ಮೈಸೂರು: ನಗರದ ಕುಪ್ಪಣ್ಣ ಉದ್ಯಾನದಲ್ಲಿ ಶುಕ್ರವಾರ ಮಾವು ಮೇಳ ಆರಂಭಗೊಂಡಿದ್ದು, ಮೊದಲ ದಿನವೇ ಗ್ರಾಹಕರು ಲಗ್ಗೆ ಇಟ್ಟರು.

ತೋಟಗಾರಿಕೆ ಇಲಾಖೆಯು ಆಯೋಜಿಸಿರುವ ಮೂರು ದಿನಗಳ ಮೇಳದಲ್ಲಿ ಮೈಸೂರಿನ ಜಿಲ್ಲೆಗೆ ನೆರೆಯ ಮಂಡ್ಯ, ರಾಮನಗರ ಜಿಲ್ಲೆಗಳಿಂದಲೂ ರೈತರು ಮಾವು ಹೊತ್ತು ತಂದಿದ್ದಾರೆ. ಒಟ್ಟು 28 ಮಳಿಗೆಗಳಲ್ಲಿ 12ಕ್ಕೂ ಹೆಚ್ಚು ತಳಿಗಳ ಮಾವಿನ ಪ್ರದರ್ಶನ ಮತ್ತು ಮಾರಾಟ ನಡೆದಿದೆ. ಬಾದಾಮಿ (ಅಪೂಸ್) ತಳಿಯ ಮಾವು ಎಲ್ಲರ ನೆಚ್ಚಿನ ಆಯ್ಕೆಯಾಗಿದ್ದು, ಹೆಚ್ಚು ಮಾರಾಟ ಆಗುತ್ತಿದೆ.

ರಸಪುರಿ, ಮಲ್ಲಿಕಾ, ಸೇಂದೂರ, ತೋತಾಪುರಿ, ಮಲಗೋವ, ಕೇಸರ್, ಬಾಗನಪಲ್ಲಿ, ಹಿಮಾಪಸಂದ್, ದಶೇರಿ, ದಿಲ್ ಪಸಂದ್, ಸಕ್ಕರೆಗುತ್ತಿ ತಳಿಯ ಮಾವಿನ ಹಣ್ಣುಗಳೂ ಗ್ರಾಹಕರಿಗೆ ಲಭ್ಯವಿದೆ. ಜೊತೆಗೆ ಹಲಸಿನ ಹಣ್ಣಿನ ಮಾರಾಟವೂ ಇದೆ. ಹಣ್ಣುಗಳ ಜೊತೆಗೆ ಜೇನು ತುಪ್ಪವೂ ಗ್ರಾಹಕರಿಗೆ ಲಭ್ಯವಿದೆ.

ದರ ಇಳಿಕೆ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮೇಳದಲ್ಲಿ ಮಾವಿನ ಹಣ್ಣುಗಳ ಬೆಲೆಯು ಇಳಿಕೆ ಆಗಿದೆ. ಅದರಲ್ಲಿಯೂ ತೋತಾಪುರಿ ಹೆಚ್ಚು ಅಗ್ಗವಾಗಿದೆ. ಕಳೆದ ವರ್ಷ ರಸಪುರಿ ಹಣ್ಣಿಗೆ ಬೇಡಿಕೆ ಹೆಚ್ಚಿದ್ದು, ಬೆಲೆಯೂ ಹೆಚ್ಚಾಗಿತ್ತು. ಆದರೆ ಈ ವರ್ಷ ಈ ತಳಿಯ ಮಾವು ₹50ಕ್ಕೆಲ್ಲ ಸಿಗುತ್ತಿದೆ. ಬಾದಾಮಿ ಕೂಡ ಬೆಲೆ ಇಳಿಸಿಕೊಂಡಿದೆ. ತೋಟಗಾರಿಕೆ ಇಲಾಖೆಯು ಹಣ್ಣಿನ ಮಾರಾಟದ ದರವನ್ನು ನಿಗದಿ ಮಾಡಿದೆ.

‘ಗ್ರಾಹಕರಿಂದ ರೈತರಿಗೆ ನೇರ ಮಾರಾಟ ಕಲ್ಪಿಸುವ ಮೇಳ ಇದಾಗಿದೆ. ರಾಸಾಯನಿಕ, ಕಾರ್ಬೈಡ್ ಮುಕ್ತ ಮಾವಿನ ಹಣ್ಣುಗಳು ಸಿಗಲಿವೆ. ಭಾನುವಾರದವರೆಗೂ ಮಾರಾಟ ಇರಲಿದೆ’ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂಗಡಿ ತಿಳಿಸಿದರು.

‘ಹವಾಮಾನ ವೈಪರೀತ್ಯದ ಕಾರಣಕ್ಕೆ ಈ ಬಾರಿ ಮಾವು ಕೊಂಚ ತಡವಾಗಿ ಕಟಾವಾಗುತ್ತಿದೆ. ಎಲ್ಲ ಜಿಲ್ಲೆಗಳಲ್ಲಿಯೂ ಏಕ ಕಾಲಕ್ಕೆ ಉತ್ಪನ್ನ ಮಾರಾಟಕ್ಕೆ ಬಂದಿರುವ ಕಾರಣ ಬೆಲೆ ಕಡಿಮೆಯಾಗಿದೆ’ ಎಂದು ಮಾಹಿತಿ ನೀಡಿದರು.

ಸಸ್ಯ ಸಂತೆ: ಮೇಳದಲ್ಲಿ ಸಸ್ಯ ಸಂತೆಯೂ ಇದ್ದು, ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಸಸಿಗಳ ಮಾರಾಟ ನಡೆದಿದೆ. ಮಾವು, ಸಪೋಟ, ಪಪ್ಪಾಯಿ, ನುಗ್ಗೆ, ಸೀಬೆ, ನೇರಳೆ, ನಿಂಬೆ, ಕರಿಬೇವು, ಸೀತಾಫಲ, ವೀಳ್ಯದೆಲೆ, ಬೆಟ್ಟದ ನೆಲ್ಲಿ, ಬೆಣ್ಣೆಹಣ್ಣು ಹಾಗೂ ಹಲಸು ಸಸ್ಯಗಳು ಮಾರಾಟವಾಗುತ್ತಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-39-1260386092

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.