ಮೈಸೂರು: ‘ಜೈನ ಸಂಸ್ಕೃತಿಯ ತಾತ್ವಿಕತೆ, ಪ್ರಾದೇಶಿಕ ಇತಿಹಾಸ, ಸಾಹಿತ್ಯದ ನೆಲೆ ಪರಿಚಯಿಸುವಲ್ಲಿ ಕೃತಿ ಉತ್ತಮವಾಗಿ ಮೂಡಿ ಬಂದಿದೆ’ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಪದ್ಮಾಶೇಖರ್ ಹೇಳಿದರು.

ನಗರದ ಶಾಂತಿನಾಥ ಸ್ವಾಮಿ ಬಸದಿಯಲ್ಲಿ ತಾರಾ ಪ್ರಕಾಶನ, ಗಂಗೋತ್ರಿ ಜೈನ್ ಮಿಲನ್ ಸಹಯೋಗದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಎಸ್.ಅರುಣಕುಮಾರಿ ವಿರಚಿತ ‘ಮೈಸೂರು ಜಿಲ್ಲೆಯ ಜೈನಧರ್ಮ ಒಂದು ಸಾಂಸ್ಕೃತಿಕ ಅಧ್ಯಯನ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

‘ಕೃತಿಯಲ್ಲಿನ ವಸ್ತು ವಿಷಯಕ್ಕೆ ತಾರ್ಕಿಕ ಬಲ ತುಂಬುವ ಬೌದ್ಧಿಕ ಎಚ್ಚರ ಕಾಣಬಹುದು. ಯಾವುದೇ ಗೊಂದಲಕ್ಕೆ ಅಸ್ಪದವಿಲ್ಲದೆ ಲೇಖಕರು ವಿಷಯವನ್ನು ಅಚ್ಚುಕಟ್ಟಾಗಿ ಪ್ರತಿಪಾದಿಸಿದ್ದಾರೆ. ಭಾಷಾ ಬಳಕೆ ಸರಳವಾಗಿದ್ದು, ಕೃತಿಗೆ ಗಂಭೀರತೆ ತಂದುಕೊಟ್ಟಿದೆ’ ಎಂದರು.

‘ಲೇಖಕರು ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಜೈನಧರ್ಮದ ಅಸ್ತಿತ್ವ, ಬೆಳವಣಿಗೆ ಮತ್ತು ಪ್ರಭಾವವನ್ನು ಅಳವಾಗಿ ಅಭ್ಯಸಿಸಿರುವುದನ್ನು ಕಾಣಬಹುದು. ಹೀಗಾಗಿ ಕೃತಿಯು ಅತ್ಯಂತ ಸಮಯೋಚಿತ ಹಾಗೂ ಮೌಲ್ಯಯುತವಾದ ಪ್ರಯತ್ನದಿಂದ ಮೂಡಿ ಬಂದಿದೆ’ ಎಂದು ತಿಳಿಸಿದರು.

‘ಭಾರತೀಯ ಪ್ರಮುಖ ಧರ್ಮಗಳಲ್ಲಿ ಜೈನ ಧರ್ಮವೂ ಒಂದಾಗಿದೆ. ಕರ್ನಾಟಕದ ಇತಿಹಾಸ ಪ್ರಾರಂಭ ಆಗುವುದೇ ಜೈನ ಧರ್ಮದಿಂದ ಎನ್ನುವುದು ಯಾರು ಅಲ್ಲಗೆಳೆಯುವಂತಿಲ್ಲ. ಧರ್ಮದ ಕಲ್ಪನೆ, ವ್ಯಾಖ್ಯಾನ ಕೊಡುವಲ್ಲಿ ಪ್ರಮುಖವಾಗಿದ್ದು, ಅಹಿಂಸೆ ಮತ್ತು ಆಧ್ಯಾತ್ಮಿಕ ಶುದ್ಧತೆಯನ್ನು ಜೈನ ಧರ್ಮ ಬೋಧಿಸಿದೆ’ ಎಂದರು.

‘ಇಂದು ಬದುಕಿಗಿಂತ ಹಣ ಮುಖ್ಯವಾಗಿದೆ. ಯಾರಿಗೂ ಲೋಕ ಹಿತ, ಜನ ಹಿತ ಬೇಕಾಗಿಲ್ಲ. ಮತೀಯ ಚೌಕಟ್ಟು ಹಾಕಿಕೊಂಡು ನಡೆಯಲಾಗುತ್ತಿದ್ದು, ಜಾತಿ, ಹಣ ಎರಡೂ ಕಾರಣವಾಗಿದೆ’ ಎಂದು ತಿಳಿಸಿದರು.

ಕೃತಿ ಕುರಿತು ಪ್ರಾಂಶುಪಾಲ ಪಿ.ಬೆಟ್ಟೇಗೌಡ ಮಾತನಾಡಿದರು. ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೈಸೂರು ವಿ.ವಿ ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದ ಅಧ್ಯಕ್ಷೆ ಶಶಿಕಲಾ ಎಸ್.ಡಿ. ಅಧ್ಯಕ್ಷತೆ ವಹಿಸಿದ್ದರು.

ಭಾರತೀಯ ಜೈನ್ ಮಿಲನ್ ಮೈಸೂರು ವಿಭಾಗದ ಗೌರವ ಅಧ್ಯಕ್ಷೆ ಶೀಲಾ ಅನಂತರಾಜು, ಉಪಾಧ್ಯಕ್ಷ ಎನ್.ಪ್ರಸನ್ನಕುಮಾರ್, ಗಂಗೋತ್ರಿ ಜೈನ್ ಮಿಲನ್ ಅಧ್ಯಕ್ಷ ಎಚ್.ಎನ್.ಅನಿಲ್ ಕುಮಾರ್, ದಿಗಂಬರ ಜೈನ ಸಮಾಜ ಅಧ್ಯಕ್ಷ ಸುನಿಲ್ ಕುಮಾರ್, ಪದ್ಮಶ್ರೀ ಜೈನ ಮಹಿಳಾ ಸಮಾಜ ಅಧ್ಯಕ್ಷೆ ನಂದಿನಿ, ಶಾಂತಿನಾಥ ಸೇವಾ ಸಮಿತಿ ಅಧ್ಯಕ್ಷ ಸುರೇಶ್ ಜೈನ್ ಎಸ್.ಬಿ., ತಾರಾ ಪ್ರಿಂಟರ್ಸ್ ಪ್ರಕಾಶಕ ಎಂ.ಎನ್.ಶಶಿಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-38-1364561311

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.