ಮೈಸೂರು: ಮೈಸೂರು ಸಂಸ್ಥಾನದ ದಿವಾನರುಗಳಲ್ಲಿ ಒಬ್ಬರಾದ ಸರ್.ಎಂ.ಕಾಂತರಾಜ ಅರಸ್ ಆಡಳಿತದ ಕುರಿತ ಸ್ಮರಣೆಯ ಅಲೆಗಳು ನಗರದ ಕಾಸ್ಮೊಪಾಲಿಟನ್ ಕ್ಲಬ್ನಲ್ಲಿ ಶನಿವಾರ ಏಳುತ್ತಿದ್ದಾಗ ನೆರೆದವರು ತನ್ಮಯರಾಗಿ ಆ ಕಾಲಕ್ಕೆ ತೆರಳಿದ್ದರು.

50ರ ದಶಕದಲ್ಲಿ ಸರ್ದಾರ್ ಕೆ.ಬಸವರಾಜ ಅರಸ್ ಅವರು ಕಾಂತರಾಜ ಅರಸು ಅವರ ಬಗ್ಗೆ ಬರೆದ ‘ಸ್ಪೀಚಸ್ ಆಫ್ ಸರ್ದಾರ್ ಎಂ.ಕಾಂತರಾಜ ಅರಸ್’ ಕೃತಿಯ ಅನುವಾದ ‘ಮರೆತೇಹೋದ ಮಹಾನು ಭಾವ’ ಲೋಕಾರ್ಪಣೆ ಸಮಾರಂಭವು ಈ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಯಿತು.

ಅನುವಾದಕರಾದ ಪ್ರೊ.ವಿಕ್ರಂ ಚದುರಂಗ ಅವರಿಗೆ ಬಸವರಾಜ ಅರಸ್ ದೊಡ್ಡಪ್ಪ. ಬಸವರಾಜ ಅರಸ್ ಅವರು ಕಾಂತರಾಜ ಅರಸರ ಅಳಿಯ. ಕಾಂತರಾಜ ಅರಸರು ನಾಲ್ವಡಿಯವರ ತಾಯಿ ಕೆಂಪನಂಜಮ್ಮಣಿಯವರ ಸಹೋದರ. ಆದರೆ, ಈ ಕೌಟುಂಬಿಕ ಸಂಬಂಧಗಳಾಚೆಗೆ ಕಾರ್ಯಕ್ರಮವು, ಮೈಸೂರು ಸಂಸ್ಥಾನವು ಕಾಂತರಾಜ ಅರಸು ಅವರ ಅವಧಿಯಲ್ಲಿ ಕಂಡ ಪ್ರಜಾಸತ್ತಾತ್ಮ ಬೆಳವಣಿಗೆಯ ಕುರಿತ ವಿಶ್ಲೇಷಣೆಗೆ ದಾರಿ ಮಾಡಿದ್ದು ವಿಶೇಷ. ಕಾಂತರಾಜ ಅರಸ್ ನಿರ್ಮಿಸಿದ ಕ್ಲಬ್ನಲ್ಲೇ ಕಾರ್ಯಕ್ರಮ ನಡೆದಿದ್ದು ಇನ್ನೊಂದು ವಿಶೇಷ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಮರ್ಶಕ ಪ್ರೊ.ಮನು ಚಕ್ರವರ್ತಿ, ‘70ರ ದಶಕದಲ್ಲಿ ಇಂಗ್ಲೆಂಡ್ನಲ್ಲಿ ಮಕ್ಕಳಿಗೆ ಹಾಲು ಪೂರೈಸುವ ಯೋಜನೆಯನ್ನು ರದ್ದುಪಡಿಸಿದ ಕಾರಣಕ್ಕೆ ಇಂಗ್ಲೆಂಡ್ನ ಶಿಕ್ಷಣ ಕಾರ್ಯದರ್ಶಿ ಮಾರ್ಗರೆಟ್ ಥ್ಯಾಚರ್ ಅವರನ್ನು ಮಿಲ್ಕ್ ಸ್ನ್ಯಾಚರ್- ಹಾಲು ದೋಚಿದಾಕೆ ಎಂದು ಜನ ಜರಿದಿದ್ದರು. ಆದರೆ ಮೈಸೂರು ಸಂಸ್ಥಾನದಲ್ಲಿ 20ರ ದಶಕದಲ್ಲೇ ಸರ್.ಎಂ.ಕಾಂತರಾಜ ಅರಸ್ ಅವರು ಮಕ್ಕಳಿಗೆ–ತಾಯಂದಿರಿಗೆ ಉಚಿತವಾಗಿ ಹಾಲು ಪೂರೈಸುವ ವ್ಯವಸ್ಥೆ ಮಾಡಿದ್ದು ಘನವಾದ ಕಾರ್ಯ’ ಎಂದು ಬಣ್ಣಿಸಿದರು.

‘ಕೃತಿಯನ್ನು ವ್ಯಕ್ತಿಯ ಜೀವನ ಚರಿತ್ರೆ ಎಂಬುದಕ್ಕಿಂತ ಸಂಸ್ಥಾನದ ಜೀವನಚರಿತ್ರೆ ಎಂಬ ನೆಲೆಯಲ್ಲಿ ನೋಡಿದರೆ, ರಾಜಪ್ರಭುತ್ವ ಹಾಗೂ ಸಾರ್ವಜನಿಕ ಆಡಳಿತವು ಜನಸಮುದಾಯದೊ ಳಗೆ ಪ್ರವೇಶಿಸಿದ ಬಗೆ ಅರ್ಥವಾಗುತ್ತದೆ’ ಎಂದರು.

ಕೃತಿಯ ಕುರಿತು ಪ್ರೊ.ಬಿ.ವಿ.ಸುಧಾಮಣಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಂಡ ವಿಕ್ರಂ ಚದುರಂಗ ಅವರ ಇನ್ನೊಂದು ಕೃತಿ ‘70ರ ಆಚೆ’ ಕುರಿತು ಸಂತೋಷ್ ಚೊಕ್ಕಾಡಿ ಮಾತನಾಡಿದರು. ‘ಪ್ರಜಾವಾಣಿ’ ಮೈಸೂರು ಬ್ಯೂರೋ ಮುಖ್ಯಸ್ಥ ಕೆ.ನರಸಿಂಹಮೂರ್ತಿ ನಲ್ನುಡಿಗಳನ್ನಾಡಿದರು. ಕೃತಿಗಳನ್ನು ಪ್ರಕಟಿಸಿರುವ ಅಭಿರುಚಿ ಪ್ರಕಾಶನದ ಗಣೇಶ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-39-1438704288

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.