ಮೈಸೂರು: ನಗರದ ಕುಕ್ಕರಹಳ್ಳಿ ಕೆರೆ ರೈಲ್ವೆ ಕೆಳ ಸೇತುವೆ ನಿರ್ಮಾಣಕ್ಕಿರುವ ಉತ್ಸಾಹ, ಕೆರೆಯ ‘ಸುಸ್ಥಿರ’ ಅಭಿವೃದ್ಧಿ ಹಾಗೂ ಜೀವವೈವಿಧ್ಯ ರಕ್ಷಣೆಗೆ ತೋರುತ್ತಿಲ್ಲದಿರುವುದು ಪರಿಸರಪ್ರೇಮಿಗಳ ಆಕ್ಷೇಪಕ್ಕೆ ಕಾರಣವಾಗಿದೆ.

ಕೆರೆ ಪುನರುಜ್ಜೀವನಗೊಳಿಸಲು ಹಾಗೂ ಕೆರೆಗೆ ನೀರು ತರುವ 162 ವರ್ಷ ಹಳೆಯದಾದ ಪಾರಂಪರಿಕ ಪೂರ್ಣಯ್ಯ ನಾಲೆ ಉಳಿವಿಗೆ ಜಿಲ್ಲಾಡಳಿತ 2023ರಲ್ಲಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ನವದೆಹಲಿಯ ‘ಇನ್ಟ್ಯಾಕ್’ (ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್) ಸಂಸ್ಥೆಗೆ ವಹಿಸಿತ್ತು. ಅದರಿಂದಾಗಿ, ಕೆರೆ ಅಭಿವೃದ್ಧಿಯ ಬಗ್ಗೆ ಪರಿಸರಪ್ರಿಯರಲ್ಲಿ ಆಶಾವಾದ ಮೂಡಿತ್ತು.

2023ರ ಡಿಸೆಂಬರ್ ಹಾಗೂ 2024ರ ಜನವರಿಯಲ್ಲಿ ‘ಇನ್ಟ್ಯಾಕ್’ನ ತಜ್ಞರು ಸಮೀಕ್ಷೆ ಕೈಗೊಂಡಿದ್ದರು. ₹ 64 ಲಕ್ಷ ವೆಚ್ಚದ ಯೋಜನೆಯಲ್ಲಿ ಜಿಲ್ಲಾಡಳಿತ ₹ 27 ಲಕ್ಷ ಮಾತ್ರ ಬಿಡುಗಡೆ ಮಾಡಿತ್ತು. ಡಿಪಿಆರ್ ಪೂರ್ಣಗೊಳಿಸಲು ‘ಇನ್ಟ್ಯಾಕ್’ ಸಂಸ್ಥೆಗೆ ಪೂರ್ಣ ಹಣ ಬಿಡುಗಡೆ ಮಾಡಲಿಲ್ಲ.

ಪಾವತಿಸಲು ಬಿಲ್: ‘ಯೋಜನೆಯ ಅನುದಾನವನ್ನು ₹ 50 ಲಕ್ಷಕ್ಕೆ ಇಳಿಸಲಾಗಿದೆ. ಉಳಿಕೆ ಹಣವನ್ನು ನೀಡಿದರೆ 3ನೇ ಹಾಗೂ 4ನೇ ಹಂತದ ವರದಿ ಸಿದ್ಧಪಡಿಸಬಹುದು' ಎಂದಿದ್ದ ಸಂಸ್ಥೆಯ ಮನು ಭಟ್ನಾಕರ್, ‘ಪ್ರಾಥಮಿಕ ವರದಿಯನ್ನಷ್ಟೇ ನೀಡಿದ್ದೇವೆ. ಉಳಿಕೆ ಹಣ ಪಾವತಿಸಲು ಬಿಲ್ ಕಳುಹಿಸಲಾಗಿದೆ. ಯಾವುದೇ ಪ್ರತಿಕ್ರಿಯೆ ಜಿಲ್ಲಾಡಳಿತದಿಂದ ಬಂದಿಲ್ಲ. ಸಂಸ್ಥೆಯು ಹಣಕ್ಕಾಗಿ ಮಾತ್ರವೇ ಕೆಲಸ ಮಾಡುತ್ತಿಲ್ಲ. ದೇಶದ ದೊಡ್ಡ ಯೋಜನೆಗಳಿಗೆ ಡಿಪಿಆರ್ ತಯಾರಿಸಿದ್ದೇವೆ. ಪರಿಸರ ಕಾಳಜಿಗಾಗಿ ಕಡಿಮೆ ವೆಚ್ಚಕ್ಕೂ ಯೋಜನೆ ಪೂರ್ಣಗೊಳಿಸಲಿದ್ದೇವೆ. ಆದರೆ, ಜಿಲ್ಲಾಧಿಕಾರಿಗೆ ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ’ ಎಂದು ದೂರಿದ್ದರು.

ಕೊನೆಗೆ ಡಿಪಿಆರ್ ತಯಾರಿಸುವ ಯೋಜನೆಯ ಒಪ್ಪಂದವನ್ನು ರದ್ದುಗೊಳಿಸಿದ ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ, ಇನ್ಟ್ಯಾಕ್ನಿಂದ ವರದಿಯನ್ನೂ ಪಡೆಯಲಿಲ್ಲ.

