ಕೆ.ಆರ್.ನಗರ: ಇತ್ತೀಚಿನ ದಿನಗಳಲ್ಲಿ ಪಟ್ಟಣ ಹೆಚ್ಚಾಗಿ ಬೆಳೆಯುತ್ತಿದ್ದು, ಪಟ್ಟಣದಲ್ಲಿನ ರಸ್ತೆ, ಚರಂಡಿ, ವಿವಿಧ ಅಭಿವೃದ್ಧಿ ಕಾಮಗಾರಿಗೆ ಕೊಟ್ಯಂತರ ಅನುದಾನದ ಅಗತ್ಯವಿದ್ದು, ಎಲ್ಲ ವಾರ್ಡ್ಗಳನ್ನೂ ಅಭಿವೃದ್ಧಿಗೊಳಿಸಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಭರವಸೆ ನೀಡಿದರು.

ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ₹7.50 ಕೋಟಿ ಮೊತ್ತದ ರಸ್ತೆ, ಚರಂಡಿ ನಿರ್ಮಾಣ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಚಾಲನೆ ನೀಡಿದ ಅವರು 17ನೇ ವಾರ್ಡ್ ಮುಳ್ಳೂರು ರಸ್ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

₹7.50 ಕೋಟಿ ಮೊತ್ತದಲ್ಲಿ 1, 2, 12, 13, 14, 15, 16 ಮತ್ತು 17ನೇ ವಾರ್ಡ್ ಗಳಲ್ಲಿ ರಸ್ತೆ, ಚರಂಡಿ, ವಿವಿಧ ಅಭಿವೃದ್ಧಿ ಕಾಮಗಾರಿ ಆರಂಬಿಸಲಾಗಿದೆ. ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮದಿಂದ ₹5 ಕೋಟಿ ಅನುದಾನ ಮಂಜೂರಾಗಿದ್ದು, ಮುಸ್ಲಿಂ ಬಡಾವಣೆಯ 4 ವಾರ್ಡ್ಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. 4, 5, 6, 11, 22 ಮತ್ತು 23ನೇ ವಾರ್ಡ್ಗಳಲ್ಲಿ ಎಸ್ಸಿಪಿ ಅನುದಾನ ಮಂಜೂರಾಗಿದ್ದು, ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. 16ನೇ ವಾರ್ಡ್ ನಲ್ಲಿ ವಾಲ್ಮೀಕಿ ಬಡಾವಣೆ ಅಭಿವೃದ್ಧಿಗೆ ಟಿಎಸ್ಪಿ ಯೋಜನೆಯಡಿ ₹1 ಕೋಟಿ ಅನುದಾನ ಮಂಜೂರಾಗಿದೆ ಎಂದು ಹೇಳಿದರು.

ಪಟ್ಟಣದಲ್ಲಿ ₹20 ಕೋಟಿ ಮೊತ್ತದ ಮೂರನೇ ಹಂತದ ಒಳಚರಂಡಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಕುಡಿಯುವ ನೀರಿನ ಸಮಸ್ಯೆ ನೀಗಿಸಲು ₹30 ಕೋಟಿ ಮೊತ್ತದ ಅಮೃತ ಯೋಜನೆಯಡಿ ಕಾಮಗಾರಿ ಪ್ರಗತಿಯಲ್ಲಿದೆ. 3 ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗಿದೆ. ಒಟ್ಟು 12 ಓವರ್ ಹೆಡ್ ಟ್ಯಾಂಕ್ಗಳಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ ಎಂದು ಹೇಳಿದರು. 17ನೇ ವಾರ್ಡ್ನಲ್ಲಿ ಅಂಗನವಾಡಿ ಕೇಂದ್ರ ಬಳಿ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲು ಲೋಕಪಯೋಗಿ ಇಲಾಖೆಯಿಂದ ₹1 ಕೋಟಿ ಅನುದಾನ ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದರು.

ನಗರ ಯೋಜನಾ ಪ್ರಾಥಿಕಾರದ ಅಧ್ಯಕ್ಷ ಗಡ್ಡ ಮಹೇಶ್, ನಿರ್ದೇಶಕಿ ಸರಿತಾ ಜವರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ನಗರ ಅಧ್ಯಕ್ಷ ಎಂ.ಜೆ.ರಮೇಶ್, ಪುರಸಭೆ ಮಾಜಿ ಅಧ್ಯಕ್ಷರಾದ ಕೆ.ಜಿ.ಸುಬ್ರಹ್ಮಣ್ಯ, ಕೋಳಿ ಪ್ರಕಾಶ್, ಶಿವುನಾಯಕ್, ಸಯ್ಯದ್ ಸಿದ್ದಿಕ್, ಮಾಜಿ ಸದಸ್ಯರಾದ ನಟರಾಜು, ಶಂಕರ್, ಅಸ್ಲಂ, ಪಲ್ಲವಿ ಆನಂದ್, ನಾಗರತ್ನಮ್ಮ, ಮುಖಂಡರಾದ ಜೆ.ಶಿವಣ್ಣ, ಭೋಜರಾಜು, ಆದರ್ಶ, ಕೆ.ಸಿ.ಹರೀಶ್, ವೃಷಬೇಂದ್ರ, ಪುಟ್ಟರಾಜು, ಕೆ.ಚಂದ್ರು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ನಾಗರಾಜು, ಪುರಸಭೆ ಮುಖ್ಯಾಧಿಕಾರಿ ಜಿ.ಎಸ್.ರಮೇಶ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-38-1377419010

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.