ಮೈಸೂರು: ಇಲ್ಲಿನ ಕೆಆರ್ಎಸ್ ರಸ್ತೆಯಲ್ಲಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ರಾಜ್ಯ ಸರ್ಕಾರದ ನಿರ್ಧಾರದಿಂದ ಹಲವು ಪ್ರಯೋಜನಗಳಿವೆ. ಹೆಚ್ಚಿನ ರೋಗಿಗಳಿಗೆ ಚಿಕಿತ್ಸಾ ಸೇವೆ ದೊರೆಯುವ ಜೊತೆಗೆ ಮತ್ತಷ್ಟು ಮಂದಿಗೆ ಉದ್ಯೋಗದ ಅವಕಾಶವೂ ಆಗಲಿದೆ. ವಿಶೇಷ ಸಂಶೋಧನಾ ಚಟುವಟಿಕೆಯೂ ಸಾಧ್ಯವಾಗಲಿದೆ.

ಪ್ರಸ್ತುತ 400 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನು 600 ಆಸ್ಪತ್ರೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸುವ ಕ್ರಮವು, ಮೈಸೂರು ಸೀಮೆಯ ಜನರಿಗೆ ತಪಾಸಣೆ ಹಾಗೂ ಚಿಕಿತ್ಸೆಗೆ ಸೌಲಭ್ಯಗಳನ್ನು ವಿಸ್ತರಿಸಿದಂತಾಗಲಿದೆ.

ಮೈಸೂರಿನವರೇ ಮುಖ್ಯಮಂತ್ರಿ ಹಾಗೂ ಜಯದೇವ ಹೃದ್ರೋಗ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿರುವುದು ಈ ಆಸ್ಪತ್ರೆಗೆ ‘ಬಲ’ ತಂದುಕೊಟ್ಟಿದೆ. ಮೇಲ್ದರ್ಜೆಗೇರಿಸಲು ₹ 180 ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಅವರು 2026–27ನೇ ಸಾಲಿನ ಬಜೆಟ್ನಲ್ಲಿ ಮಂಡಿಸಿದ್ದಾರೆ. ಇದು ಅನುಷ್ಠಾನಗೊಂಡಲ್ಲಿ, ಆಸ್ಪತ್ರೆಗೆ ಹೊಸ ಚೈತನ್ಯ ದೊರೆಯಲಿದೆ.

ಇಡೀ ಸೀಮೆಗೆ:

ಈ ಆಸ್ಪತ್ರೆಗೆ ಮೈಸೂರು ನಗರ, ಜಿಲ್ಲೆಯೊಂದಿಗೆ ನೆರೆಯ ಚಾಮರಾಜನಗರ, ಕೊಡಗು, ಹಾಸನ ಹಾಗೂ ಮಂಡ್ಯ ಜಿಲ್ಲೆಗಳ ಜನರು ಬರುತ್ತಾರೆ. ಮೈಸೂರು ಹೊರತುಪಡಿಸಿದರೆ ಈ ಭಾಗದಲ್ಲೆಲ್ಲೂ ಹೃದ್ರೋಗ ಚಿಕಿತ್ಸೆಯ ಸರ್ಕಾರಿ ಸಂಸ್ಥೆ ಇಲ್ಲದಿರುವುದು ಕಾರಣ. ಹೀಗಾಗಿ, ಮೈಸೂರಿನ ಜಯದೇವ ಆಸ್ಪತ್ರೆಯು ‘ಪ್ರಾದೇಶಿಕ ಆಸ್ಪತ್ರೆ’ಯಾಗಿ ರೋಗಿಗಳಿಗೆ ಸೇವೆ ನೀಡುತ್ತಿದೆ. ಮೇಲ್ದರ್ಜೆಗೇರುವುದರಿಂದ ಐದು ಜಿಲ್ಲೆಗಳವರಿಗೆ ಅನುಕೂಲ ಆಗಲಿದೆ.

