ಮೈಸೂರು: ‘ಮೈಸೂರು ಪಾರಂಪರಿಕ ನಗರಿಯ ಜೊತೆಗೆ ಆರೋಗ್ಯ ನಗರಿಯಾಗಿ ಬೆಳೆಯಬಲ್ಲ ಸಾಮರ್ಥ್ಯ ಹೊಂದಿದೆ’ ಎಂದು ಶಾಸಕ ದಿನೇಶ್ ಗುಂಡೂರಾವ್ ಹೇಳಿದರು.

ನಗರದಲ್ಲಿ ಶುಕ್ರವಾರ ಸಿಐಐ ಮೈಸೂರು ಘಟಕವು ಆಯೋಜಿಸಿದ್ದ ‘ಮೈ ಹೋಪ್ -2026’ ಮೈಸೂರಿನಲ್ಲಿ ಆಸ್ಪತ್ರೆಗಳ ಕಾರ್ಯಾಚರಣೆ ಮತ್ತು ಪ್ರಸ್ತುತದ ಅನುಭವಗಳು ಕುರಿತ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

‘ಯಾವುದೇ ಊರು ಆರೋಗ್ಯ ಕೇಂದ್ರವಾಗಲು ಸೂಕ್ತ ಪರಿಸರವೂ ಅಗತ್ಯ. ಪ್ರತಿಭಾವಂತರನ್ನು ಆಕರ್ಷಿಸಬೇಕಾದರೆ, ನಗರವು ಉತ್ತಮ ಸೌಲಭ್ಯಗಳನ್ನು ಒದಗಿಸಬೇಕು. ಉತ್ತಮ ಶಿಕ್ಷಣ ವ್ಯವಸ್ಥೆ, ವಸತಿ, ರಸ್ತೆಗಳು ಹಾಗೂ ಇತರೆ ಮೂಲಸೌಕರ್ಯಗಳು ಇರಬೇಕು. ಇಂತಹ ಪರಿಪೂರ್ಣ ವ್ಯವಸ್ಥೆ ನಿರ್ಮಾಣವಾದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಮೈಸೂರು ಇಂತಹ ಎಲ್ಲ ವಾತಾವರಣವನ್ನು ಹೊಂದಿದೆ’ ಎಂದರು.

‘ಮೈಸೂರು ಕ್ಷೇಮ ನಗರವಾಗಿಯೂ ಹೆಸರಾಗಿದ್ದು, ಯೋಗ, ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಕೇಂದ್ರಗಳು ಇಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿವೆ. ಇವು ಪ್ರಾದೇಶಿಕ ಮಟ್ಟದಲ್ಲಿ ಜನರನ್ನು ಆಕರ್ಷಿಸುವ ಸಾಮರ್ಥ್ಯ ಹೊಂದಿದೆ’ ಎಂದರು.

ನಗರೀಕರಣದ ಬೆಳವಣಿಗೆ: ‘ನಗರೀಕರಣವು ಎಲ್ಲ ವಲಯದ ಬೆಳವಣಿಗೆಗೆ ಪ್ರಮುಖ ಕಾರಣವಾಗುತ್ತಿದೆ. ಸದ್ಯದ ಅಂಕಿಅಂಶಗಳ ಪ್ರಕಾರಶೇ 35ಕ್ಕೂ ಹೆಚ್ಚು ಮಂದಿ ನಗರವಾಸಿಗಳಾಗಿದ್ದಾರೆ. 2050ರ ವೇಳೆಗೆ ಇದು ಶೇ 70ರ ಆಸುಪಾಸಿನಲ್ಲಿ ಇರಲಿದೆ ಎಂಬ ಅಂದಾಜಿದೆ. ಆದ್ದರಿಂದ ಆರೋಗ್ಯ ಕ್ಷೇತ್ರದಲ್ಲಿ ಮೈಸೂರು ಪ್ರಮುಖ ನಗರವಾಗಲಿದೆ. ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮ್ಮೇಳನದ ಅಧ್ಯಕ್ಷ ಎನ್.ಜಿ.ಭರತೇಶ್ ರೆಡ್ಡಿ, ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಸಮ ಕುಲಾಧಿಪತಿ ಡಾ.ಬಿ.ಸುರೇಶ್, ಸಿಐಐ ಮೈಸೂರು ಘಟಕದ ಅಧ್ಯಕ್ಷ ಉತ್ಸವ್ ಅಗರವಾಲ್, ಉಪಾಧ್ಯಕ್ಷೆ ಸವಿತಾ ಮಲ್ಲಪ್ಪ, ಐಎಂಎ ಮೈಸೂರು ಘಟಕದ ಅಧ್ಯಕ್ಷ ಚಂದ್ರಭಾನ್ ಸಿಂಗ್, ಎಂಎಎಚ್ಎನ್ಸಿ –ಡಿ ಅಧ್ಯಕ್ಷ ಜಿ.ಆರ್. ಚಂದ್ರಶೇಖರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-39-1966940847

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.