ಮೈಸೂರು: ರೈತನಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ದೇವೇಗೌಡ ಸರ್ಕಲ್- ಆಲನಹಳ್ಳಿ ಸರ್ಕಲ್ ಮಧ್ಯೆ ರಿಂಗ್ ರಸ್ತೆಯಲ್ಲಿರುವ ಪಿಎಸ್ಎನ್ ಕನ್ಸ್ಟ್ರಕ್ಷನ್ ಇಕ್ಯುಪ್ಮೆಂಟ್ ಸಂಸ್ಥೆ ಮುಂಭಾಗ ಪ್ರತಿಭಟಿಸಿದರು.

ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕು ರೈತ ಈ ಕಂಪೆನಿಯಲ್ಲಿ ಜೆಸಿಬಿಯನ್ನು ಸಾಲ ಮಾಡಿ ಖರೀದಿಸಿದ್ದರು, ಅದು ಕೆಲವೇ ಸಮಯದಲ್ಲಿ ರಿಪೇರಿಗೆ ಬಂದಿದ್ದು, ಅದನ್ನು ಬದಲಾಯಿಸಿ ಕೊಡಿ ಎಂದಾಗ ಒಪ್ಪಿಗೆ ಸೂಚಿಸಿದ್ದರು. ಈ ಬಗ್ಗೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿಯೂ ಒಪ್ಪಿಕೊಂಡಿದ್ದರು’ ಎಂದರು.

‘ನಂತರ ಬಿಡಿ ಭಾಗಗಳನ್ನು ಸರಿಪಡಿಸುತ್ತೇವೆ ಎಂದರು. ಅದನ್ನೂ ಮಾಡಲಿಲ್ಲ. ಜೆಸಿಬಿ ಮಾಲೀಕರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಜೆಸಿಬಿಯನ್ನು ಸರಿಪಡಿಸುತ್ತೇವೆ. ಸಾಧ್ಯವಾಗದಿದ್ದರೆ ಬದಲಾಯಿಸಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಈವರೆಗೆ ಆ ಕಾರ್ಯ ಆಗಿಲ್ಲ. ತಕ್ಷಣವೇ ಬದಲಿ ಜೆಸಿಬಿ ನೀಡಬೇಕು’ ಎಂದು ಒತ್ತಾಯಿಸಿದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಮುಖಂಡರೊಂದಿಗೆ ಕಂಪೆನಿಯ ಹಿರಿಯ ಅಧಿಕಾರಿಗಳು ಚರ್ಚಿಸಿದರು. ರೈತ ಮುಖಂಡರು ಮಾಲೀಕನಿಗೆ ಜೆಸಿಬಿ ಬದಲಾಯಿಸಿ ಕೊಡಬೇಕು ಅಥವಾ ಅದಕ್ಕೆ ನೀಡಿರುವ ₹ 26 ಲಕ್ಷವನ್ನು ವಾಪಸ್ ನೀಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಕಂಪೆನಿಯ ಶಾಖೆಗಳ ಮುಂದೆ ಪ್ರತಿಭಟಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘15 ದಿನಗಳೊಳಗಾಗಿ ಸಮಸ್ಯೆಯನ್ನು ಬಗೆಹರಿಸಿ ರೈತರಿಗೆ ನ್ಯಾಯ ಒದಗಿಸುತ್ತೇವೆ’ ಎಂದು ಅಧಿಕಾರಿಗಳು ತಿಳಿಸಿದ ಬಳಿಕ, ಪ್ರತಿಭಟನೆ ಹಿಂಪಡೆಯಲಾಯಿತು.

ಎಎಲ್ ಕೆಂಪೂಗೌಡ, ಹೊಸಕೋಟೆ ಬಸವರಾಜು, ಪಿ. ಮರಂಕಯ್ಯ, ಕೆಂಪೇಗೌಡ, ಎಣ್ಣೆಹೊಳೆ ಕೊಪ್ಪಲ್ ಮಂಜುನಾಥ್, ರಘು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-39-1427960283

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.