ಮೈಸೂರು: ‘ದೇಶದ ಎಲ್ಲ ರಾಜ್ಯಗಳ ವಿಧಾನಮಂಡಲಗಳ ನಡಾವಳಿ ಮತ್ತು ನಿಯಮಗಳಲ್ಲಿ ಏಕರೂಪತೆ ತರಲು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು, 6 ವಿಧಾನಸಭಾ ಸ್ಪೀಕರ್ಗಳ ಸಮಿತಿ ರಚಿಸಿದ್ದಾರೆ. ಸಮಿತಿಯು ಎಲ್ಲ ಸ್ಪೀಕರ್ಗಳ ಜೊತೆ ಸಭೆ ನಡೆಸಿ ವರದಿ ನೀಡಲಿದೆ’ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ಸಮಿತಿ ಸಭೆ ನಂತರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ‘ಉತ್ತರ ಪ್ರದೇಶ ಸ್ಪೀಕರ್ ಸತೀಶ್ ಮಹಾನಾ ಸಮಿತಿಅಧ್ಯಕ್ಷರಾಗಿದ್ದು, ನಾಗಾಲ್ಯಾಂಡ್, ಹಿಮಾಚಲ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮತ್ತು ದೆಹಲಿ ವಿಧಾನಸಭೆಗಳ ಅಧ್ಯಕ್ಷರು ಸದಸ್ಯರಾಗಿದ್ದಾರೆ. ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ವರದಿಯನ್ನು ಸಮಿತಿಯು ನೀಡಲಿದೆ’ ಎಂದರು.

‘1881ರಲ್ಲಿ ಮೈಸೂರಿನಲ್ಲಿ ಪ್ರಜಾಪ್ರತಿನಿಧಿ ಸಭೆ ಸ್ಥಾಪನೆಯಾದ್ದರಿಂದ ಇಲ್ಲಿಯೇ ಮೊದಲ ಸಭೆ ಆಯೋಜಿಸಲಾಗಿದೆ. ಮುಂದಿನ ಸಭೆ ಒಂದೂವರೆ ತಿಂಗಳಲ್ಲಿ ದೆಹಲಿಯಲ್ಲಿ ನಡೆಯಲಿದೆ’ ಎಂದರು.

ಸಮಿತಿ ಅಧ್ಯಕ್ಷ ಸತೀಶ್ ಮಹಾನಾ, ‘ಪ್ರತಿ ರಾಜ್ಯದ ವಿಧಾನಸಭೆಯು ತನ್ನದೇ ನಡಾವಳಿ ಹೊಂದಿದೆ. ಏಕರೂಪತೆಯನ್ನು ತರಲು ಸಮಿತಿಯು 6 ತಿಂಗಳಲ್ಲಿ ಲೋಕಸಭೆಗೆ ವರದಿ ನೀಡಲಿದೆ’ ಎಂದು ತಿಳಿಸಿದರು.

‘ಅಧಿವೇಶನದ ಕಲಾಪ ಅವಧಿಯು ಕಡಿಮೆಯಾಗುತ್ತಿದ್ದು, ಕನಿಷ್ಠ 30 ದಿನಗಳನ್ನು ನಿಗದಿ ಪಡಿಸಬೇಕಿದೆ’ ಎಂದರು.

‘ಹೊಸ ಮಸೂದೆಗಳ ಚರ್ಚೆಯಲ್ಲಿ ಸದಸ್ಯರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ತಿದ್ದುಪಡಿಯ ಜೊತೆಗೆ ಉತ್ತಮ ಕಾಯ್ದೆಯಾಗಿ ಹೊಮ್ಮಲು ಸಂವಾದಗಳು ಅಗತ್ಯ’ ಎಂದು ಪ್ರತಿಪಾದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-51-892789350

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.