ಮೈಸೂರು: ಕರ್ನಾಟಕ ಗ್ರಾಮೀಣ ಬ್ಯಾಂಕಿನ ಮೈಸೂರು ವಲಯ ಕಚೇರಿಯಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘದ ಸದಸ್ಯರೊಂದಿಗೆ ಬ್ಯಾಂಕ್ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಸತ್ಯಪ್ರಸಾದ್ ಸಭೆ ನಡೆಸಿ ಅಹವಾಲು ಸ್ವೀಕರಿಸಿದರು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ‘ಓಟಿಎಸ್ ಸಾಲ ತಿರುವಳಿಯಲ್ಲಿ ರೈತರಿಗೆ ಸಹಕಾರ ನೀಡುತ್ತಿಲ್ಲ. ಸರ್ಕಾರದ ಯೋಜನೆಗಳ ಹಣ, ಹಾಲು, ಸರಬರಾಜು ಹಣ ಬಂದಾಗ ಸಾಲಕ್ಕೆ ಜಮಾ ಮಾಡಿಕೊಳ್ಳಲಾಗುತ್ತಿದೆ. ರೈತರ ಮಕ್ಕಳಿಗೆ ಶಿಕ್ಷಣ ಸಾಲ ಸರಿಯಾಗಿ ಸಿಗುತ್ತಿಲ್ಲ, ರೈತರು ತುರ್ತು ಅಗತ್ಯಗಳಿಗೆ ಚಿನ್ನ ಗಿರವಿ ಇಡಲು ಸಮಸ್ಯೆ ಆಗುತ್ತಿದೆ ಹಾಗೂ ಎಚ್.ಡಿ ಕೋಟೆ, ತಿ. ನರಸೀಪುರ ಮತ್ತು ಮೈಸೂರು ತಾಲ್ಲೂಕಿನ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಶಾಖೆಗಳನ್ನು ಚಾಮರಾಜನಗರ ವಲಯಕ್ಕೆ ಸೇರಿರುವುದರಿಂದ ಸಮಸ್ಯೆಯಾಗಿದೆ’ ಎಂದು ತಿಳಿಸಿದರು.

ಸತ್ಯ ಪ್ರಸಾದ್ ಮಾತನಾಡಿ, ‘ರಾಜ್ಯದಲ್ಲಿ 1,800 ಗ್ರಾಮೀಣ ಬ್ಯಾಂಕಿನ ಶಾಖೆಗಳಿವೆ. ನಾವು ₹ 54 ಸಾವಿರ ಕೋಟಿ ಸಾಲ ನೀಡುತ್ತಿದ್ದು, ಇದರಲ್ಲಿ ₹43 ಸಾವಿರ ಕೋಟಿಯನ್ನು ರೈತರಿಗೆ ಸಾಲ ನೀಡಿದ್ದೇವೆ. ನಮ್ಮ ಬ್ಯಾಂಕಿನಲ್ಲಿ ಒಟಿಎಸ್ ಸಾಲ ತಿರುವಳಿ ಮಾಡಿದ ರೈತರಿಗೆ ತಕ್ಷಣವೇ ಪುನಃಶ್ಚೇತನ ಸಾಲ ನೀಡುತ್ತೇವೆ. ಸಾಲ ಮರುಪಾವತಿ ಸಕಾಲಕ್ಕೆ ಮಾಡಿದರೆ ಶೇ 4 ಬಡ್ಡಿ ವಿಧಿಸಲಾಗುತ್ತದೆ. ಚಿನ್ನದ ಸಾಲಕ್ಕೆ ಯಾವುದೇ ಮಿತಿ ಇಲ್ಲ’ ಎಂದರು.

‘ಮೈಸೂರು, ಚಾಮರಾಜನಗರ ಜಿಲ್ಲೆಯ ಐವತ್ತಕ್ಕೂ ಹೆಚ್ಚು ರೈತರ ಸಾಲವನ್ನು ಒಟಿಎಸ್ ಪದ್ಧತಿಯಲ್ಲಿ ಮುಕ್ತಾಯಗೊಳಿಸುತ್ತೇವೆ’ ಎಂದರು.

ಮೈಸೂರು ವಲಯ ಪ್ರಾದೇಶಿಕ ವ್ಯವಸ್ಥಾಪಕ ಪ್ರಮೋದ್ ನವನೀತ್, ಚಾಮರಾಜನಗರ ವಲಯ ವ್ಯವಸ್ಥಾಪಕಿ ತ್ರಿವೇಣಿ, ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಮಾರ್ಬಳ್ಳಿ ನೀಲಕಂಠಪ್ಪ, ಅಂಬಳೆ ಮಂಜುನಾಥ್, ಪ್ರಸಾದ್ ನಾಯಕ, ಕೋಟೆ ರಾಜೇಶ್, ಕೂಡನಹಳ್ಳಿ ಸೋಮಣ್ಣ, ಸಿದ್ಧರಾಮ, ನಂಜುಂಡಸ್ವಾಮಿ, ಕಾಟೂರು ನಾಗೇಶ್, ಗಿರೀಶ್ ಭಾಗವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-39-1593881770

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.