ಈ ಆಸ್ಪತ್ರೆಗೆ ಪ್ರಸ್ತುತ ನಿತ್ಯ 800ರಿಂದ 900ಮಂದಿ ಹೊರರೋಗಿಗಳು, ಸರಾಸರಿ 100 ಮಂದಿ ತುರ್ತು ಚಿಕಿತ್ಸೆಗೆಂದು ಬರುತ್ತಿದ್ದಾರೆ. ಸರಾಸರಿ 60ರಿಂದ 70 ಮಂದಿ ಒಳರೋಗಿಗಳಾಗಿ ದಾಖಲಾದರೆ, ಅಷ್ಟೇ ಸಂಖ್ಯೆಯ ರೋಗಿಗಳು ಬಿಡುಗಡೆ ಹೊಂದುತ್ತಿದ್ದಾರೆ. ನಿತ್ಯ ಸರಾಸರಿ 60ರಿಂದ 70 ಮಂದಿಗೆ ಕ್ಯಾಥ್ಲ್ಯಾಬ್ನಲ್ಲಿ ಆಂಜಿಯೋಗ್ರಾಂ, ಆಂಜಿಯೊಪ್ಲಾಸ್ಟಿ, ಫೇಸ್ಮೇಕರ್ ಹಾಗೂ 4ರಿಂದ 5 ಮಂದಿಗೆ ‘ತೆರೆದ ಹೃದಯ ಶಸ್ತ್ರಚಿಕಿತ್ಸೆ’ ನಡೆಸಲಾಗುತ್ತಿದೆ. ಮೇಲ್ದರ್ಜೆಗೇರಿದರೆ ಶೇ 25ರಷ್ಟು ಸೇವೆಯನ್ನು ವಿಸ್ತರಿಸಬಹುದಾಗಿದೆ ಎನ್ನುತ್ತಾರೆ ವೈದ್ಯರು.

ಪ್ರಸ್ತುತ ವೈದ್ಯರು 100, ನರ್ಸ್ಗಳು 350 ಮಂದಿ ಸೇರಿದಂತೆ 800 ಉದ್ಯೋಗಿಗಳು ಇಲ್ಲಿದ್ದಾರೆ. ಮೇಲ್ದರ್ಜೆಗೇರಿದರೆ ಹೆಚ್ಚುವರಿಯಾಗಿ 20ರಿಂದ 25 ಮಂದಿ ವೈದ್ಯರು, 100 ಮಂದಿ ನರ್ಸ್, ತಲಾ 50 ಮಂದಿ ಗ್ರೂಪ್ ‘ಡಿ’ ಹಾಗೂ ಪ್ಯಾರಾಮೆಡಿಕಲ್ ಸಿಬ್ಬಂದಿ ಬೇಕಾಗುತ್ತಾರೆ ಎಂದು ಅಂದಾಜಿಸಲಾಗಿದೆ.

ದೂರದೃಷ್ಟಿಯ ಕ್ರಮ:

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ.ಕೆ.ಎಸ್. ಸದಾನಂದ, ‘ಮೈಸೂರು ಹೊರತುಪಡಿಸಿದರೆ ಈ ಭಾಗದಲ್ಲೆಲ್ಲೂ ಸರ್ಕಾರಿ ಹೃದ್ರೋಗ ಆಸ್ಪತ್ರೆ ಇಲ್ಲದಿರುವುದರಿಂದ ಎಲ್ಲರೂ ಮೈಸೂರಿಗೇ ಬರುತ್ತಾರೆ. ಈ ನಿಟ್ಟಿನಲ್ಲಿ ಅವರಿಗೆ ನೆರವಾಗಲು, ಮೇಲ್ದರ್ಜೆಗೇರಿಸುವ ಯೋಜನೆಯು ದೂರದೃಷ್ಟಿಯದ್ದಾಗಿದೆ. ಮುಂದಿನ 10 ವರ್ಷಕ್ಕೆ ಇದು ಸಾಕಾಗಲಿದೆ. ಅದಕ್ಕೆ ತಕ್ಕಂತೆ ವೈದ್ಯರು ಹಾಗೂ ಸಿಬ್ಬಂದಿ ಬೇಕಾಗುತ್ತಾರೆ’ ಎಂದು ಹೇಳಿದರು.

