ಮೈಸೂರು: ‘ರಾಜ್ಯ ಸರ್ಕಾರವು ಕೆರೆಗಳ ಬಫರ್ ವಲಯವನ್ನು 30 ಮೀಟರ್ಗಿಂತಲೂ ಕಡಿತಗೊಳಿಸಿರುವುದು ಕೆರೆಗಳ ಉಳಿವಿಗೆ ಕಂಟಕವಾಗಿದೆ’ ಎಂದು ಪರಿಸರ ಉಳಿಸಿ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.

‘ಇದರಿಂದ ಕೆರೆಗಳ ವಿಸ್ತೀರ್ಣ ಕುಂಠಿತವಾಗುತ್ತದೆ. ಹೂಳು ತೆಗೆಯುವುದು ಮುಂತಾದ ಜೀರ್ಣೋದ್ಧಾರ ಕೆಲಸಗಳು ಸಾಧ್ಯವಾಗುವುದಿಲ್ಲ. ಒಳಹರಿವಿನ ಮೂಲಗಳು, ಮಾರ್ಗವೂ ನಾಶವಾಗುತ್ತದೆ. ತಜ್ಞರ ಸಮಿತಿ ಸಲಹೆ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸದೇ ರಾಜಕೀಯ ಪ್ರಭಾವದಿಂದ ಈ ನಿಯಮ ಜಾರಿಗೆ ತರಲಾಗಿದೆ’ ಎಂದು ಸಮಿತಿ ಸಂಚಾಲಕ ಕಿರಣ್ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

‘ಕೂಡಲೇ ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಿ ಕನಿಷ್ಠ 100 ಮೀಟರ್ ಬಫರ್ ವಲಯ ನಿಗದಿ ಮಾಡಬೇಕು. ಈಗ ತಂದಿರುವ ನಿಯಮದ ಬಗ್ಗೆ ಕೆರೆ ಪ್ರಾಧಿಕಾರವು ಬಹಿರಂಗ ಹೇಳಿಕೆ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-39-1271582864

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.