ಮೈಸೂರು: ‘ಪುಸ್ತಕಗಳನ್ನು ಖರೀದಿಸಲು ಒಲ್ಲದ ಓದುಗರು ಮತ್ತು ವ್ಯವಸ್ಥೆಯ ನಡುವೆ ಕನ್ನಡ ಪುಸ್ತಕೋದ್ಯಮವಿದೆ’ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ಪ್ರೊ.ರಾಜಪ್ಪ ದಳವಾಯಿ ವಿಷಾದಿಸಿದರು.

ನಗರದಲ್ಲಿ ಗುರುವಾರ ವಿಶ್ವ ಪುಸ್ತಕ ದಿನದ ಅಂಗವಾಗಿ ‘ಚಿಂತನ ಚಿತ್ತಾರ’ ಪ್ರಕಾಶನ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರ ಮಳಿಗೆಯು ಏರ್ಪಡಿಸಿದ್ದ ‘ಪತ್ರಕರ್ತರು ಮತ್ತು ಪುಸ್ತಕ ಸಾಂಗತ್ಯ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅನುದಾನವೇ ಇಲ್ಲದ ಸಮಿತಿಗೆ ನನ್ನನ್ನು ಅಧ್ಯಕ್ಷನನ್ನಾಗಿ ನೇಮಿಸಲಾಗಿದೆ. ಮೊದಲಿಗೆ, ಸ್ಥಳೀಯ ಆಡಳಿತ ಸಂಸ್ಥೆಗಳು ಸಾರ್ವಜನಿಕರಿಂದ ವಸೂಲಿ ಮಾಡುವ ಗ್ರಂಥಾಲಯ ತೆರಿಗೆಯು ಇಲಾಖೆಗೆ ನೇರವಾಗಿ ಬರುವಂತಾಗಬೇಕು. ಆ ಬಗ್ಗೆ ಶೀಘ್ರ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಗಮನ ಸೆಳೆಯುವೆ’ ಎಂದು ಹೇಳಿದರು.

‘ಪುಸ್ತಕ ಪ್ರಕಾಶಕರ ಸಂಘವು ಮನವಿ ನೀಡಿದ್ದು, ಸಂಘದವರೊಬ್ಬರನ್ನು ಸಮಿತಿಯ ಸಹಸದಸ್ಯರನ್ನಾಗಿ ಸೇರಿಸಿಕೊಳ್ಳಲಾಗುವುದು’ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-51-1184861914

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.