ಹುಣಸೂರು (ಮೈಸೂರು ಜಿಲ್ಲೆ): ಅಸ್ಪೃಶ್ಯತೆ ನಿರ್ಮೂಲನೆಗಾಗಿ ನಗರದ ಬ್ರಾಹ್ಮಣರ ಬೀದಿಯಲ್ಲಿರುವ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ದಲಿತರೊಂದಿಗೆ ಸಹಪಂಕ್ತಿ ಭೋಜನವನ್ನು ಬ್ರಾಹ್ಮಣ ಸಮಾಜದಿಂದ ಹಮ್ಮಿಕೊಳ್ಳಲಾಯಿತು.

ಬ್ರಾಹ್ಮಣರ ಬೀದಿಯ ಗುರುರಾಜ್ ಕುಟುಂಬ ಹಾಗೂ ಇತರ ಪ್ರಮುಖರು ದೇವಸ್ಥಾನದ ಆವರಣಕ್ಕೆ ಸೀಮಿತವಾಗಿದ್ದ ದಲಿತರನ್ನು ದೇವಾಲಯದ ಒಳಪ್ರವೇಶ ಮಾಡಿಸಿ ಮಂಗಳಾರತಿಯನ್ನು ಕೊಟ್ಟು ಸಹಪಂಕ್ತಿ ಭೋಜನಕ್ಕೆ ಆಹ್ವಾನಿಸಿದರು.

ದೇವಸ್ಥಾನದ ಆಡಳಿತ ಮಂಡಳಿ, ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ತಾಲ್ಲೂಕು ಆಡಳಿತ ಸಾಕ್ಷಿಯಾಯಿತು. ಬ್ರಾಹ್ಮಣರು ಖಾದ್ಯಗಳನ್ನು ತಯಾರಿಸಿದರೆ, ದಲಿತ ಮುಖಂಡ ಊಟವನ್ನು ಬಡಿಸಿದರು.

ತಹಶೀಲ್ದಾರ್ ಮಂಜುನಾಥ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ‘ಅಸ್ಪೃಶ್ಯತೆ, ಜಾತೀಯತೆಯು ಅನಿಷ್ಟ ಪದ್ಧತಿ. ಸಹಪಂಕ್ತಿ ಭೋಜನದ ಮೂಲಕ ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆಯಲಾಗಿದೆ’ ಎಂದರು.

ಬ್ರಾಹ್ಮಣ ಸಮಾಜದ ಗುರುರಾಜ್ ಮಾತನಾಡಿ, ‘ದಲಿತರನ್ನು ಬ್ರಾಹ್ಮಣ ಮತ್ತು ಇತರ ಸಮುದಾಯವು ದೂರವಿಟ್ಟಿದ್ದರಿಂದ ಕಳೆದುಕೊಂಡಿದ್ದೇ ಜಾಸ್ತಿ. ಸೋದರ ಸಂಬಂಧಿಗಳಾದ ದಲಿತರನ್ನು ಒಟ್ಟುಗೂಡಿಸಿಕೊಂಡು ಅಸ್ಪೃಶ್ಯತೆ ನಿರ್ಮೂಲನೆ ಮಾಡುವುದು ಅವಶ್ಯ’ ಎಂದರು.

ದಸಂಸ ರಾಜ್ಯ ಸಂಘಟನಾ ಸಂಚಾಲಕ ನಿಂಗರಾಜ್ ಮಲ್ಲಾಡಿ ಮಾತನಾಡಿ, ‘ಮುಜರಾಯಿ ದೇವಸ್ಥಾನವಾದರೂ ಸೀಮಿತ ಸ್ಥಳದವರೆಗೆ ಪ್ರವೇಶವಿತ್ತು. ಯಾವ ಸಮುದಾಯು ನಮ್ಮನ್ನು ದೂರವಿಟ್ಟಿತ್ತೋ ಅದೇ ಸಮುದಾಯದ ಪ್ರಗತಿಪರರು ಇಂದು ದೇಗುಲಕ್ಕೆ ಪ್ರವೇಶ ಕಲ್ಪಿಸಿ, ಸಹಪಂಕ್ತಿ ಭೋಜನ ಮಾಡಿಸುತ್ತಿರುವುದು ಆಶ್ಚರ್ಯ ತಂದಿದೆ, ಆತ್ಮ ಗೌರವವನ್ನೂ ಹೆಚ್ಚಿಸಿದೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-51-808273775

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.