ಮೈಸೂರು: ನೈರುತ್ಯ ರೈಲ್ವೆ ಮೈಸೂರು ವಿಭಾಗವು ಇಲ್ಲಿನ ಕುವೆಂಪುನಗರದಲ್ಲಿರುವ ಮುಂಗಡ ಟಿಕೆಟ್ ಕಾಯ್ದಿರಿಸುವ ಕೌಂಟರ್ನಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ‘ನ್ಯೂ ಜನರೇಷನ್ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್’ (ಪಿಆರ್ಎಸ್) ಪ್ರಾರಂಭಿಸಿದೆ.

‘ಇದರೊಂದಿಗೆ, ಕುವೆಂಪುನಗರ ಕೇಂದ್ರವು ಭಾರತೀಯ ರೈಲ್ವೆಯಲ್ಲಿ ಮೊದಲ ಹೊರವಲಯ ಕೇಂದ್ರ (ನಾನ್ ರೈಲ್ ಹೆಡ್) ಸ್ಥಳವಾಗಿ, ನೂತನ ತಂತ್ರಜ್ಞಾನದೊಂದಿಗೆ ಅಡ್ವಾನ್ಸ್ ಪ್ಯಾಸೆಂಜರ್ ಆಪರೇಟಿಂಗ್ ಸಿಸ್ಟಮ್ (ಎಪಿಒಎಸ್) ಆಧಾರಿತ ಪಿಆರ್ಎಸ್ ಸೇವೆ ನೀಡುವ ಹೆಗ್ಗಳಿಕೆ ಪಡೆದಿದೆ’ ಎಂದು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ತಿಳಿಸಿದ್ದಾರೆ.

‘ಈ ವ್ಯವಸ್ಥೆಯು ಪ್ರಯಾಣಿಕರ ಅನುಕೂಲತೆ ಹೆಚ್ಚಿಸಲು ವೇಗವಾದ ಮತ್ತು ವಿಶ್ವಾಸಾರ್ಹ ಕಾಯ್ದಿರಿಸುವ ಸೇವೆ ಒದಗಿಸುತ್ತದೆ. ಯುಪಿಐ ಆಧಾರಿತ ಪಾವತಿ ಆಯ್ಕೆ ಸಂಯೋಜಿಸಿರುವುದರಿಂದ ನಗದು ರಹಿತ ವಹಿವಾಟು ಸಾಧ್ಯವಾಗಿದೆ. ಪ್ರಯಾಣಿಕರಿಗೆ ಆಧುನಿಕ, ಸುರಕ್ಷಿತ ಮತ್ತು ಬಳಕೆದಾರ ಸ್ನೇಹಿ ಟಿಕೆಟ್ ಸೇವೆಯನ್ನು ಕಲ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

‘ಇದರೊಂದಿಗೆ ಮೈಸೂರು ವಿಭಾಗವು ಡಿಜಿಟಲ್ ಪರಿವರ್ತನೆ ಮತ್ತು ಉತ್ತಮ ಗ್ರಾಹಕ ಸೇವೆಯತ್ತ ಬದ್ಧತೆಯನ್ನು ಮುಂದುವರಿಸಿದೆ. ಸಾಂಪ್ರದಾಯಿಕ ರೈಲು ನಿಲ್ದಾಣಗಳ ಹೊರತಾಗಿ ಮುಂಗಡ ಕಾಯ್ದಿರಿಸುವ ಸೌಲಭ್ಯಗಳನ್ನು ವಿಸ್ತರಿಸಿದೆ. ಪ್ರಯಾಣಿಕರು ಈಗ ಕುವೆಂಪುನಗರದಲ್ಲಿ ಸುಲಭ ಮತ್ತು ತೊಂದರೆರಹಿತ ಟಿಕೆಟ್ ಬುಕಿಂಗ್ ಸೇವೆ ಪಡೆಯಬಹುದಾಗಿದೆ. ಇದರಿಂದ ರೈಲು ನಿಲ್ದಾಣಗಳಲ್ಲಿನ ಕೌಂಟರ್ಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ’ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.