ಮೈಸೂರು: ಬೇಸಿಗೆ ರಜೆಯ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ನೈರುತ್ಯ ರೈಲ್ವೆ ಮೈಸೂರು ವಿಭಾಗವು ಮೈಸೂರು ಮತ್ತು ಜೋಧಪುರ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲುಗಳ ಕಾರ್ಯಾಚರಣೆ ನಡೆಸಲಿದೆ.

ರೈಲು ಸಂಖ್ಯೆ 06273 ಮೈಸೂರು – ಜೋಧಪುರ ಎಕ್ಸ್ಪ್ರೆಸ್ ವಿಶೇಷ ರೈಲು ಮೈಸೂರು ನಿಲ್ದಾಣದಿಂದ ರಾತ್ರಿ 8.15ಕ್ಕೆ ಸೋಮವಾರದಂದು, ಅಂದರೆ ಏ.13, ಏ.20 ಮತ್ತು ಏ.27ರಂದು ಹೊರಡಲಿದೆ. ಜೋಧಪುರವನ್ನು ಬುಧವಾರ ಬೆಳಿಗ್ಗೆ 5ಕ್ಕೆ ತಲುಪಲಿದೆ.

ರೈಲು ಸಂಖ್ಯೆ 06274 ಜೋಧಪುರ – ಮೈಸೂರು ಎಕ್ಸ್ಪ್ರೆಸ್ ವಿಶೇಷ ರೈಲು ಜೋಧಪುರ ನಿಲ್ದಾಣದಿಂದ ರಾತ್ರಿ 8.45ಕ್ಕೆ ಗುರುವಾರದಂದು ಅಂದರೆ ಏ.16, ಏ.23 ಮತ್ತು ಏ.30ರಂದು ಹೊರಡಲಿದ್ದು, ಮೈಸೂರಿಗೆ ಶನಿವಾರ ಬೆಳಿಗ್ಗೆ 6ಕ್ಕೆ ತಲುಪಲಿದೆ ಎಂದು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.