬೇಕು, ಇದನ್ನರಿಯದ ಕೃಷ್ಣನಾಯಕ ಅಭಿವೃದ್ಧಿ ವಿಚಾರದಲ್ಲಿ ಅನಗತ್ಯ ಆರೋಪ ಮಾಡುತ್ತಿದ್ದಾರೆ, ಶಾಸಕ ಅನಿಲ್ ಚಿಕ್ಕಮಾದು ತಾಲ್ಲೂಕಿನ ಅಭಿವೃದ್ಧಿಗೆ ಯೋಜನೆಗಳೊಂದಿಗೆ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು. ಕೃಷ್ಣನಾಯಕ ಅವರ ಜೀವನದಲ್ಲಿ ತಾಲ್ಲೂಕಿನಿಂದ ಶಾಸಕರಾಗಲು ಸಾಧ್ಯವಿಲ್ಲ, ಅಂತಹದರಲ್ಲಿ ಅವರು ತಾಲ್ಲೂಕಿಗೆ ಇನ್ಯಾವುದೋ ತಾಲ್ಲೂಕಿನಿಂದ ಬಂದು ಸ್ಪರ್ಧಿಸುತ್ತಿದ್ದಾರೆ, ಅವರ ಕ್ಷೇತ್ರದಲ್ಲೇ ಅವರಿಗೆ ಮನ್ನಣೆ ಇಲ್ಲ’ ಎಂದು ಆರೋಪಿಸಿದರು. ಏಜಾಜ್ ಪಾಷ, ಪ್ರಕಾಶ್, ಮರಿದೇವಯ್ಯ, ಆಸಿಫ್, ಬಿರೇಗೌಡ, ಶಿವಮಲ್ಲು, ಅಜಾಜ್, ನಾಗನಹಳ್ಳಿ ಪ್ರದೀಪ್, ಅಶೋಕ್, ರಾಜು, ಶಿವಪ್ಪ, ರವಿ, ಪ್ರೇಂ ಸಾಗರ್, ಸೂರ್ಯಕುಮಾರ್, ಎಂಜಿನಿಯರ್ ರಮೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-38-349788342

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.