ಕೆ.ಆರ್.ನಗರ: ತಾಲ್ಲೂಕಿನ ಹೆಬ್ಬಾಳು ಕೊಪ್ಪಲು ಗ್ರಾಮದಲ್ಲಿ ಗ್ರಾಮದೇವತೆ ಬಸವೇಶ್ವರ ಹಬ್ಬ ಮತ್ತು ಓಕುಳಿ ಹಬ್ಬವನ್ನು ಸೋಮವಾರ ವಿಜೃಂಭಣೆಯಿಂದ ಆಚರಿಸಲಾಯಿತು.

ಎರಡು ದಿವಸ ಈ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದ್ದು, ಎರಡನೇ ದಿನವಾದ ಸೋಮವಾರ ಗ್ರಾಮದಲ್ಲಿರುವ 200 ವರ್ಷಗಳ ಇತಿಹಾಸವಿರುವ ಬಸವೇಶ್ವರ ದೇವಾಲಯದಲ್ಲಿ ವಿಶೇಷ ಹೋಮ ಹವನಗಳು ನಡೆದವು.

ನಂತರ ಗ್ರಾಮದ ಸಮೀಪವೇ ಹರಿಯುವ ನಾಲೆಯಿಂದ ಗ್ರಾಮದ ಮಹಿಳೆಯರು, ಹೆಣ್ಣುಮಕ್ಕಳು ವಿವಿಧ ಕಲಾ ತಂಡದೊಂದಿಗೆ ತೆರಳಿ ಕಳಸಗಳನ್ನು ತರಲಾಯಿತು.

ದಾರಿಯುದ್ದಕ್ಕೂ ಇಕ್ಕೆಲಗಳಲ್ಲಿ ಗ್ರಾಮಸ್ಥರು ಕಳಸಗಳನ್ನು ವೀಕ್ಷಿಸಿದರು. ಮಹಿಳೆಯರು, ಮಕ್ಕಳು ಉತ್ಸುಕತೆಯಿಂದ ಭಾಗವಹಿಸಿದ್ದುದು ಗಮನ ಸೆಳೆಯಿತು.

ಮೆರವಣಿಗೆ: ಓಕುಳಿಯ ಬಳಿಕ ಕೀಲುಕುಣಿತ, ವೀರಗಾಸೆ, ಗಾರುಡಿ ಗೊಂಬೆ, ದೇವರ ಕುಣಿತ, ಮರಗಾಲು ಕುಣಿತ, ಮಂಗಳವಾದ್ಯ, ತಮಟೆ, ನಗಾರಿ, ಮಂಗಳಮುಖಿಯರ ನೃತ್ಯ, ಅರೇಹಳ್ಳಿ ಯುವಕರ ವೀರಗಾಸೆ ತಂಡ ಸೇರಿದಂತೆ ಹಲವಾರು ಜಾನಪದ ಕಲಾ ತಂಡಗಳು ಮನಸೂರೆಗೊಂಡವು. ವಿವಿಧ ವೇಷಭೂಷಣ ತೊಟ್ಟು ವಚನಗಳನ್ನು ಹಾಡಿನ ಮೂಲಕ ಹೇಳುತ್ತಾ ವಿವಿಧ ಕಲಾವಿದರು ನೃತ್ಯ ಮಾಡಿದರು.

ಡಿಜೆ ಸದ್ದಿಗೆ ಗ್ರಾಮದ ಯುವಕರು ಕುಣಿದು ಕುಪ್ಪಳಿಸಿದರು. ಹೆಣ್ಣುಮಕ್ಕಳು ಸಹ ಹೆಜ್ಜೆ ಹಾಕಿ ಗಮನ ಸೆಳೆದರು. ಹಬ್ಬದ ಅಂಗವಾಗಿ ದೇವಾಲಯವನ್ನು ಮತ್ತು ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

ದಾರಿಯುದ್ದಕ್ಕೂ ತಳಿರು ತೋರಣಗಳು, ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿಗಳು ರಾರಾಜಿಸಿದವು. ಮಹಿಳೆಯರೂ ಪರಸ್ಪರ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವೇಶ್ವರ ವಿಗ್ರಹವನ್ನು ಮೆರವಣಿಗೆ ಮಾಡಲಾಯಿತು. ಸಂಜೆಯಾಗುತ್ತಿದ್ದಂತೆ ಹೋಳಿ ನಡೆಯಿತು. ಗ್ರಾಮಸ್ಥರೆಲ್ಲರೂ ಉತ್ಸುಕತೆಯಿಂದ ಹೋಳಿಯಲ್ಲಿ ಭಾಗವಹಿಸಿ ಹಬ್ಬಕ್ಕೆ ತೆರೆ ಎಳೆದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-38-828013819

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.