ಮೈಸೂರು: ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರದಿಂದ ನಗರದ ಮಂಚೇಗೌಡನ ಕೊಪ್ಪಲಿನ ಕಲೆಮನೆ ಸಭಾಂಗಣದಲ್ಲಿ ಭಾನುವಾರ ವಿಶ್ವ ನೃತ್ಯ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ 71ನೇ ಅಂತರರಾಷ್ಟ್ರೀಯ ಕಲೆಮನೆ ಉತ್ಸವದಲ್ಲಿ ನಾಲ್ವರು ಸಾಧಕರಿಗೆ ‘ಕಲೆಮನೆ ಕಲಾಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಂಗಕರ್ಮಿಗಳಾದ ಮೈಸೂರಿನ ಅಶ್ವತ್ಥ್ ಕದಂಬ, ಕೆ.ಜೆ. ನಾರಾಯಣ ಕಿಕ್ಕೇರಿ, ಬೆಂಗಳೂರಿನ ಓಂಕಾರ್ ಸ್ಟುಡಿಯೊ ಮಾಲೀಕ ಬಿ. ಓಂಕಾರ್ ಮೂರ್ತಿ, ಕಲಾ ವಿಮರ್ಶಕ ನಂಜುಂಡರಾವ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮುಖ್ಯ ಅತಿಥಿಯಾಗಿದ್ದರು. ಕೇಂದ್ರದ ಸಂಸ್ಥಾಪಕ ಕೆ. ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷೆ ಜಿ. ಮಾಲತಿ, ಜಂಟಿ ಕಾರ್ಯದರ್ಶಿ ಕೆ.ಎಂ. ನಿಧಿ, ರಂಗಕರ್ಮಿ ರಾಜಶೇಖರ ಕದಂಬ, ಮುನಾರಾಣಿ ಮಿರ್ಲೆ, ರಂಗನಾಥ್ ಮೈಸೂರು ಪಾಲ್ಗೊಂಡಿದ್ದರು.

ನಂತರ ಕೆ. ಕುಮಾರ್, ಸಂಗೀತ ಕಬಿಲನ್, ಎನ್. ಸಿಂಧು ಶಿಷ್ಯವೃಂದ, ಯಶಸ್ವಿನಿ ಅವರು ಭರತನಾಟ್ಯ ಪ್ರದರ್ಶಿಸಿದರು. ಮೀನಲ್ ಗಿರೀಶ್ ಮತ್ತು ಟಿ.ಎನ್. ಯೋಗಿತಾಮಣಿ ಅವರಿಂದ ಯುಗಳ ಭರತನಾಟ್ಯ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-39-1833128995

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.