ಮೈಸೂರು: ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಇಲ್ಲಿನ ಸಿದ್ಧಾರ್ಥನಗರದ ಬನ್ನೂರು ರಸ್ತೆಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಈಚೆಗೆ (ಮೇ 14 ಹಾಗೂ 15) ತೆರೆಯಲಾಗಿದ್ದ ‘ತಾತ್ಕಾಲಿಕ ಮಳಿಗೆ’ಯಲ್ಲಿ ಉತ್ತಮ ವ್ಯಾಪಾರ–ವಹಿವಾಟು ನಡೆದಿದೆ.

ಖಾದಿ ಬಟ್ಟೆಗಳು ಹಾಗೂ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವ ಕಾರ್ಯಕ್ರಮದ ಭಾಗವಾಗಿ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮಳಿಗೆ ತೆರೆಯಲಾಗಿತ್ತು.

ಜಿಲ್ಲಾಧಿಕಾರಿ ಕಚೇರಿಯನ್ನೂ ಒಳಗೊಂಡಿರುವ ಜಿಲ್ಲಾಮಟ್ಟದ ಕಚೇರಿಗಳ ಸಂಕೀರ್ಣದಲ್ಲಿ ಹೀಗೆ ಮಾರಾಟ ಮಳಿಗೆಯನ್ನು ತೆರೆದಿದ್ದು ಇದೇ ಮೊದಲು. ಖಾದಿ ಬಟ್ಟೆಗಳ ಖರೀದಿಗೆ ಸಂಬಂಧಿಸಿದಂತೆ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಹೆಚ್ಚುತ್ತಿರುವ ಬಿಸಿಲಿನ ಕಾರಣದಿಂದಾಗಿಯೂ ಖಾದಿ ಬಟ್ಟೆಗಳಿಗೆ ಬೇಡಿಕೆ ಕಂಡುಬಂದಿದೆ.

ಸರ್ಕಾರದ ಆದೇಶ: ರಾಜ್ಯ ಸರ್ಕಾರದ ಆದೇಶದ ಅನ್ವಯ, ರಾಜ್ಯದ ಎಲ್ಲಾ ಸರ್ಕಾರಿ ನೌಕರರು, ಅನುದಾನಿತ ಸಂಸ್ಥೆಗಳು, ನಿಗಮ-ಮಂಡಳಿ, ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾಲಯಗಳ ಅಧಿಕಾರಿಗಳು–ನೌಕರರು ಸ್ವಯಂಪ್ರೇರಣೆಯಿಂದ ಪ್ರತಿ ತಿಂಗಳ ಮೊದಲನೇ ಶನಿವಾರದಂದು ಖಾದಿ ಉಡುಪು ಧರಿಸಬೇಕು. ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಸೇರಿದಂತೆ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಖಾದಿ ಉಡುಪನ್ನು ಧರಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸುತ್ತೋಲೆ ಹೊರಡಿಸಿದ್ದಾರೆ. ಈ ಕಾರಣದಿಂದ, ಖಾದಿ ಉತ್ಪನ್ನಗಳ ಖರೀದಿಗೆ ಸಹಾಯ ಆಗಲೆಂದು ಮಂಡಳಿಯಿಂದ ಜಿಲ್ಲಾಮಟ್ಟದ ಕಚೇರಿಗಳ ಸಂಕೀರ್ಣದಲ್ಲಿ ತಾತ್ಕಾಲಿಕ ಮಳಿಗೆ ತೆರೆಯಲಾಗಿತ್ತು. ಸರ್ಕಾರಿ ನೌಕರರು ತಮಗೆ ಬೇಕಾದ ಬಟ್ಟೆಗಳನ್ನು ಖರೀದಿಸಿದರು. ಸಾರ್ವಜನಿಕರ ಗಮನವನ್ನೂ ಆ ಮಳಿಗೆ ಸೆಳೆಯಿತು.

ಪುರುಷರಿಗೆ ಶರ್ಟ್, ಕುರ್ತಾ, ಜುಬ್ಬಾ-ಪೈಜಾಮಾ, ಡ್ರೆಸ್ ಮೆಟೀರಿಯಲ್, ಮಹಿಳೆಯರಿಗೆ ಸೀರೆ, ಚೂಡಿದಾರ್, ದುಪ್ಪಟ್ಟ ಮೊದಲಾದ ಖಾದಿ ಬಟ್ಟೆ ಮಾರಾಟ ನಡೆಯಿತು.

