ಮೈಸೂರು: ‘ಕೆ.ವಿ.ಮಲ್ಲೇಶ್ರಿಗೆ ಇದು ಕೇವಲ ಸನ್ಮಾನವಲ್ಲ, ಅವರಿಗೆ ಒಲಿದ ಆಶೀರ್ವಾದ’ ಎಂದು ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಹೇಳಿದರು.

ಇಲ್ಲಿನ ರವೀಂದ್ರನಗರದ ರವಿತೇಜ ಕನ್ವೆನ್ಷನ್ ಹಾಲ್ನಲ್ಲಿ ಅನಿಕೇತನ ಟ್ರಸ್ಟ್ ವತಿಯಿಂದ ಶುಕ್ರವಾರ ನಡೆದ ಕೆ.ವಿ.ಮಲ್ಲೇಶ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೆ.ವಿ.ಮಲ್ಲೇಶ್ ಎಂದಿಗೂ ಸನ್ಮಾನ ಅಪೇಕ್ಷೆಸಿದವರಲ್ಲ. ಸಜ್ಜನ ವ್ಯಕ್ತಿತ್ವ ಉಳ್ಳವರು. ಉತ್ತಮ ನಡವಳಿಕೆ, ಸೌಮ್ಯ ಸ್ವಭಾವ ಮತ್ತು ಎಲ್ಲರೊಂದಿಗೂ ಪ್ರೀತಿಯಿಂದ ವರ್ತಿಸುವ ಗುಣ ಅವರಲ್ಲಿದೆ. ಯಾರಿಗೂ ಕೆಟ್ಟದ್ದನ್ನು ಬಯಸದೆ, ಅಹಿತ ಉಂಟು ಮಾಡಿದವರಿಗೂ ಒಳಿತು ಬಯಸುವ ಮನೋಭಾವ ಹೊಂದಿರುವ ವ್ಯಕ್ತಿ’ ಎಂದು ಬಣ್ಣಿಸಿದರು.

‘ನಮ್ಮ ಸಖ್ಯ 20 ವರ್ಷಕ್ಕೂ ಹೆಚ್ಚು. ಅವರೊಬ್ಬ ಉತ್ತಮ ಸ್ನೇಹಜೀವಿ. ಅವರೊಂದಿಗಿನ ಒಡನಾಟ ದೀರ್ಘ’ ಎಂದರು.

ಸಮಾರಂಭದಲ್ಲಿ ಕೆ .ವಿ.ಮಲ್ಲೇಶ್ ಅವರನ್ನು ಸನ್ಮಾನಿಸಲಾಯಿತು.

ಎಂ.ಡಿ.ಪಲ್ಲವಿ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಹಾಗೂ ವಚನ ಗಾಯನ ನಡೆಯಿತು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಧಾನಪರಿಷತ್ ಸದಸ್ಯ ಶಿವಕುಮಾರ್, ಮುಖಂಡರಾದ ಆರ್.ಮೂರ್ತಿ, ಎಚ್.ವಿ.ರಾಜೀವ್, ಬೈರಪ್ಪ, ಶಿವಪ್ಪ, ಮರಿ ತಿಬ್ಬೇಗೌಡ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-39-1663196445

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.