‘ವರದಿ ತಯಾರಿಕೆಗೆ ಟೆಂಡರ್ ನಡೆಸಲಿಲ್ಲ. ನಿಯಮಾವಳಿ ಪಾಲನೆಯಾಗದ ಕಾರಣ ರದ್ದುಪಡಿಸಲಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹೊಸ ಟೆಂಡರ್ ಆಹ್ವಾನಿಸಲಿದ್ದು, ಅದರಲ್ಲಿ ಇನ್ಟ್ಯಾಕ್ ಕೂಡ ಪಾಲ್ಗೊಳ್ಳಬಹುದು’ ಎಂದು ಕಳೆದ ವರ್ಷ ಮಾಧ್ಯಮಕ್ಕೆ ತಿಳಿಸಿದ್ದರು.

ಕರೆದಿಲ್ಲ: ವರದಿ ತಯಾರಿಕೆ ಒಪ್ಪಂದನ್ನು ಕಳೆದ ಆಗಸ್ಟ್ನಲ್ಲಿ ರದ್ದುಗೊಳಿಸಿದ್ದರೂ ಇದುವರೆಗೂ ವರದಿ ಸಿದ್ಧಪಡಿಸಲು ಹೊಸ ಟೆಂಡರ್ ಪ್ರಕ್ರಿಯೆಗೆ ಎಂಡಿಎ ಮುಂದಾಗಿಲ್ಲ. ಆದರೆ, ₹ 37 ಕೋಟಿ ವೆಚ್ಚದ ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ತಯಾರಿ ಸದ್ದಿಲ್ಲದೆ ನಡೆದಿದೆ.

ಈ ಬಗ್ಗೆ ಪ್ರತಿಕ್ರಿಯೆಗೆ ಜಿಲ್ಲಾಧಿಕಾರಿ, ಎಂಡಿಎ ಆಯುಕ್ತರು ಕರೆ ಸ್ವೀಕರಿಸಲಿಲ್ಲ.

‘ಇನ್ಟ್ಯಾಕ್ ವರದಿ ಬಗ್ಗೆ ಅನುಮಾನವೇ?’

‘ಕುಕ್ಕರಹಳ್ಳಿ ಕೆರೆ ಮತ್ತು ಪೂರ್ಣಯ್ಯ ನಾಲೆಯ ಪುನರುಜ್ಜೀವನಕ್ಕೆ ಜಿಲ್ಲಾಡಳಿತಕ್ಕೆ ಆಸಕ್ತಿ ಇಲ್ಲ. ಇನ್ಟ್ಯಾಕ್ ಸಂಸ್ಥೆಯ ಮಹತ್ವ ಮತ್ತು ಅದರ ಕಾರ್ಯವೈಖರಿ ಅಧಿಕಾರಿಗಳಿಗೆ ಗೊತ್ತಿಲ್ಲವೇ? ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಟೆಂಡರ್ ಪ್ರಕ್ರಿಯೆಯಲ್ಲಿ ಒಪ್ಪಂದವಾಗಿಲ್ಲವೆಂಬ ನೆಪವೊಡ್ಡಿ ವರದಿಯನ್ನೇ ಸ್ವೀಕರಿಸಲಿಲ್ಲ’ ಎಂದು ಮೈಸೂರು ಗ್ರಾಹಕ ಪರಿಷತ್ನ ಭಾಮಿ ವಿ. ಶೆಣೈ 'ಪ್ರಜಾವಾಣಿ'ಗೆ ತಿಳಿಸಿದರು.

‘ಆ ಸಂಸ್ಥೆ ಇತರ ಸಾಮಾನ್ಯ ಎನ್ಜಿಒಗಳಂತಲ್ಲ. ಕೇಂದ್ರ ಸರ್ಕಾರದ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಅದರ ಸದಸ್ಯರಾಗಿರುತ್ತಾರೆ. ಅವರು ತಯಾರಿಸಿದ ಡಿಪಿಆರ್ ಆದರೆ ಪೂರ್ಣಯ್ಯ ನಾಲೆ, ಕೆರೆ ಒತ್ತುವರಿ ತೆರವು ಮಾಡಬಹುದೆಂಬ ಭಯದಿಂದ ನೆಪ ಹುಡುಕಿ ರದ್ದುಗೊಳಿಸಲಾಗಿದೆ’ ಎಂದರು.

‘ನಗರದ ಪಾರಂಪರಿಕ ದೇವರಾಜ ಮಾರುಕಟ್ಟೆ, ಲಾನ್ಸ್ಡೌನ್ ಕಟ್ಟಡದ ಸುಸ್ಥಿತಿ ಪರಿಶೀಲನೆಗೆ ಸುಪ್ರೀಂ ಕೋರ್ಟ್ ಯಾವ ಸಂಸ್ಥೆಗೆ ನಿರ್ದೇಶನ ನೀಡಿದೆ, ಇನ್ಟ್ಯಾಕ್ಗಲ್ಲವೇ? ಪಾಪ, ಇದೆಲ್ಲ ನಮ್ಮ ಅಧಿಕಾರಿಗಳಿಗೆ ಗೊತ್ತಿಲ್ಲ ನೋಡಿ’ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.