ಮೈಸೂರು: ‘ಪತ್ರಿಕಾ ರಂಗವು ಕಟು ಸತ್ಯ ಬರೆಯುವ ಕಾಲ ಬಂದಿದ್ದು, ಅದನ್ನು ನಿರ್ವಹಿಸಿ ಜನರನ್ನು ಜಾಗೃತಗೊಳಿಸಬೇಕು’ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಎಸ್. ಹೊರಟ್ಟಿ ಹೇಳಿದರು.

ಇಲ್ಲಿನ ಕಿರುರಂಗಮಂದಿರದಲ್ಲಿ ಭಾರತೀ ಪ್ರಕಾಶನವು ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಕೂಡ್ಲಿ ಗುರುರಾಜ್ ವಿರಚಿತ ‘ಸಾಧನೆಯ ಶಿಖರಗಳು’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಕಾರ್ಯಗಳನ್ನು ಜನರ ಬಳಿ ತಲುಪಿಸುವ ಸೇತುವೆಯಾಗಿ ಪತ್ರಿಕಾರಂಗ ಕೆಲಸ ಮಾಡುತ್ತಿದೆ. ಅಲ್ಲಿ ಅನೇಕ ಬದಲಾವಣೆ ನಡೆದಿವೆ. ಸವಾಲುಗಳ ನಡುವೆ ಸಮಾಜದ ಓರೆ–ಕೋರೆ ತಿದ್ದುವ ಪತ್ರಕರ್ತರ ಅಗತ್ಯವಿದೆ. ಆದರೆ, ಈಚೆಗೆ ಮುಖ ನೋಡಿ ಪ್ರಶ್ನೆ ಕೇಳುವ ಸಂಸ್ಕೃತಿ ಬೆಳೆದಿರುವುದು ದುರದೃಷ್ಟಕರ’ ಎಂದರು.

‘ಮಾಧ್ಯಮ ಆಡಳಿತ ವರ್ಗದ ತಪ್ಪನ್ನು ತೋರಿಸುವ ಮತ್ತು ಪ್ರಶ್ನಿಸುವ ಮೂಲಕ ಆಡಳಿತ ಯಂತ್ರವನ್ನು ಸರಿದಾರಿಗೆ ತರುವ ಕೆಲಸ ಮಾಡಬೇಕು. ಆದರೆ, ಈಚೆಗೆ ಆ ಸಂಪ್ರದಾಯ ಮಾಯವಾಗಿ, ಹೊಗಳುವುದು, ಆರಾಧಿಸುವುದು ಹೆಚ್ಚಾಗಿದೆ. ನಾವು ಹೇಳಬೇಕಿರುವ ಮಾತಿಗಿಂತ, ಬೇರೆ ಮಾತುಗಳೇ ಹೆಚ್ಚು ಸುದ್ದಿಯಾಗುತ್ತಿವೆ. ಇದು ಕಡಿಮೆಯಾಗಬೇಕು’ ಎಂದು ಸಲಹೆ ನೀಡಿದರು.

‘ಜನಪ್ರತಿಧಿ ಜವಾಬ್ದಾರಿಯುತ ಆಗಿರಬೇಕು. ನಾನು ರಾಜಕೀಯ ಪ್ರವೇಶಿಸಿದ ಆರಂಭದಲ್ಲಿ ರಾಮಕೃಷ್ಣ ಹೆಗಡೆ, ಗುಂಡೂರಾವ್ ವಿಧಾನಸೌಧದ ಗೌರವದ ಬಗ್ಗೆ ಅರಿವು ಮೂಡಿಸುತ್ತಿದ್ದರು. ಟೀ ಶರ್ಟ್ ಧರಿಸಿ ತೆರಳಿದರೆ ಬದಲಾಯಿಸಲು ಹೇಳುತ್ತಿದ್ದರು. ಆದರೆ, ಈಗ ಬುದ್ಧಿ ಮಾತು ಹೇಳುವವರು ಹಾಗೂ ಅದನ್ನು ಕೇಳಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ನಾವು ಎಲ್ಲಾ ಜನರ ಪ್ರತಿನಿಧಿಯಾಗಿ ವಿಧಾನಸೌಧಕ್ಕೆ ತೆರಳುವುದರಿಂದ ಅಲ್ಲಿನ ಘನತೆ ಎತ್ತಿ ಹಿಡಿಯಬೇಕು’ ಎಂದರು.

ಲೇಖಕ ಪ್ರಕಾಶ್ ಬಾಬು, ವಿಧಾನಪರಿಷತ್ ಸದಸ್ಯ ಕೆ. ಶಿವಕುಮಾರ್, ಪತ್ರಕರ್ತ ಮದನ್ ಗೌಡ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಭಾರತೀ ಪ್ರಕಾಶನದ ಬಿ.ಎನ್. ಶ್ರೀನಿವಾಸ್, ಪತ್ರಕರ್ತ ಕೂಡ್ಲಿ ಗುರುರಾಜ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-39-1516089255

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.