ಮೈಸೂರು: ‘ಸನಾತನ ಹಿಂದೂ ಧರ್ಮದ ಪ್ರಚಾರ ನಿರಂತರವಾಗಿ ನಡೆಯಬೇಕು. ಅದನ್ನು ಶ್ರೀಕೃಷ್ಣ ಮಿತ್ರ ಮಂಡಳಿಯು ಕಳೆದ 50 ವರ್ಷದಿಂದ ವೈಭವದಿಂದ ನಡೆಸಿಕೊಂಡು ಬಂದಿದೆ’ ಎಂದು ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಶ್ಲಾಘಿಸಿದರು.

ಇಲ್ಲಿನ ಸರಸ್ವತಿಪುರಂನ ಕೃಷ್ಣಧಾಮ ದಲ್ಲಿ ಸೋಮವಾರ ಆರಂಭವಾದ ‘ಶ್ರೀಕೃಷ್ಣ ಮಿತ್ರ ಮಂಡಳಿ’ಯ ಸುವರ್ಣ ಸಂಭ್ರಮದಲ್ಲಿ ಪತ್ರಕರ್ತ ರವೀಂದ್ರ ಜೋಶಿ ಅವರಿಗೆ ‘ಶ್ರೀಕೃಷ್ಣಾನುಗ್ರಹ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

‘ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಅವರ ಸ್ಫೂರ್ತಿಯಲ್ಲಿ ಕೆಲಸ ಮಾಡಿರುವ ಮಂಡಳಿಯು ಧರ್ಮ ಸಂರಕ್ಷಣೆಗೆ ಮೈಯೊಡ್ಡಿ ನಿಂತಿದೆ. ಮುಂದಿನ 50 ವರ್ಷವೂ ದೇಶ- ಧರ್ಮ ಭಕ್ತಿಯ ಕೆಲಸ ಮಾಡಲಿ’ ಎಂದು ಆಶಿಸಿದರು.

‘ದೇಶಭಕ್ತಿ ಮರೆತಿದ್ದೇವೆ. ಆರ್ಥಿಕ ಸುಭದ್ರತೆಗಾಗಿ ಅನಗತ್ಯ ಖರ್ಚು ಮಾಡುವುದನ್ನು ಕಡಿಮೆ ಮಾಡಬೇಕು. ಪ್ರಯಾಣ ಹಾಗೂ ಚಿನ್ನ ಖರೀದಿಯನ್ನು ಮುಂದೂಡಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಾತನ್ನು ಪಾಲಿಸಬೇಕು’ ಎಂದರು.

ಆದರ್ಶ ಪಾಲಿಸಿ: ‘ಸುವರ್ಣಮಯ ಶ್ರೀಲಂಕಾವನ್ನು ಗೆದ್ದ ರಾಮ ಅಲ್ಲಿಯೇ ಇರಬಹುದಿತ್ತು. ಆದರೆ, ಹೆತ್ತ ತಾಯಿ, ಹುಟ್ಟಿದ ನೆಲ ಸ್ವರ್ಗಕ್ಕಿಂತಲು ಮಿಗಿಲೆಂದು ಲಕ್ಷ್ಮಣನಿಗೆ ಹೇಳಿ ಮರಳಿದ. ರಾಮನ ಆದರ್ಶವನ್ನು ನಾವು ಪಾಲಿಸಬೇಕು’ ಎಂದು ಸ್ವಾಮೀಜಿ ಹೇಳಿದರು.

ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ‘ಕೃಷ್ಣನಲ್ಲಿ ಕೆಳಗೆ ಬಿದ್ದವರನ್ನು ಮೇಲೆತ್ತುವ ಆಕರ್ಷಣ ಶಕ್ತಿಯಿತ್ತು. ಜರಾಸಂಧ, ನರಕಾಸುರರನ್ನು ಸಂಹರಿಸಿದರೂ ಅವರ ವಂಶದವರಿಗೆ ರಾಜ್ಯ ಮರಳಿಸಿದ. ಅವನಿಗೆ ಲೋಭದ ದೃಷ್ಟಿ ಇರಲಿಲ್ಲ; ಧರ್ಮದೃಷ್ಟಿಯಿತ್ತು. ಕೃಷ್ಣನನ್ನು ನೆನೆಯುತ್ತಲೇ ದೇಶ ರಕ್ಷಣೆ ಮಾಡಬೇಕು. ಸಹಕಾರ ತತ್ವದಲ್ಲಿ ಅಭಿವೃದ್ಧಿ ಸಾಧಿಸಬೇಕು’ ಎಂದರು.

ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ‘ಸನಾತನ ಧರ್ಮದ ನಂಬಿಕೆಗಳ ಮೇಲೆ ಕೆಲ ದುಷ್ಟಶಕ್ತಿಗಳು ಮೊದಲಿನಿಂದಲೂ ಗದಾಪ್ರಹಾರ ನಡೆಸಿವೆ. ತಿರುಪತಿ, ಶಬರಿಮಲೆ, ಧರ್ಮಸ್ಥಳ ಕ್ಷೇತ್ರದ ಮೇಲೆ ಅಪಚಾರ ಮಾಡಿವೆ. ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳ ಜನಿವಾರ ತೆಗೆಸಲಾಗಿದೆ. ಧರ್ಮದ ಉಳಿವಿಗೆ ಒಂದಾಗಬೇಕು’ ಎಂದರು.

ಎಂ.ಎಸ್.ಕೀರ್ತನಾ ಪ್ರಾರ್ಥನಾ ಗೀತೆ ಹಾಡಿದರು. ಮಂಡಳಿಯ ಅಧ್ಯಕ್ಷ ಎನ್.ಗೋಪಾಲಕೃಷ್ಣ, ಉಪಾಧ್ಯಕ್ಷರಾದ ರವಿಶಾಸ್ತ್ರಿ, ಪಿ.ಎಸ್.ಶೇಖರ್, ಸದಸ್ಯರಾದ ಪಿ.ಜಯರಾಮ ಭಟ್ , ಕೆ.ವಿ.ಶ್ರೀಧರ, ಟಿ.ಜಿ.ಗುರುಪ್ರಸಾದ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-39-1448475312

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.