ಮೈಸೂರು: ‘ಸರ್ಕಾರಿ ಪರವಾನಗಿ ಪಡೆದ ಭೂ ಮಾಪಕರ ನೌಕರಿಯನ್ನು ಕಾಯಂಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು’ ಎಂದು ಆಗ್ರಹಿಸಿ ಭೂಮಾಪಕರು ಗುರುವಾರ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.

ನಗರದ ಕೋಟೆ ಆಂಜನೇಯ ಸ್ವಾಮಿ ದೇಗುಲದಲ್ಲಿ ಜಮಾಯಿಸಿದ ಮೈಸೂರು ವಿಭಾಗದ ಜಿಲ್ಲೆಗಳ ಭೂಮಾಪಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಜಿಲ್ಲಾಧಿಕಾರಿ ಕಚೇರಿಯವರೆಗೆ ರ್ಯಾಲಿ ನಡೆಸಿದ ನಂತರ ನಜರ್ಬಾದ್ನ ಖಾಸಗಿ ಕಲ್ಯಾಣ ಮಂಟಪದಲ್ಲಿ ಸಮಾವೇಶ ನಡೆಸಿದರು.

ಪರವಾನಗಿ ಪಡೆದ ಭೂ ಮಾಪಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ತಿರುಮಲೇಗೌಡ ಮಾತನಾಡಿ, ‘2002ರಿಂದಲೂ ಸರ್ಕಾರದ ಪರವಾನಗಿ ಪಡೆದು ಸೇವೆ ಸಲ್ಲಿಸುತ್ತಿರುವ 4,500ಕ್ಕೂ ಹೆಚ್ಚು ಭೂ ಮಾಪಕರಿಗೆ ಸೇವಾ ಭದ್ರತೆ ಇಲ್ಲದಾಗಿದೆ. ಕೂಡಲೇ ಕಾಯಂಗೊಳಿಸಬೇಕು. ಸಮಾನ ಕೆಲಸ ಮಾಡುತ್ತಿರುವ ನಮಗೆ ಸಮಾನ ವೇತನ ನೀಡಬೇಕು’ ಎಂದು ಒತ್ತಾಯಿಸಿದರು.

‘ಸದ್ಯಕ್ಕೆ ಭೂ ಮಾಪನದ ಒಂದು ಕೆಲಸ ಮುಗಿಸಿದರೆ ಕೇವಲ ₹1,200 ನೀಡಲಾಗುತ್ತಿದೆ. ಒಂದು ವೇಳೆ ವ್ಯಾಜ್ಯ, ವಿವಾದಗಳಿಂದ ಅಡ್ಡಿಯುಂಟಾದಲ್ಲಿ ಕೇವಲ ₹360 ದೊರೆಯುತ್ತಿದೆ. ಸರ್ಕಾರಿ ಭೂ ಮಾಪಕರಂತೆಯೇ ವಿದ್ಯಾಭ್ಯಾಸ ಮಾಡಿ, ತರಬೇತಿ, ಪರೀಕ್ಷೆ ಉತ್ತೀರ್ಣ ಅರ್ಹತೆ ಪಡೆದಿದ್ದೇವೆ. ಹೊಸ ನೇಮಕಾತಿ ಕೈಬಿಟ್ಟು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು’ ಎಂದರು.

‘ಸರ್ಕಾರದ ಯೋಜನೆಗಳಾದ ಪೋಡಿ ಮುಕ್ತ ಅಭಿಯಾನ, ದರಾಖಾಸ್ತು ಪೋಡಿ, ನಕ್ಷಾ ಯೋಜನೆ, ಮುಜರಾಯಿ ದೇವಸ್ಥಾನ, ಕೆರೆ, ನಾಲೆ, ವಿದ್ಯುತ್ ತಂತಿ ಮಾರ್ಗ ಸರ್ವೆ ಕೆಲಸಲ್ಲಿ ಕನಿಷ್ಠ ಸೇವಾ ಶುಲ್ಕ ಪಡೆದು ಇಲಾಖೆಗೆ ಹೆಸರು ತಂದಿದ್ದೇವೆ. ವಿಶೇಷ ನೇಮಕಾತಿ ಅಡಿ ಕಾಯಂಗೊಳಿಸಿ ಆಧುನಿಕ ಜೀತ ಪದ್ಧತಿಯಿಂದ ವಿಮುಕ್ತಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಫೈಲ್ಗೆ ಇಂತಿಷ್ಟು ಹಣ ಎಂಬ ಕೂಲಿ ಬದಲು ವೇತನ ವ್ಯವಸ್ಥೆ, ಆರೋಗ್ಯ ವಿಮೆ, ಭವಿಷ್ಯ ನಿಧಿ, ಪಿಂಚಣಿ ಸೌಲಭ್ಯ ಸಿಗಬೇಕು. ಬೇಡಿಕೆಗಳನ್ನು ಈಡೇರಿಸುವವರೆಗೆ ಸರ್ಕಾರಿ ಭೂಮಾಪಕರು ಮತ್ತು ಪರವಾನಗಿ ಭೂ ಮಾಪಕರ ಹೊಸ ನೇಮಕಾತಿ ಮಾಡಬಾರದು. ನೇಮಕಾತಿ ಅಧಿಸೂಚನೆಗಳನ್ನು ಕೂಡಲೇ ರದ್ದು ಮಾಡಬೇಕು’ ಎಂದರು.

ಸಂಘದ ಉಪಾಧ್ಯಕ್ಷ ಡಿ.ಎಂ.ಪ್ರಸನ್ನಕುಮಾರ್, ಗೌರಾವಧ್ಯಕ್ಷ ಕೆ.ಪಿ.ಭಾರ್ಗವಲು, ಪ್ರಧಾನ ಕಾರ್ಯದರ್ಶಿ ಎನ್.ಕೆ.ಸಿದ್ದರಾಜು, ಎಂ.ದ್ವಾರಕೀಶ್, ಎಲ್.ಕೋದಂಡರಾಮ, ಜಿ.ಎಸ್.ನಟೇಶ್ ಪ್ರಭುರಾಜ್, ಸದಸ್ಯರಾದ ಬಚ್ಚೇಗೌಡ, ಪ್ರಾಣೇಶ್, ಷಣ್ಮುಖ, ಧರಣೇಂದ್ರಕುಮಾರ್, ಮಹದೇವೇಗೌಡ, ಎಂ.ಎಸ್. ಪ್ರಕಾಶ್, ಕೆ. ಶಿವಣ್ಣ, ಕೆ.ಎನ್. ಕುಮಾರ್, ವಿಜಯಕುಮಾರ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-37-931051624

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.