ಮೈಸೂರು: ಲೆನ್ಸ್ಕಾರ್ಟ್ ತನ್ನ ಸಿಬ್ಬಂದಿ ಧಾರ್ಮಿಕ ಗುರುತು, ಬಿಂದಿ, ತಿಲಕ, ಧರಿಸುವುದಕ್ಕೆ ನಿರ್ಬಂಧ ವಿಧಿಸಿರುವುದನ್ನು ಖಂಡಿಸಿ ಹಿಂದು ಜಾಗರಣ ವೇದಿಕೆ ಮೈಸೂರು ಮಹಾನಗರ ಘಟಕದ ಸದಸ್ಯರು ಬುಧವಾರ ಡಿ.ದೇವರಾಜ ಅರಸು ರಸ್ತೆಯಲ್ಲಿರುವ ಲೆನ್ಸ್ಕಾರ್ಟ್ ಕಂಪೆನಿಯ ಕಚೇರಿ ಮುಂಭಾಗ ಪ್ರತಿಭಟಿಸಿ ಸಿಬ್ಬಂದಿಗೆ ತಿಲಕ ಇಟ್ಟು, ದಾರ ಕಟ್ಟಿದರು.

ಸಂಘಟನೆ ಮುಖಂಡ ವಸಂತ್ಕುಮಾರ್ ಮಾತನಾಡಿ, ‘ಕಂಪನಿಯವರು ತಮ್ಮ ಮಳಿಗೆಯ ನೌಕರರಿಗೆ ಬಿಂದಿ ಹಚ್ಚಿಕೊಳ್ಳದಂತೆ, ಮೂಗುತಿ ಧರಿಸದಂತೆ, ಬಳೆ ತೊಡದಂತೆ ನಿರ್ಬಂಧ ವಿಧಿಸಲಾಗಿದೆ, ಇದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆಯ ಕಾರ್ಯಕಾರಿ ಸಮಿತಿ ಸದಸ್ಯ ಸಂದೇಶ್, ವಿದ್ಯಾರ್ಥಿ ಪ್ರಮುಖ್ ಶ್ರೀನಿಧಿ, ಆರ್ಜೆ ಅವಿನಾಶ್, ಸರ್ವಜನ ಹಿತರಕ್ಷಣಾ ಮಹಿಳಾ ವೇದಿಕೆ ರಾಜ್ಯಾಧ್ಯಕ್ಷೆ ಯಶೋಧಾ ನಾರಾಯಣ್, ಪ್ರಧಾನ ಕಾರ್ಯದರ್ಶಿ ಯಶೋಧಾ ರಾಜ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-38-419625273

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.