ಮೈಸೂರು: ‘ನೋಂದಣಿ ಮತ್ತು ಮುದ್ರಾಂಕ ಇಲಾಖೆ ಜಾರಿಗೆ ತಂದಿರುವ ಕಾವೇರಿ 2.0 ತಂತ್ರಾಂಶದಲ್ಲಿ ಲೋಪಗಳೂ ಹೆಚ್ಚಿದ್ದು, ಇದರಿಂದ ಆಸ್ತಿ ಹೊಂದಿರುವವರಿಗೆ ಸಮಸ್ಯೆಯಾಗುತ್ತಿದೆ’ ಎಂದು ಮೈಸೂರು ನಗರ ಮತ್ತು ತಾಲ್ಲೂಕು ಪತ್ರ ಬರಹಗಾರರ ಒಕ್ಕೂಟದ ಅಧ್ಯಕ್ಷ ನಿಸಾರ್ ಅಹಮದ್ ದೂರಿದರು.

‘ಹೊಸ ತಂತ್ರಾಂಶದಲ್ಲಿ ವಿಭಾಗ ಪತ್ರ, ವ್ಯವಸ್ಥಾ ಪತ್ರ, ಭಾಗಶಃ ದಾನಪತ್ರದಂತಹ ಅನೇಕ ನೋಂದಣಿ ಪ್ರಕ್ರಿಯೆಗಳು ಸಾಧ್ಯವಾಗುತ್ತಿಲ್ಲ. ಇದರ ಜೊತೆಗೆ ಸರ್ಕಾರ ಕಾಗದರಹಿತ ನೋಂದಣಿ ವ್ಯವಸ್ಥೆಯನ್ನು ಜಾರಿಗೆ ತರಲು ಹೊರಟಿದೆ. ಇದರ ಪೂರ್ವದಲ್ಲಿ ಪತ್ರ ಬರಹಗಾರರು, ಕಾನೂನು ತಜ್ಞರ ಅಭಿಪ್ರಾಯ ಪಡೆಯದೇ ನಿರ್ಲಕ್ಷಿಸಲಾಗಿದೆ’ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಹೊಸ ಪದ್ಧತಿ ಅಡಿ ಕಾಗದಪತ್ರಗಳಿಗೆ ಪಕ್ಷಕಾರರ ಭೌತಿಕ ಸಹಿ, ಸಾಕ್ಷಿಗಳ ಭೌತಿಕ ಸಹಿ, ಉಪ ನೋಂದಣಾಧಿಕಾರಿಗಳ ಭೌತಿಕ ಸಹಿ ಸೇರಿದಂತೆ ಯಾವುದೇ ಸಹಿಗಳು ಇರುವುದಿಲ್ಲ. ಅಂತಹ ದಾಖಲಾತಿಗಳು ಕೇವಲ ಮುದ್ರಣ ಹೊರತುಪಡಿಸಿ ಯಾವುದೇ ವಿಶೇಷತೆ ಹೊಂದಿಲ್ಲ. ಇಂತಹ ಈ ನೋಂದಾಯಿತ ದಸ್ತಾವೇಜುಗಳ ಮೇಲೆ ಕಷ್ಟಕಾಲದಲ್ಲಿ ಆರ್ಥಿಕ, ಹಣಕಾಸು ಸೌಲಭ್ಯವನ್ನು ಖಾಸಗಿ ವ್ಯಕ್ತಿಗಳಿಂದ ಪಡೆಯಲು ಸಹ ಸಾಧ್ಯವಾಗುವುದಿಲ್ಲ’ ಎಂದು ದೂರಿದರು.

‘ಸರ್ಕಾರ ಜನಾಭಿಪ್ರಾಯಕ್ಕೆ ಮನ್ನಣೆ ನೀಡಿ, ಹಿಂದಿನ ಪದ್ಧತಿಯನ್ನೇ ಮುಂದುವರಿಸಬೇಕು’ಎಂದು ಕೋರಿದರು.

ಪದಾಧಿಕಾರಿಗಳಾದ ಕೆ.ಆರ್. ಉದಯ್ಕುಮಾರ್, ಎಂ.ಎಸ್. ನರಸಿಂಹಮೂರ್ತಿ, ಎಂ. ಗಣೇಶ್, ಎ.ಎಸ್. ನಾಗಭೂಷಣ ಆರಾಧ್ಯ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-39-1037047077

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.