ಮೈಸೂರು: ಘಮ್ಮೆನ್ನುವ ಬಗೆಬಗೆಯ, ಬಹು ವರ್ಣದ ಹಲಸು, ಹಲಸಿನಿಂದಲೇ ತಯಾರಿಸಿದ ವೈವಿಧ್ಯಮಯ ಖಾದ್ಯ... ಹೀಗೆ ನಂಜರಾಜ ಬಹದ್ದೂರ್ ಛತ್ರ ಶನಿವಾರ ಹಲಸುಮಯವಾಗಿತ್ತು.

ಸಹಜ ಸಮೃದ್ಧ, ದೇಸಿ ಸೀಡ್ ಪ್ರೊಡ್ಯೂಸರ್ ಕಂಪನಿ, ತೋಟಗಾರಿಕಾ ಇಲಾಖೆ, ಕಿಸಾನ್ ಮಾಲ್ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನಗಳ ಹಲಸಿನ ಹಬ್ಬಕ್ಕೆ ಶನಿವಾರ ಚಾಲನೆ ದೊರೆತಿದ್ದು, ಹತ್ತು ಹಲವು ಹಲಸಿನ ತಳಿಗಳ ಪ್ರದರ್ಶನದ ಜೊತೆಗೆ ಮಾರಾಟವೂ ಇತ್ತು. ಮೈಸೂರು, ಕೊಳ್ಳೇಗಾಲ, ಪಿರಿಯಾಪಟ್ಟಣ, ದೊಡ್ಡಬಳ್ಳಾಪುರ, ನಾಗರಹೊಳೆ, ತುಮಕೂರು ಮೊದಲಾದ ಭಾಗಗಳಿಂದ ರೈತರು ಹಲಸು ಹೊತ್ತು ತಂದಿದ್ದರು. ಜೊತೆಗೆ ಮಾವಿನ ಮಾರಾಟವೂ ನಡೆಯಿತು.

ರುದ್ರಾಕ್ಷಿ ಬಕ್ಕೆ, ಸಿಂಧೂರ, ಸರ್ವ ಋತು, ಅಂಟು ರಹಿತ, ನಾಗಚಂದ್ರ, ರಾಮಚಂದ್ರ ಸೇರಿದಂತೆ ಹಲಸಿನ ವಿವಿಧ ತಳಿಗಳು ಗಮನ ಸೆಳೆದವು. ಕೆಂಪು ಹಲಸಿನ ತಳಿಗಳಾದ `ಸಿದ್ದು’ ಮತ್ತು ‘ಶಂಕರ’ ಹಲಸು ಜನಾಕರ್ಷಿಸಿದವು. ಸುಲಿದ ಹಲಸಿನ ತೊಳೆಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಹಳದಿ ವರ್ಣದ ಹಣ್ಣು 250 ಗ್ರಾಂಗೆ ₹50 ಹಾಗೂ ಕೆಂಪು ವರ್ಣದ ಹಣ್ಣು ₹70ರಂತೆ ವ್ಯಾಪಾರವಾಯಿತು.

ಹಲಸಿನ ಹೋಳಿಗೆ, ಐಸ್ಕ್ರೀಂ, ಚಿಪ್ಸ್, ಚಾಕೊಲೇಟ್, ಹಪ್ಪಳ, ಹಲ್ವಾ, ಕಬಾಬ್, ಹಲಸಿನ ಎಲೆಯಿಂದ ಕಟ್ಟಿದ ಕೊಟ್ಟೆಕಡುಬು, ಹಲಸಿನ ವಡೆ, ದೋಸೆ, ಪಲ್ಯ ಹಾಗೂ ಬಿರಿಯಾನಿ ಸೇರಿದಂತೆ ಹಲವು ಬಗೆಯ ತಿನಿಸುಗಳನ್ನು ಗ್ರಾಹಕರು ಆಸ್ವಾದಿಸಿದರು. ವಿವಿಧ ಮಳಿಗೆಗಳಲ್ಲಿ ಮಾರಾಟ ನಡೆದಿತ್ತು. ಜೊತೆಗೆ ತೋಟಗಾರಿಕೆ ಸಸಿಗಳ ಮಾರಾಟವೂ ಇತ್ತು.

ಮೇಳಕ್ಕೆ ಬಂದ ಗ್ರಾಹಕರು ಮಾವಿನ ರುಚಿಯನ್ನೂ ನೋಡಿದರು. ರಸಪುರಿ, ಬಾದಾಮಿ, ಮಲ್ಲಿಕಾ, ಬೈಗನ್ಪಲ್ಲಿ, ದಶೇರಿ, ಸಕ್ಕರೆಗುತ್ತಿ ಸೇರಿದಂತೆ ನೈಸರ್ಗಿಕವಾಗಿ ಮಾಗಿಸಿದ ಹತ್ತಕ್ಕೂ ಹೆಚ್ಚು ತಳಿಗಳ ಮಾವು ಮಾರಾಟವಾಯಿತು.ಇಂದು ವಿವಿಧ ಸ್ಪರ್ಧೆ: ಮೇಳದಲ್ಲಿ ಭಾನುವಾರ ಮಧ್ಯಾಹ್ನ 2ಕ್ಕೆ `ಹಲಸು ತಿನ್ನುವ ಸ್ಪರ್ಧೆ' ನಡೆಯಲಿದೆ.

ಅದಕ್ಕೂ ಮುನ್ನ ಬೆಳಿಗ್ಗೆ 10.30ಕ್ಕೆ ಮಕ್ಕಳಿಗಾಗಿ ಹಲಸು ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿದೆ. ಜೊತೆಗೆ ಹಲಸಿನ ಹಣ್ಣು ತೂಕ ಊಹಿಸುವ, ಹಲಸು ಎತ್ತುವ ಸ್ಪರ್ಧೆಗಳು ಸಹ ಇರಲಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-37-363855724

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.