ಮೈಸೂರು: ‘ಹೃದಯದ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಅರಿವಳಿಕೆ ತಜ್ಞರ ಪಾತ್ರ ದೊಡ್ಡದು’ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಬಿ. ದಿನೇಶ್ ತಿಳಿಸಿದರು.

ಇಲ್ಲಿನ ಜಯದೇವ ಆಸ್ಪತ್ರೆಯಲ್ಲಿ ಕರ್ನಾಟಕ ಚಾಪ್ಟರ್ ಆಫ್ ಐಯಾಕ್ಟ್ (ಐಎಸಿಟಿಎ) ಮತ್ತು ಗ್ಲೋಬಲ್ ಹಾರ್ಟ್ಕೇರ್ ಫೌಂಡೇಷನ್ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಹೃದಯ ಅರಿವಳಿಕೆಯಲ್ಲಿ ನಿರಂತರ ವೈದ್ಯಕೀಯ ಶಿಕ್ಷಣ’ (ಸಿಎಂಇ) ಕುರಿತ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಅರಿವಳಿಕೆ ತಜ್ಞರು ಎಲೆಮರೆ ಕಾಯಿಯಂತೆ 4 ಗೋಡೆಗಳ ಒಳಗೆ ಕೆಲಸ ಮಾಡಿದರೂ ಹೃದಯದ ಶಸ್ತ್ರಚಿಕಿತ್ಸೆಯಲ್ಲಿ ಅವರ ಪಾತ್ರ ತುಂಬಾ ದೊಡ್ಡದಾಗಿದೆ’ ಎಂದರು.

‘ಶಸ್ತ್ರಚಿಕಿತ್ಸೆ ಮಾಡುವಾಗ ಸರ್ಜನ್ಗಳು, ನರ್ಸ್ಗಳು, ಒಟಿ ಟೆಕ್ನೀಷಿಯನ್ಗಳ ಜೊತೆ ಅರಿವಳಿಕೆ ತಜ್ಞರು ನಿರಂತರವಾಗಿ ಸಂಪರ್ಕದಲ್ಲಿದ್ದು, ಸಮನ್ವಯದಿಂದ ಕೆಲಸ ಮಾಡಬೇಕಾಗುತ್ತದೆ.ರೋಗಿಯು ಸಮಸ್ಯೆಯಿಂದ ಹೊರಬಂದು ಗುಣಮುಖರಾಗುವವರೆಗೆ ಗಂಟೆಗಟ್ಟಲೆ ನಿಂತುಕೊಂಡೇ ಕೆಲಸ ನಿರ್ವಹಿಸಬೇಕಾಗುತ್ತದೆ’ ಎಂದು ಹೇಳಿದರು.

8 ಮಂದಿ ನೇಮಕ: ‘ರೋಗಿಯು ಗುಣಮುಖವಾಗುವುದನ್ನು ಆಧುನಿಕ ಎ.ಐ. ಬಳಸಿಕೊಂಡು ನಿಖರವಾಗಿ ತಿಳಿದುಕೊಳ್ಳಬಹುದು’ ಎಂದರು.

‘ದೇಶದಲ್ಲಿ ಇತ್ತೀಚೆಗೆ ಅರಿವಳಿಕೆ ತಜ್ಞರ ಕೊರತೆ ಇದೆ. ನಮ್ಮ ಆಸ್ಪತ್ರೆಯಲ್ಲಿಈ ತಜ್ಞರಿಗೆ ತುಂಬಾ ಪ್ರಾಮುಖ್ಯತೆ ನೀಡಲಾಗಿದೆ. 38 ಮಂದಿ ಡಿ.ಎಂ. ಅರಿವಳಿಕೆ ತಜ್ಞರಿದ್ದು, ಇನ್ನು 8 ಮಂದಿಯನ್ನು ನೇಮಕ ಮಾಡಿಕೊಳ್ಳಬೇಕಾಗಿದೆ’ ಎಂದು ತಿಳಿಸಿದರು.

‘ಇಂತಹ ಸಮ್ಮೇಳನಗಳು ಪ್ರತಿ ವರ್ಷ ನಡೆಯಬೇಕು. ಜಯದೇವ ಆಸ್ಪತ್ರೆ ವತಿಯಿಂದ ಎಲ್ಲಾ ಸಹಕಾರ ನೀಡಲಾಗುವುದು’ ಎಂದರು.

ಡಾ.ರಂಜಿತ್ ಕಾರ್ತಿಕೇಯನ್, ಡಾ.ಮುರಳೀಧರ್, ಡಾ.ಮಂಜುನಾಥ್, ಡಾ.ಪರಿಮಳಾ, ಡಾ.ಪ್ರಭಾಕರ್, ಡಾ.ಮಂಜುಳಾ, ಸಂಘಟನಾ ಕಾರ್ಯದರ್ಶಿ ಡಾ.ಕೆ.ಎಸ್. ಭಾರತಿ, ಡಾ.ನಂಜಪ್ಪ, ಡಾ.ಹರ್ಷಬಸಪ್ಪ, ಡಾ.ರಜಿತ್, ಡಾ.ಜಯಶೀಲನ್, ಪಿಆರ್ಒಗಳಾದ ವಾಣಿ ಮೋಹನ್, ಚಂಪಕಮಾಲ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-39-1891685289

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.