ಮೈಸೂರು: ‘ಎಸ್ಐಆರ್ (ಸ್ಪೆಷಲ್ ಇನ್ಟೆನ್ಸಿವ್ ರಿವಿಷನ್) ಕುರಿತು ಸುಳ್ಳು ಮಾಹಿತಿ ನೀಡಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿರುವ ಹಾಗೂ ದೇಶದ ನಾಗರಿಕರಲ್ಲದವರ ಪರವಾಗಿ ರಾಷ್ಟ್ರದ್ರೋಹದ ಕೆಲಸ ಮಾಡುತ್ತಿರುವ ಎಂ.ಲಕ್ಷ್ಮಣ್ ವಿರುದ್ಧ ಗೃಹ ಇಲಾಖೆ ಕ್ರಮವಹಿಸಬೇಕು’ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜೆ.ಮಹೇಶ್ ಒತ್ತಾಯಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ‘ಎಂ.ಲಕ್ಷ್ಮಣ್ ಅವರು ಎಸ್ಐಆರ್ ಮೂಲಕ ರಾಜ್ಯದಲ್ಲಿ 80 ಲಕ್ಷ ಮತದಾರರನ್ನು ಹಾಗೂ ಎನ್.ಆರ್ ಕ್ಷೇತ್ರವೊಂದರಲ್ಲೇ 43 ಸಾವಿರ ಮುಸ್ಲಿಂ ಮತದಾರರನ್ನು ಕೈಬಿಡಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ನಾಗರಿಕರು ಎನ್ನುವುದಕ್ಕೆ ದಾಖಲೆ ಇಲ್ಲದ ಅಷ್ಟು ಜನ ಒಂದು ಕ್ಷೇತ್ರದಲ್ಲಿ ಹೇಗಿದ್ದಾರೆ ಎಂಬುದಕ್ಕೆ ಅವರು ಉತ್ತರ ನೀಡಬೇಕು’ ಎಂದರು.

‘2002ರ ನಂತರ ಮತದಾನದ ಹಕ್ಕು ಪಡೆದವರನ್ನು ಎಸ್ಐಆರ್ ಮೂಲಕ ಪರಿಶೀಲಿಸಲಾಗುತ್ತಿದೆ. ಇದು ಚುನಾವಣಾ ಆಯೋಗ ಮಾಡುತ್ತಿದ್ದು, ಕೇಂದ್ರ ಸರ್ಕಾರದ ಪಾತ್ರವಿಲ್ಲ. ರಾಜ್ಯದಲ್ಲಿ ಎಸ್ಐಆರ್ ಮ್ಯಾಪಿಂಗ್ ಆರಂಭವಾಗಿದೆಯಷ್ಟೇ, ನೋಟಿಫಿಕೇಶನ್ ನಡೆದಿಲ್ಲ. ಈಗಲೇ ಸುಳ್ಳು ಹರಡುವ ಕೆಲಸ ಆರಂಭಿಸಿದ್ದಾರೆ. ಒಳ ನುಸುಳುಕೋರರಿಗೆ ಕಾಂಗ್ರೆಸ್ ಯಾಕೆ ಬೆಂಬಲಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಪರಮೇಶ್ವರ್ ತಮ್ಮ ಪಕ್ಷದ ವಕ್ತಾರನ ಬಗ್ಗೆ ಗಮನವಿಟ್ಟು ಕ್ರಮವಹಿಸಬೇಕು’ ಎಂದು ಒತ್ತಾಯಿಸಿದರು.

‘ನುಸುಳುಕೋರರನ್ನು ಬೆಂಬಲಿಸಿದ್ದಕ್ಕಾಗಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯದಲ್ಲಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಅದೇ ರೀತಿಯ ಕೆಲಸ ಮಾಡುತ್ತಿರುವ ಲಕ್ಷ್ಮಣ್ನನ್ನು ತಕ್ಷಣ ಬಂಧಿಸಬೇಕು. ಕೇರಳದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಎಸ್ಐಆರ್ ನಮ್ಮ ಗೆಲುವಿಗೆ ಸಹಾಯವಾಯಿತು ಎಂದಿದ್ದಾರೆ. ತಮಗೆ ಲಾಭವಾದರೆ ಎಸ್ಐಆರ್, ಇವಿಎಂ ಸರಿ ಇಲ್ಲದಿದ್ದರೆ ಅದರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ’ ಎಂದು ಆರೋಪಿಸಿದರು.

ಬಿಜೆಪಿ ಮುಖಂಡರಾದ ರುದ್ರಮೂರ್ತಿ, ಮಹೇಶ್ ರಾಜೇ ಅರಸ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-39-1760634524

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.