ಹಂಪಾಪುರ: ಎಚ್.ಡಿ.ಕೋಟೆ ತಾಲ್ಲೂಕಿನ ಕಾಕನಕೋಟೆ ಬಳ್ಳಿ ಗೇಟ್ನಲ್ಲಿರುವ ಶಕ್ತಿದೇವತೆ ಮಾಸ್ತಮ್ಮನವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಮೊದಲಿಗೆ ಕಬಿನಿ ಹಿನ್ನೀರಿನಲ್ಲಿರುವ ಹಳೇ ಮಾಸ್ತಿ ಗುಡಿಗೆ ಅರ್ಚಕ ವೀರಭದ್ರಪ್ಪ ವಿಶೇಷ ಪೂಜೆ ಸಲ್ಲಿಸಿ ನಂತರ ಕಳಸವನ್ನು ಮಹೇಂದ್ರ, ಲಕ್ಷ್ಮಿ ಆನೆಗಳೊಂದಿಗೆ ಮಂಗಳವಾದ್ಯ, ಚಂಡೆ, ಸತ್ತಿಗೆ ಮೆರವಣಿಗೆ ಮೂಲಕ ದೇವಾಲಯಕ್ಕೆ ತಂದು ಮಾಸ್ತಮ್ಮನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ ಸಾವಿರಾರು ಭಕ್ತರಿಗೆ ಅರಣ್ಯ ಇಲಾಖೆಯಿಂದ ಅನ್ನ ಸಂತರ್ಪಣೆ ನಡೆಸಲಾಯಿತು.

ಜಾತ್ರೆ ಅಂಗವಾಗಿ ಉದ್ದೂರು ಗೇಟ್ ಬಳಿ ತಿಂಡಿ ತಿನಿಸು, ಇತರೆ ಅಂಗಡಿಗಳನ್ನು ತೆರೆಯಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅರಣ್ಯ ಹಾಗೂ ಪೊಲೀಸ್ ಇಲಾಖೆ ಭದ್ರತೆ ಕೈಗೊಂಡಿದ್ದವು.

ವಿಶ್ವವಿಖ್ಯಾತ ಕಾಕನಕೋಟೆ ಬಳ್ಳೆಯಲ್ಲಿ ಖೆಡ್ಡಾ ನಡೆಸುತ್ತಿದ್ದಾಗ ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಜಯ ಚಾಮರಾಜ ಒಡೆಯರ್, ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಶಕ್ತಿದೇವತೆ ಮಾಸ್ತಮ್ಮನಿಗೆ ಮೊದಲು ವಿಶೇಷ ಪೂಜೆ ಸಲ್ಲಿಸಿ ನಂತರ ಕಾರ್ಯಾಚರಣೆ ನಡೆಸುತ್ತಿದ್ದರು. ಅಲ್ಲದೇ ವರನಟ ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಎಂ.ಪಿ. ಶಂಕರ್ ಗಂಧದಗುಡಿ ಚಿತ್ರೀಕರಣ ಸಂದರ್ಭ ಮಾಸ್ತಮ್ಮನಿಗೆ ಪೂಜೆ ಸಲ್ಲಿಸಿ ಚಿತ್ರೀಕರಣ ಆರಂಭಿಸಿದ್ದನ್ನು ಸ್ಮರಿಸಬಹುದು. ಬಳ್ಳೆ ಆನೆ ಶಿಬಿರದಲ್ಲಿ 30ಕ್ಕೂ ಹೆಚ್ಚು ಆನೆಗಳನ್ನು ಸಾಕಲಾಗಿತ್ತು. ಅಲ್ಲದೇ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತ ಐರಾವತ, ದ್ರೋಣ, ಅರ್ಜುನ ಸೇರಿದಂತೆ ಇನ್ನಿತರ ಆನೆಗಳಿಗೆ ಮಾಸ್ತಮ್ಮನ ಆಶೀರ್ವಾದವಿತ್ತು ಎನ್ನಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-38-843650290

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.