ಮೈಸೂರು: ‘ತಾಲ್ಲೂಕಿನ ವರುಣ ಹೋಬಳಿಯ ಗುಡುಮಾದನಹಳ್ಳಿ ಬಳಿ ₹100 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಆಸ್ಪತ್ರೆಯು ಉದ್ದೇಶಿತ ಭೂಮಿಯಲ್ಲಿಯೇ ತ್ವರಿತವಾಗಿ ಪೂರ್ಣಗೊಂಡು, ಸಾರ್ವಜನಿಕರಿಗೆ ಸೇವೆ ಒದಗಿಸಬೇಕು’ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ್ ಬಣ) ಸದಸ್ಯ ಗೋವಿಂದರಾಜು ಒತ್ತಾಯಿಸಿದರು.

ಈಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಮಾರು 20 ಎಕರೆ ಸರ್ಕಾರಿ ಭೂಮಿಯನ್ನು ಯೋಜನೆಗೆ ಬಳಸಲಾಗಿದೆ. ವಿಮಾನ ನಿಲ್ದಾಣ, ಹೊರವರ್ತುಲ ರಸ್ತೆಗೆ ಸಮೀಪದ ಈ ಜಾಗವು ಸ್ಥಳೀಯರಿಗೆ ಮಾತ್ರವಲ್ಲದೆ ತಮಿಳುನಾಡು, ಕೇರಳ ಭಾಗದ ರೋಗಿಗಳಿಗೂ ಅನುಕೂಲವಾಗಲಿದೆ. ಇಂಥ ಯೋಜನೆಯನ್ನು ಭೂವ್ಯಾಜ್ಯದೊಂದಿಗೆ ತಳುಕು ಹಾಕಲು ಕೆಲವರು ಪ್ರಯತ್ನಿಸುತ್ತಿರುವುದು ಖಂಡನೀಯ’ ಎಂದರು.

‘ಸ್ಪಷ್ಟವಾಗಿ ಸರ್ಕಾರಿ ಭೂಮಿಯಾಗಿದ್ದರೂ, ಕೆಲವರು ಯಾವುದೇ ದಾಖಲೆಗಳಿಲ್ಲದೇ ಈ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದು, ರೈತ ಮುಖಂಡರಿಗೂ ತಪ್ಪು ಮಾಹಿತಿ ನೀಡಿ ಹೋರಾಟ ಆಯೋಜಿಸುತ್ತಿದ್ದಾರೆ. ಯೋಜನೆಗೆ ಹಿನ್ನಡೆ ಮಾಡಲು ಮುಂದಾಗಿದ್ದಾರೆ. ನಿಜಕ್ಕೂ ನಷ್ಟ ಹೊಂದುವವರಿದ್ದರೆ ಸೂಕ್ತ ವೇದಿಕೆಯಲ್ಲಿ ಪರಿಹಾರ ಪಡೆಯಬೇಕು. ರೈತ ಮುಖಂಡರಿಗೂ ಸಂಘಟನೆಯಿಂದ ಈ ಬಗ್ಗೆ ಮನವರಿಕೆ ಮಾಡಲಾಗುವುದು’ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರಾದ ರಾಜಣ್ಣ ಇಟ್ನ, ಕೃಷ್ಣ ಕೊಳಘಟ್ಟ, ಸುರೇಶ್ ಯರಗನಹಳ್ಳಿ, ಜಿಲ್ಲಾ ಖಜಾಂಚಿ ಪುಟ್ಟಸ್ವಾಮಿ ದೇವರಸನಹಳ್ಳಿ, ಮುಖಂಡರಾದ ನಾಗರಾಜ ಬೆಲವತ್ತ, ಸೋಮು ಅಶೋಕಪುರಂ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-39-1771197774

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.