ಹುಣಸೂರು: ನಗರ ಸೇರಿದಂತೆ ಸುತ್ತಮುತ್ತಲಿನಲ್ಲಿ ಶುಕ್ರವಾರ ಸಂಜೆ ಸತತವಾಗಿ ಎರಡು ಗಂಟೆ ಗುಡುಗು ಸಿಡಿಲಿನಿಂದ ಕೂಡಿದ ಭಾರಿ ಮಳೆಯಾಗಿದ್ದು, ಹಲವು ಪ್ರದೇಶದಲ್ಲಿ ಹಾನಿ ಮಾಡಿದೆ.

ನಗರದ ಹಳೆ ಮೈಸೂರು– ಹುಣಸೂರು ಮುಖ್ಯ ರಸ್ತೆಯ ಕಲ್ಪತರು ವೃತ್ತದ ಬಳಿ ಮರದ ಕೊಂಬೆ ತುಂಡಾಗಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು ಕಾರು ಜಕಂ ಗೊಂಡಿದೆ. ಯಾರಿಗೂ ಅಪಾಯವಾಗಿಲ್ಲ. ಹೌಸಿಂಗ್ ಬೋರ್ಡ್ ಕಾಲೊನಿ, ಎನ್ಎಸ್ ತಿಟ್ಟು ಮತ್ತು ಹಾಳಗೆರೆ ಭಾಗದಲ್ಲಿ ಗಾಳಿ ಮಳೆಗೆ ಒಟ್ಟು 10 ವಿದ್ಯುತ್ ಕಂಬಗಳು ಉರುಳಿವೆ.

ಗ್ರಾಮೀಣ ಭಾಗದ ಕಿರಿಜಾಜಿ, ಬನ್ನಿಕುಪ್ಪೆ ಭಾಗದಲ್ಲಿ 6 ವಿದ್ಯುತ್ ಕಂಬಗಳು ಉರುಳಿದ್ದು ವಿದ್ಯುತ್ ವ್ಯತ್ಯಯವಾಗಿದೆ. ಕಟ್ಟೆಮಳಲವಾಡಿ ಗ್ರಾಮದಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಸೂರ್ಯನಾರಾಯಣ ಶೆಟ್ಟಿ ಅವರಿಗೆ ಸೇರಿದ ಹೊಲದಲ್ಲಿ ಮಣ್ಣು ಕೊಚ್ಚಿ ಹೋಗಿದೆ ಎಂದು ಸ್ಥಳಿಯ ನಿವಾಸಿ ಕಿರಣ್ ಕುಮಾರ್ ಮಾಹಿತಿ ನೀಡಿದ್ದಾರೆ.

ಆಕ್ರೋಶ: ಕಟ್ಟೆಮಳಲವಾಡಿ ಗ್ರಾಮದ ನಂದಿ ವೃತ್ತದ ಬಳಿ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿದ್ದು, ಸರಿಪಡಿಸುವಂತೆ ಪಂಚಾಯಿತಿಯನ್ನು ಹಲವು ಬಾರಿ ಮನವಿ ಮಾಡಿದ್ದರೂ ಕ್ರಮ ಕೈಗೊಳ್ಳದ ಪರಿಣಾಮ ಮಳೆಗಾಲದಲ್ಲಿ ಸಮಸ್ಯೆ ಎದುರಿಸಬೇಕಾಗಿದೆ. ಈಗಲಾದರೂ ಚರಂಡಿ ಸಮರ್ಪಕವಾಗಿ ನಿರ್ಮಿಸಬೇಕು ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಕೃಷಿಗೆ ಉತ್ತಮ: ಕೊಳವೆ ಬಾವಿ ನೀರಿಗೆ ಈಗಾಗಲೇ ತಂಬಾಕು ನಾಟಿ ಮಾಡಿರುವ ರೈತರು ಮಳೆಗಾಗಿ ಹಪಹಪಿಸುತ್ತಿದ್ದರು. ಇಂದು ಬಿದ್ದ ಮಳೆಯಿಂದಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ತಂಬಾಕು ನಾಟಿ ಪ್ರಕ್ರಿಯೆಗೆ ಹದ ಮಾಡಿಕೊಂಡಿರುವ ರೈತರು ನಾಟಿ ಪ್ರಕ್ರಿಯೆಗೆ ಸಿದ್ಧತೆ ನಡೆಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-38-1796747448

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.