‘ಇಲ್ಲೇ ಕೆಲಸ ಮಾಡಿದ್ದ ನಿರ್ದೇಶಕರಾದ ಡಾ.ದಿನೇಶ್ ಅವರಿಗೆ ಇಲ್ಲಿನ ಸಮಸ್ಯೆಗಳು ಗೊತ್ತಿದ್ದರಿಂದ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಬಜೆಟ್ನಲ್ಲಿ ಪ್ರಕಟ ಮಾಡಿಸಿದ್ದಾರೆ. ಹೀಗಾಗಿ, ಮೈಸೂರು ಭಾಗದವರಿಗೆ ಈ ಕ್ರಮವು ಬೋನಸ್ ಸಿಕ್ಕಿದಂತಾಗಿದೆ. ಸಿಎಂ ಹಾಗೂ ನಿರ್ದೇಶಕರ ಕಾಳಜಿ ದೊಡ್ಡದಿದೆ’ ಎಂದು ಹೇಳಿದರು.

ಹೃದ್ರೋಗವು ಜೀವನಶೈಲಿಯಿಂದ ಬರುವಂಥದ್ದು. ಉತ್ತಮ ಜೀವನಶೈಲಿಯಿಂದ ಇದನ್ನು ತಡೆಯಬಹುದು
ಡಾ.ಕೆ.ಎಸ್.ಸದಾನಂದ ಮೆಡಿಕಲ್ ಸೂಪರಿಂಟೆಂಡೆಂಟ್ ಜಯದೇವ ಆಸ್ಪತ್ರೆ ಮೈಸೂರು

ಅಂಕಿ– ಅಂಶ 5 ಈ ಆಸ್ಪತ್ರೆಯಲ್ಲಿ ಸೇವೆ ಪಡೆಯುತ್ತಿರುವ ಜಿಲ್ಲೆಗಳ ಸಂಖ್ಯೆ 400 ಈಗಿರುವ ಹಾಸಿಗೆಗಳ ಸಾಮರ್ಥ್ಯ 100 ಐಸಿಸಿಯುಗೆ ಮೀಸಲಾದ ಹಾಸಿಗೆಗಳು 300 ವಾರ್ಡ್ ಹಾಸಿಗೆಗಳ ಸಂಖ್ಯೆ

