ಹುಣಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲೇ ಹಾಡಿ ಜನರು 3 ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೇ ಜೀವನ ನಡೆಸುತ್ತಿದ್ದಾರೆ.

ಇಡೀ ರಾಜ್ಯದಲ್ಲಿ ಗೃಹ ಜ್ಯೋತಿ ಗ್ಯಾರಂಟಿ ಇದ್ದರೂ ತಾಲ್ಲೂಕಿನ ಮಾದಯ್ಯನಕಟ್ಟೆ ಹಾಡಿಯ ಗಿರಿಜನರಿಗೆ ಮಾತ್ರ ಕತ್ತಲೆಯೇ ಬದುಕಿನ ಭಾಗವಾಗಿದೆ. 40 ಕುಟುಂಬಗಳ 300ಕ್ಕೂ ಹೆಚ್ಚು ಜನರು ವಿದ್ಯುತ್ ಇಲ್ಲದೇ ಸಂಕಷ್ಟಕ್ಕೀಡಾಗಿದ್ದಾರೆ.

ಮೂರು ವರ್ಷಗಳಿಂದ ವಿದ್ಯುತ್ ಇಲ್ಲದೆ ಎಣ್ಣೆ ದೀಪಕ್ಕೆ ಮೊರೆ ಹೋಗಿದ್ದು, ಮಕ್ಕಳು ಕತ್ತಲಾಗುತ್ತಿದ್ದಂತೆ ಪಠ್ಯ ಚಟುವಟಿಕೆಗೆ ಪೂರ್ಣ ವಿರಾಮ ಹೇರಬೇಕಿದೆ.

ಮೂರು ವರ್ಷಗಳ ಹಿಂದೆ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂದು ಹಾಡಿಯ ಎಲ್ಲ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಆ ಬಳಿಕ ವಿದ್ಯುತ್ ಸಂಪರ್ಕ ನೀಡುವ ಪ್ರಯತ್ನವೇ ನಡೆದಿಲ್ಲ. ಸಾಮಾಜಿಕ ಧ್ವನಿ ಇಲ್ಲದ ಇವರತ್ತ ಗ್ಯಾರಂಟಿ ಯೋಜನೆಯೂ ಸುಳಿದಿಲ್ಲ.

‘ಹಾಡಿಯ ಮನೆಗಳಿಗೆ ಭಾಗ್ಯಜ್ಯೋತಿ ಯೋಜನೆಯಲ್ಲಿ ಒಂದು ಬಲ್ಬ್ ಹಾಕಲಾಗಿತ್ತು. ಅದಕ್ಕೆ ₹300ರಿಂದ ₹400 ಬಿಲ್ ನೀಡಿದ್ದು ಇಷ್ಟೊಂದು ಹಣ ತರುವುದಾದರೂ ಎಲ್ಲಿಂದ ? ಆಗ, ಮನೆಗಳಿಗೆ ವಿದ್ಯುತ್ ಕಡಿತಗೊಳಿಸುವ ಜೊತೆಗೆ ಕುಡಿಯುವ ನೀರಿಗೂ ವಿದ್ಯುತ್ ಕಡಿತ ಮಾಡಲಾಯಿತು’ ಎನ್ನುತ್ತಾರೆ ಹಾಡಿಯ ನಿವಾಸಿ ಮಣಿ.

ಅರ್ಜಿ ಸಲ್ಲಿಸಿದರೂ ಪ್ರಯೋಜನವಿಲ್ಲ: ಹಾಡಿಯ 20 ಮಕ್ಕಳು ಶಾಲೆಗೆ ಹೋಗುತ್ತಿದ್ದು, ಈ ಮಕ್ಕಳ ಓದು ಬರಹಕ್ಕೆ ಮೂರು ವರ್ಷಗಳಿಂದ ಸೂರ್ಯನ ಬೆಳಕು ಮಾತ್ರ ಆಧಾರವಾಗಿದೆ. ಗಿರಿಜನ ಕಲ್ಯಾಣ ಇಲಾಖೆಗೆ 3 ತಿಂಗಳ ಹಿಂದೆಯೇ ವಿದ್ಯುತ್ ಸಮಸ್ಯೆ ಕುರಿತ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಹಾಡಿಯ ಮುಖಂಡ ರಾಜು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-38-1049356233

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.