ಮೈಸೂರು: ‘ಮದ್ಯಪಾನ ತ್ಯಜಿಸಿ, ನಿಯಮಿತ ಆಹಾರ ಸೇವನೆ ಮತ್ತು ವ್ಯಾಯಾಮ ರೂಢಿಸಿಕೊಳ್ಳುವುದರಿಂದ ಯಕೃತ್ತಿನ ಆರೋಗ್ಯ ಕಾಪಾಡಿಕೊಳ್ಳಬಹುದು’ ಎಂದು ಬೆಂಗಳೂರಿನ ಅಂಗಾಂಗ ಕಸಿ ಶಸ್ತ್ರಚಿಕತ್ಸಕ ಡಾ.ಮಹೇಶ್ ಗೋಪಶೆಟ್ಟಿ ತಿಳಿಸಿದರು.

ಇಲ್ಲಿನ ಜೆಎಸ್ಎಸ್ ಆಸ್ಪತ್ರೆಯಲ್ಲಿಈಚೆಗೆ ನಡೆದ ವಿಶ್ವ ಯಕೃತ್ತು ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಗತ್ತಿನಲ್ಲಿ ಶೇ 10ರಷ್ಟು ಜನರು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮದ್ಯಪಾನ, ಅತಿ ಹೆಚ್ಚು ಆಹಾರ ಸೇವನೆ ಹಾಗೂ ಮಧುಮೇಹ ಕೂಡ ಯಕೃತ್ ಸಮಸ್ಯೆಗೆ ಕಾರಣವಾಗಿದೆ’ ಎಂದರು.

ಜೆಎಸ್ಎಸ್–ಎಎಚ್ಇಆರ್ ಕುಲಪತಿ ಡಾ.ಎಚ್. ಬಸವನಗೌಡಪ್ಪ,‘ಪ್ರಪಂಚದಲ್ಲಿ 20 ಲಕ್ಷ ಮಂದಿ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.ದುಶ್ಚಟಗಳಿಂದ ದೂರವಿರಬೇಕು. ಸೋಂಕಿನಿಂದ ರಕ್ಷಿಸಿಕೊಳ್ಳಲು ಹೆಪಟೈಟಿಸ್ ಲಸಿಕೆ ಹಾಕಿಸಿಕೊಳ್ಳಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗಿ, ದೇಹದ ತೂಕ ಇಳಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜೆಎಸ್ಎಸ್ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಪಿ.ಮಧು, ‘ಆಸ್ಪತ್ರೆಯು ರಿಯಾಯಿತಿ ದರದಲ್ಲಿ ಲಿವರ್ ತಪಾಸಣೆ ಪ್ಯಾಕೇಜ್ ಪರಿಚಯಿಸಿದೆ’ ಎಂದರು.

ಜೆಎಸ್ಎಸ್ ವೈದ್ಯ ಕಾಲೇಜಿನ ಪ್ರಾಂಶುಪಾಲ ಡಾ.ಡಿ. ನಾರಾಯಣಪ್ಪ, ಆಸ್ಪತ್ರೆಯ ಉಪವೈದ್ಯಕೀಯ ಅಧೀಕ್ಷಕ ಡಾ.ಪ್ರಸಾದ್ ಎಂ.ಸಿ., ಸ್ಥಾನೀಯ ವೈದ್ಯಾಧಿಕಾರಿ ಡಾ.ಶಾಂತಮಲ್ಲಪ್ಪ, ಗ್ಯಾಸ್ಟ್ರೊಎಂಟರಾಲಜಿ ವಿಭಾಗದ ಮುಖ್ಯಸ್ಥರಾದ ಡಾ.ದೀಪಕ್ ಸುವರ್ಣ, ಸರ್ಜಿಕಲ್ ಗ್ಯಾಸ್ಟ್ರೊಎಂಟರಾಲಜಿ ವಿಭಾಗದ ಮುಖ್ಯಸ್ಥ ಡಾ.ಮಹೇಶ್ಶೆಟ್ಟಿ, ಡಾ.ಆರಾಧ್ಯ ಎಚ್.ವಿ., ಡಾ.ಸುನೀಲ್ ಕುಮಾರ್, ಡಾ.ಶರಣ್ಯ ಎ. ವಾಸು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-39-346685835

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.