ಮೈಸೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಸಹೋದರ ಎನ್.ಜೆ. ವಾಸುದೇವನ್ (92) ಬನ್ನೂರಿನ ಚಾಮನಹಳ್ಳಿಯಲ್ಲಿರುವ ತಮ್ಮ ಸಾಕು ಮಗಳ ಮನೆಯಲ್ಲಿ ಅನಾರೋಗ್ಯದಿಂದ ಮಂಗಳವಾರ ನಿಧನರಾದರು.

ಸಂಜೆ ರಂಗರಾಜಪುರದಲ್ಲಿ ಅಂತ್ಯಕ್ರಿಯೆ ನಡೆಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೇಲುಕೋಟೆಯಲ್ಲಿ ಜನಿಸಿದ ಎನ್.ಜೆ. ವಾಸುದೇವನ್, ರಂಗರಾಜಪುರದಲ್ಲಿ ನೆಲೆಸಿದ್ದರು. ಅವರ ಪುತ್ರ ವೇಣುಗೋಪಾಲ್ 12 ವರ್ಷದ ಬಾಲಕನಾಗಿದ್ದಾಗಲೇ ಮೃತಪಟ್ಟರು. ಪತ್ನಿ ವೇದವಲ್ಲಿ 10 ವರ್ಷಗಳ ಹಿಂದೆ ಮೃತರಾಗಿದ್ದರು. ಹೀಗಾಗಿ ಸಾಕು ಮಗಳಾದ ಪವಿತ್ರಾ ಹಾಗೂ ಅಳಿಯ ಶ್ರೀಕಾಂತ್ ಜೊತೆಗೆ ಚಾಮನಹಳ್ಳಿಯಲ್ಲಿ ವಾಸವಿದ್ದರು.

ಜಯಲಲಿತಾ ತಮಿಳುನಾಡು ಮುಖ್ಯಮಂತ್ರಿ ಆಗಿದ್ದ ಸಂದರ್ಭ ಅವರನ್ನು ಭೇಟಿ ಮಾಡಲು ವಾಸುದೇವನ್ ಎರಡು ಬಾರಿ ಊಟಿಗೆ ಹೋಗಿದ್ದರು. ಆದರೆ, ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-38-2114987957

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.