ಮೈಸೂರು: ಇಲ್ಲಿನ ಅಶೋಕಪುರಂನ ಅಂಬೇಡ್ಕರ್ ಉದ್ಯಾನದಲ್ಲಿ ಏ.14ರಂದು ಲೇಖಕ ಕೃಷ್ಣಮೂರ್ತಿ ಚಮರಂ ನಿರ್ದೇಶನದ ‘ಇವನಾರವ’ ಚಲನಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ.

ನಿರ್ದೇಶಕ ಟಿ.ಎನ್.ಸೀತಾರಾಮ್ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡುವರು. ಎಸ್.ಮಹೇಂದರ್ ಮೊದಲ ದೃಶ್ಯ ನಿರ್ದೇಶನ ಮಾಡುವರು. ಮಾಜಿ ಮೇಯರ್ ಪುರುಷೋತ್ತಮ ಕ್ಯಾಮೆರಾ ಆನ್ ಮಾಡುವರು.

ಕಾಂಗ್ರೆಸ್ ಮುಖಂಡ ಎಚ್.ವಿ.ರಾಜೀವ್, ಎಂ.ಪ್ರೇಮ ಬೋಧಿ, ಹೋರಾಟಗಾರ ಅಹಿಂದ ಜವರಪ್ಪ ಭಾಗವಹಿಸುವರು.

‘ಈ ಹಿಂದೆ ಪ್ರೇಮಂ ಶರಣಂ ಗಚ್ಚಾಮಿ, ಭಾರತದ ಪ್ರಜೆಗಳಾದ ನಾವು, ಊಟಿ ಚಲನಚಿತ್ರಗಳನ್ನು ನಿರ್ದೇಶಿಸಿದ್ದೆ. ಜನ ಮೆಚ್ಚುಗೆ ಗಳಿಸಿರುವ ಇವು ಹಲವು ಪ್ರಶಸ್ತಿಗಳಿಗೆ ಭಾಜನವಾಗಿದ್ದವು. ಈಗಿನ ಚಿತ್ರದ ಶೀರ್ಷಿಕೆಯನ್ನು ಲೇಖಕ ಬರಗೂರು ರಾಮಚಂದ್ರಪ್ಪ ಬಿಡುಗಡೆ ಮಾಡಿದ್ದಾರೆ’ ಎಂದು ಕೃಷ್ಣಮೂರ್ತಿ ಚಮರಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.