ಮೈಸೂರು: ಸರ್ಕಾರಿ ಪರವಾನಗಿ ಪಡೆದ ಭೂ ಮಾಪಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಏ.9ರಂದು ಬೆಳಿಗ್ಗೆ 9.30ಕ್ಕೆ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ರ್ಯಾಲಿ ನಡೆಯಲಿದೆ ಎಂದು ರಾಜ್ಯ ಸರ್ಕಾರಿ ಪರವಾನಗಿ ಪಡೆದ ಭೂ ಮಾಪಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪವನ್ ತಿಳಿಸಿದರು.

‘ಬೇಡಿಕೆ ಈಡೇರಿಕೆಗಾಗಿ ಈಗಾಗಲೇ ಕೆಲಸ ಸ್ಥಗಿತಗೊಳಿಸಿ ಹೋರಾಟ ನಡೆಸಲಾಗುತ್ತಿದೆ. ಅದರ ಮುಂದುವರಿದ ಭಾಗವಾಗಿ ನಡೆಯಲಿರುವ ರ್ಯಾಲಿಯಲ್ಲಿ ಮೈಸೂರು ವಿಭಾಗದ ಸುಮಾರು 2 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾಹಿತಿ ನೀಡಿದರು.

‘ಸದ್ಯಕ್ಕೆ ಭೂ ಮಾಪನದ ಒಂದು ಕೆಲಸ ಮುಗಿಸಿದರೆ ಕೇವಲ ₹1,200 ನೀಡಲಾಗುತ್ತಿದೆ. ಒಂದು ವೇಳೆ ವ್ಯಾಜ್ಯ, ವಿವಾದಗಳಿಂದ ಅಡ್ಡಿಯುಂಟಾದಲ್ಲಿ ಕೇವಲ ₹360 ದೊರೆಯುತ್ತಿದೆ. ನಾವು ಸಹ ಸರ್ಕಾರಿ ಭೂ ಮಾಪಕರಂತೆಯೇ ವಿದ್ಯಾಭ್ಯಾಸ ಮಾಡಿ, ತರಬೇತಿ, ಪರೀಕ್ಷೆ ಉತ್ತೀರ್ಣ ಅರ್ಹತೆ ಪಡೆದಿದ್ದೇವೆ. ಸರ್ಕಾರ ನಮಗೂ ಸಮಾನ ವೇತನ ನೀಡಬೇಕು. ಸೇವೆ ಕಾಯಂಗೊಳಿಸಬೇಕು. ಹೊಸ ನೇಮಕಾತಿ ಕೈಬಿಟ್ಟು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಆಗ್ರಹಿಸಿದರು.

ಸಂಘದ ಪದಾಧಿಕಾರಿಗಳಾದ ಮಹದೇವೇಗೌಡ, ಎಂ.ಎಸ್. ಪ್ರಕಾಶ್, ಕೆ. ಶಿವಣ್ಣ, ಕೆ.ಎನ್. ಕುಮಾರ್, ವಿಜಯಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-39-1997394103

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.