ಮೈಸೂರು: ಇಲ್ಲಿನ ದಟ್ಟಗಳ್ಳಿಯ ಲಿಂಗಾಂಬುಧಿ ಕೆರೆ ರಾಜಕಾಲುವೆಗೆ ಒಳಚರಂಡಿ ನೀರು ಸೇರುವುದನ್ನು ತಪ್ಪಿಸಿ ಎಂದು ಶಾಸಕ ಜಿ.ಟಿ.ದೇವೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿ 3 ತಿಂಗಳು ಕಳೆದರೂ ಯಾವುದೇ ಬದಲಾವಣೆಯಾಗಿಲ್ಲ.

ನಿತ್ಯವೂ ರಾಜಕಾಲುವೆ ಮೂಲಕ ಕೊಳಚೆ ನೀರು, ಪ್ಲಾಸ್ಟಿಕ್ ಬಾಟಲಿಗಳ ರಾಶಿ ಲಿಂಗಾಂಬುಧಿ ಒಡಲನ್ನು ಸೇರುತ್ತಿದ್ದು, ಸುತ್ತಲಿನ ವಾತಾವರಣ ಕಲುಷಿತವಾಗುತ್ತಿದೆ. ಈ ಭಾಗದ ಪರಿಸರಕ್ಕೆ ಜೀವ ಕೇಂದ್ರವಾದ ಕೆರೆಯು ಕೊಳಚೆ ತಾಣವಾಗಿ ಮಾರ್ಪಾಡಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೆರೆ ರಕ್ಷಿಸುವಂತೆ ಸುತ್ತಲಿನ ನಿವಾಸಿಗರು, ಪರಿಸರಪ್ರಿಯರ ಸತತ ಆಗ್ರಹದ ಬಳಿಕ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಹಾಗೂ ಇತರ ಅಧಿಕಾರಿಗಳೊಂದಿಗೆ ಜನವರಿಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಜಿ.ಟಿ.ದೇವೇಗೌಡ ಅವರು, ‘ರಾಜಕಾಲುವೆಯಲ್ಲಿ ಮಳೆನೀರು ಮಾತ್ರವೇ ಹರಿಯಬೇಕು. ಡಿ.ಸಿ. ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಶಾಶ್ವತ ಪರಿಹಾರ ಕಲ್ಪಿಸುವೆ’ ಎಂದು ಭರವಸೆ ನೀಡಿದ್ದರು.

‘ದುರಸ್ತಿ ಕಾಮಗಾರಿ ಕ್ರಿಯಾ ಯೋಜನೆ ತಯಾರಿಸಿ ನೀಡುವಂತೆ ಪಾಲಿಕೆ ಆಯುಕ್ತರಿಗೂ ಸೂಚಿಸಿದ್ದರು. ಕೆರೆಗೆ ಚರಂಡಿ ನೀರು ಸೇರದಂತೆ ಹೊಸದಾಗಿ ಪೈಪ್ಲೈನ್, ರಿಟೈನಿಂಗ್ ವಾಲ್ ಅಳವಡಿಸಲು ತುರ್ತು ಕ್ರಮ ವಹಿಸಲಾಗುವುದು ಎಂದು ಆಯುಕ್ತರೂ ಆಶ್ವಾಸನೆ ನೀಡಿದ್ದರು. ಆದರೆ, 3 ತಿಂಗಳೂ ಕಳೆದರೂ ಈ ಬಗ್ಗೆ ಯಾವುದೇ ಕ್ರಮವಾಗಿಲ್ಲ, ಆ ಬಳಿಕ ಇತ್ತ ಕಡೆ ಯಾರೂ ಧಾವಿಸಿಲ್ಲ’ ಎಂದು ಸ್ಥಳೀಯ ನಿವಾಸಿಗಳು ದೂರುತ್ತಿದ್ದಾರೆ.

‘ರಾಜಕಾಲುವೆಯಲ್ಲಿ ಯುಜಿಡಿ ನೀರು ಉಕ್ಕುತ್ತಲೇ ಇದೆ, ಈಚೆಗೆ ಸುರಿದ ಮಳೆಯಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ತ್ಯಾಜ್ಯವು ಒತ್ತರಿಸಿ ನಿಂತಿದ್ದು, ಕೆರೆ ಸೇರಲು ಸಿದ್ಧವಾಗಿದೆ. ರಾಜಕಾಲುವೆಯಲ್ಲಿ ನಿಂತ ಕೊಳಚೆಯು ಬಿಸಿಲಿಗೆ ಒಣಗಿ ಇಡೀ ಪ್ರದೇಶಕ್ಕೆ ದುರ್ನಾತ ಬೀರುತ್ತಿದೆ. ಸೊಳ್ಳೆಗಳ ಹಾವಳಿಯೂ ಹೆಚ್ಚುತ್ತಿದ್ದು, ಹತ್ತಿರದಲ್ಲಿಯೇ 2 ಶಾಲೆಗಳಿವೆ, ರೋಗ ಭೀತಿ ಎದುರಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

‘ಮಳೆಗಾಲಕ್ಕೆ ಮೊದಲೇ ಇಲ್ಲಿನ ಸಮಸ್ಯೆ ಪರಿಹರಿಸಬೇಕು. ಸ್ಥಳ ಪರಿಶೀಲಿಸಿ ವಾಸ್ತವ ಕಂಡರೂ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಆಶ್ವಾಸನೆ ನೀಡುವುದಷ್ಟೇ ಅವರ ಕೆಲಸವೇ? ನೈಸರ್ಗಿಕ ತಾಣವಾಗಿ ಉಳಿದಿರುವ ಕೆಲವೇ ಪ್ರದೇಶಗಳ ರಕ್ಷಣೆಗೆ ಮುಂದಾಗುವುದು ತುರ್ತಲ್ಲವೇ’ ಎಂದು ವಿಶ್ವವಿದ್ಯಾಲಯ ಬಡಾವಣೆ ನಿವಾಸಿ ಪ್ರೊ.ಕೆ.ಎ.ನಾಣಯ್ಯ ಪ್ರಶ್ನಿಸಿದರು.

ಈ ಬಗ್ಗೆ ಪ್ರತಿಕ್ರಿಯೆಗೆ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಲಭ್ಯರಾಗಲಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-39-509386675

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.