ಉತ್ತಮ ಪ್ರತಿಕ್ರಿಯೆ: ‘ತಾತ್ಕಾಲಿಕ ಮಳಿಗೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಎರಡು ದಿನಗಳಲ್ಲಿ ₹ 4.93 ಲಕ್ಷ ಮೊತ್ತದ ಬಟ್ಟೆಗಳ ವ್ಯಾಪಾರ ನಡೆಯಿತು. ಸೀರೆ, ಸಿದ್ಧ ಉಡುಪುಗಳು, ಕುರ್ತಾಗಳು, ಶರ್ಟ್ಗಳು, ವಿವಿಧ ಮೆಟೀರಿಯಲ್ಗಳನ್ನು ಖರೀದಿಸಿದರು. ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಡಿಸಿ ಕಚೇರಿಯಲ್ಲಿರುವ ವಿವಿಧ ಕಚೇರಿಗಳ ನೌಕರರ ಸದ್ಬಳಕೆ ಮಾಡಿಕೊಂಡರು’ ಎಂದು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಶರತ್ಚಂದ್ರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಖಾದಿ ಬಟ್ಟೆಗಳು ದೇಹಕ್ಕೆ ಹಿತವಾಗಿರುತ್ತವೆ. ಇವುಗಳನ್ನು ಬಳಸುವುದರಿಂದ ಗ್ರಾಮೋದ್ಯೋಗವನ್ನು ಪ್ರೋತ್ಸಾಹಿಸಿದಂತೆಯೂ ಆಗುತ್ತದೆ. ನಗರದ ಧನ್ವಂತರಿ ರಸ್ತೆ ಹಾಗೂ ಬಲ್ಲಾಳ್ ವೃತ್ತದ ಸಮೀಪದಲ್ಲಿ ಖಾದಿ ಗ್ರಾಮೋದ್ಯೋಗ ಮಂಡಳಿಯಿಂದ ಮತ್ತು ಖಾದಿ ಗ್ರಾಮೋದ್ಯೋಗ ಆಯೋಗದಿಂದ ಪ್ರಮಾಣಿತ (ಸರ್ಟಿಫೈಡ್) ಖಾದಿ ಭಂಡಾರಗಳಿವೆ. ಅಲ್ಲಿಯೂ ಉತ್ತಮ ಪ್ರತಿಕ್ರಿಯೆ ಇದೆ. ಶೇ 35ರವರೆಗೆ ರಿಯಾಯಿತಿ ದೊರೆಯಲಿದೆ’ ಎಂದು ಮಾಹಿತಿ ನೀಡಿದರು.

ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಮತ್ತೊಮ್ಮೆ ತಾತ್ಕಾಲಿಕ ಮಳಿಗೆ ತೆರೆಯಲು ಉದ್ದೇಶಿಸಲಾಗಿದ್ದು, ಜಿಲ್ಲಾಧಿಕಾರಿ ಅನುಮತಿ ಪಡೆದು ಕ್ರಮ ವಹಿಸಲಾಗುವುದು
ಶರತ್ಚಂದ್ರ, ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ

ಖಾದಿ ಬಳಕೆ ಉತ್ತೇಜಿಸಲು

'ರಾಜ್ಯ ಸರ್ಕಾರವು ಖಾದಿ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೈಗೊಂಡ ಮಹತ್ವದ ನಿರ್ಧಾರದಿಂದ ಖಾದಿ ಭಂಡಾರಗಳಿಗೆ ಅನುಕೂಲ ಆಗುತ್ತಿದೆ. ಸರ್ಕಾರಿ ನೌಕರದ ಒಂದು ದಿನ ಖಾದಿ ವಸ್ತ್ರವನ್ನು ಧರಿಸುವಂತೆ ಸುತ್ತೋಲೆ ಹೊರಡಿಸಿದ ಪರಿಣಾಮ ಮೂರು ತಿಂಗಳಲ್ಲಿ ಖಾದಿ ಭಂಡಾರಗಳಲ್ಲಿ ಉತ್ತಮ ವ್ಯಾಪಾರ ನಡೆಯುತ್ತಿದೆ. ಮೈಸ ಭಂಡಾರಗಳಲ್ಲಿ ₹ 50 ಲಕ್ಷದವರೆಗೆ ವ್ಯಾಪಾರ-ವಹಿವಾಟು ನಡೆದಿದೆ' ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.