ಏಕೆ ಅಗತ್ಯವಿದೆ? ‘ಪ್ರಸ್ತುತ ಹೃದ್ರೋಗಿಗಳ ಸಂಖ್ಯೆ ಜಾಸ್ತಿ ಆಗುತ್ತಿದೆ. ನಮ್ಮಲ್ಲಿನ 400 ಹಾಸಿಗೆಗಳೂ ಬಹುತೇಕ ತುಂಬಿರುತ್ತವೆ. ನಿತ್ಯವೂ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಐಸಿಸಿಯು (ಇಂಟೆನ್ಸಿವ್ ಕಾರ್ಡಿಯಾಕ್ ಕೇರ್ ಯುನಿಟ್)ನಲ್ಲಿ ಹಾಸಿಗೆಗಳು ಸಾಲದೇ ಸ್ಟೆಚರ್ ಸಾಧನದ ಮೇಲೆ ಮಲಗಿಸಿ ಚಿಕಿತ್ಸೆ ನೀಡುವ ಸ್ಥಿತಿ ಇದೆ. ಹೀಗಾಗಿ ಮೇಲ್ದರ್ಜೆಗೇರುವುದು ಬಹಳ ಅಗತ್ಯವಿದೆ’ ಎನ್ನುತ್ತಾರೆ ಡಾ.ಸದಾನಂದ ಅವರು. ‘ಪ್ರಸ್ತುತ ನಮ್ಮಲ್ಲಿರುವ 4 ಕ್ಯಾಥ್ಲ್ಯಾಬ್ ಆಂಜಿಯೊಪ್ಲಾಸ್ಟಿ ಪ್ರಕ್ರಿಯೆಗೆ ಸಾಲದಾಗುತ್ತಿಲ್ಲ. ಇದೆಲ್ಲವನ್ನೂ ಮನಗಂಡು ಬಹಳ ಸ್ವಾಗತಾರ್ಹವಾದ ಕ್ರಮವನ್ನು ಸರ್ಕಾರ ಕೈಗೊಂಡಿದೆ. ಸಬ್ ಸ್ಪೆಷಾಲಿಟಿಗಳಾದ ಮಕ್ಕಳ ಹೃದ್ರೋಗ ಚಿಕಿತ್ಸೆ ವ್ಯಾಸ್ಕ್ಯುಲರ್ ಸರ್ಜರಿ ಎಲೆಕ್ಟ್ರೋ ಫಿಜಿಯಾಲಜಿ ಮೊದಲಾದವುಗಳನ್ನು ನೀಡಲು ಈಗಿರುವ ಆಸ್ಪತ್ರೆಯಲ್ಲಿ ಜಾಗ ಸಾಲುತ್ತಿರಲಿಲ್ಲ. ಮೇಲ್ದರ್ಜೆಗೇರಿ 2 ಹೆಚ್ಚುವರಿ ಕ್ಯಾಥ್ಲ್ಯಾಬ್ ಅಳವಡಿಕೆ ಸಾಧ್ಯವಾದರೆ ಹೆಚ್ಚಿನ ಚಿಕಿತ್ಸೆ ದೊರೆಯಲಿದೆ’ ಎಂದು ಅವರು ಮಾಹಿತಿ ನೀಡಿದರು. ‘ಈಗ ಇರುವ ಕಟ್ಟಡ ಭರ್ತಿಯಾಗಿದೆ. ಹೀಗಾಗಿ ಹೊಂದಿಕೊಂಡಂತೆಯೇ ಇರುವ ಫುಡ್ಕೋರ್ಟ್ ಮೇಲೆ ಬಹುಮಹಡಿ ಕಟ್ಟಡ ಕಟ್ಟಿ ಮುಖ್ಯ ಕಟ್ಟಡಕ್ಕೆ ಸಂಪರ್ಕ ಕಲ್ಪಿಸಲು (ಅನೆಕ್ಸ್ ಕಟ್ಟಡ ಮಾದರಿ) ಅವಕಾಶವಿದೆ. ಅಲ್ಲಿ 200 ಹಾಸಿಗೆಗಳನ್ನು ಹಾಕಬಹುದಾಗಿದೆ’ ಎಂದು ತಿಳಿಸಿದರು.

ಮನವರಿಕೆ ಮಾಡಿಕೊಟ್ಟರು... ಹೋದ ವರ್ಷ ನ.8ರಂದು ಆಸ್ಪತ್ರೆಯಲ್ಲಿ ನಡೆದಿದ್ದ 5ನೇ ವಾರ್ಷಿಕೋತ್ಸವದ ‘ಹೃದಯತರಂಗ’ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿದ ಮಾತನಾಡಿದ್ದ ನಿರ್ದೇಶಕ ಡಾ.ಬಿ.ದಿನೇಶ್ ಅವರು ‘ರೋಗಿಗಳ ಸಂಖ್ಯೆಯು ಪ್ರತಿ ದಿನ ಜಾಸ್ತಿ ಆಗುತ್ತಿರುವುದರಿಂದ ಹೆಚ್ಚುವರಿಯಾಗಿ 200 ಹಾಸಿಗೆಗಳ ಸಾಮರ್ಥ್ಯದ ಕಟ್ಟಡ ನಿರ್ಮಿಸಲು ಚಿಂತನೆ ನಡೆಸಲಾಗಿದೆ’ ಎಂದು ತಿಳಿಸಿದ್ದರು. ಅದನ್ನು ಸರ್ಕಾರದಿಂದ ಬಜೆಟ್ನಲ್ಲೇ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಂದಿಸಿದ ಪರಿಣಾಮ ಆಸ್ಪತ್ರೆಗೆ ಮೇಲ್ದರ್ಜೆಗೇರುವ ‘ಗ್ಯಾರಂಟಿ’ ದೊರೆತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.