ಮೈಸೂರು: ಜಿಲ್ಲೆಯಲ್ಲಿ ಸದ್ಯ ಸರಗೂರು ಪಟ್ಟಣ ಪಂಚಾಯಿತಿ ಹೊರತುಪಡಿಸಿದರೆ, ಉಳಿದ ಯಾವುದೇ ನಗರ ಸ್ಥಳೀಯ ಸಂಸ್ಥೆಗಳಲ್ಲೂ ಜನಪ್ರತಿನಿಧಿಗಳಿಲ್ಲ! ಇವುಗಳಲ್ಲೆಲ್ಲಾ ಅಧಿಕಾರಿಗಳು ಹಾಗೂ ಆಡಳಿತಾಧಿಕಾರಿಗಳ ನೇತೃತ್ವದಲ್ಲೇ ಕಾರ್ಯನಿರ್ವಹಣೆ ನಡೆಯುತ್ತಿದೆ.

‘ಚುನಾಯಿತ ಪ್ರತಿನಿಧಿಗಳಿಲ್ಲದೇ ಇರುವುದರಿಂದಾಗಿ ಜನರ ಸಮಸ್ಯೆ, ಸಂಕಷ್ಟಗಳಿಗೆ ಸ್ಪಂದಿಸುವುದು ಮತ್ತು ಪರಿಹಾರ ಕಲ್ಪಿಸುವ ಕಾರ್ಯ ತ್ವರಿತವಾಗಿ ನಡೆಯುತ್ತಿಲ್ಲ’ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

ಸರಗೂರು ಪಟ್ಟಣ ಪಂಚಾಯಿತಿಯ ಚುನಾಯಿತ ಜನಪ್ರತಿನಿಧಿಗಳ ಅವಧಿಯೂ ಕೆಲವೇ ತಿಂಗಳಷ್ಟೇ ಇದೆ (ಸೆಪ್ಟೆಂಬರ್ವರೆಗೆ ಅಂತ್ಯಗೊಳ್ಳಲಿದೆ). ಆಡಳಿತ ಮಂಡಳಿ ಅವಧಿ ಮುಗಿದ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದಕ್ಕೆ ಸರ್ಕಾರ ಕ್ರಮ ಕೈಗೊಳ್ಳದ ಕಾರಣಗಳಿಂದಾಗಿ, ಅಧಿಕಾರಿಗಳ ದರ್ಬಾರ್ಗೆ ಆಸ್ಪದ ಮಾಡಿಕೊಟ್ಟಂತಾಗಿದೆ. ಜೊತೆಗೆ, ಅಭಿವೃದ್ಧಿ ಕಾರ್ಯಗಳ ಅನುಷ್ಠಾನದ ಮೇಲೂ ಕಾರ್ಮೋಡ ಕವಿಯುವಂತಾಗಿದೆ.

ಅನುಷ್ಠಾನಕ್ಕೆ ತೊಡಕು: ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಪ್ರಕ್ರಿಯೆಯೂ ನಿಯಮಿತವಾಗಿ ನಡೆಯುತ್ತಿಲ್ಲ. ಕೆಲವೊಮ್ಮೆ ಆ ಭಾಗದ ಶಾಸಕರೇ ಸಭೆ ನಡೆಸಿ, ಪರಿಶೀಲಿಸುತ್ತಿದ್ದಾರೆ. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ. ಆದರೆ, ಬಡಾವಣೆಗಳಲ್ಲಿ ಅಥವಾ ವಾರ್ಡ್ಗಳ ಮಟ್ಟದಲ್ಲಿ ಸಮಸ್ಯೆ ಆಲಿಸುವವರು ಇಲ್ಲವಾಗಿದ್ದಾರೆ. ಇದರಿಂದಾಗಿ, ಸ್ಥಳೀಯ ಆಡಳಿತಕ್ಕೆ ‘ಗ್ರಹಣ’ ಬಡಿದಂತಾಗಿದೆ. ಇದರಿಂ ದಾಗಿ, ಅಧಿಕಾರ ವಿಕೇಂದ್ರೀಕರಣದ ಆಶಯದ ಸಂಪೂರ್ಣ ಅನುಷ್ಠಾನಕ್ಕೆ ತೊಡಕಾಗಿ ಪರಿಣಮಿಸಿದೆ ಎಂದು ಆರೋಪಿಸಲಾಗುತ್ತಿದೆ.

ಮೈಸೂರು ಮಹಾನಗರಪಾಲಿಕೆಯೊಂದಿಗೆ, ಜಿಲ್ಲೆಯಲ್ಲಿರುವ ನಗರ ಸಭೆ ಗಳು, ಪುರಸಭೆಗಳು ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ (ಸರಗೂರು ಬಿಟ್ಟು) ಚುನಾಯಿತ ಆಡಳಿತ ಮಂಡಳಿ ಇಲ್ಲ.

ಸಮಸ್ಯೆಗಳ ಆಗರ: ಮೈಸೂರು ನಗರಕ್ಕೆ ಹೊಂದಿಕೊಂಡಿರುವ ಹಾಗೂ ಸುತ್ತಮುತ್ತ ವ್ಯಾಪಿಸಿರುವ ಹೂಟಗಳ್ಳಿ ನಗರಸಭೆ ಮತ್ತು ರಮ್ಮನಹಳ್ಳಿ, ಕಡಕೊಳ, ಬೋಗಾದಿ ಹಾಗೂ ಶ್ರೀರಾಂಪುರ ಪಟ್ಟಣ ಪಂಚಾಯಿತಿಗಳಲ್ಲಿ ಸಮಸ್ಯೆಗಳ ‘ರಾಶಿ’ಯೇ ಕಂಡುಬರುತ್ತಿದೆ. ಕುಡಿಯುವ ನೀರು ಪೂರೈಕೆ, ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ರಸ್ತೆ ನಿರ್ಮಾಣ–ದುರಸ್ತಿ, ಬೀದಿದೀಪಗಳ ನಿರ್ವಹಣೆ ಮೊದಲಾದ ಮೂಲಸೌಲಭ್ಯಗಳಿಗಾಗಿ ಪರದಾಡುತ್ತಿದ್ದಾರೆ. ಈ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವರು ಅಧಿಕಾರಿಗಳ ಬಳಿಗೇ ಎಡತಾಕಬೇಕಾದ ಪರಿಸ್ಥಿತಿ ಇದೆ. ಬಡಾವಣೆಗಳಿಗೇ ಬಂದು ಸಮಸ್ಯೆ ಆಲಿಸುವ ‘ವ್ಯವಸ್ಥೆ’ಯೇ ಇಲ್ಲವಾಗಿರುವುದು ಅವರ ಆಕ್ರೋಶಕ್ಕೆ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ.

2023ರ ನ.16ರಂದೇ ಮುಗಿದ ಎಂಸಿಸಿ ಅವಧಿ: ಮೈಸೂರು ಮಹಾನಗರಪಾಲಿಕೆ (ಎಂಸಿಸಿ)ಯ ‘ಚುನಾಯಿತ ಆಡಳಿತ ಮಂಡಳಿ’ಯ ಅಧಿಕಾರದ ಅವಧಿ 2023ರ ನ.16ರಂದು ಕೊನೆಗೊಂಡಿದೆ. ಅಲ್ಲಿಂದ ಈವರೆಗೂ ಚುನಾವಣೆಯ ಬಗ್ಗೆ ಪ್ರಕ್ರಿಯೆಯೇ ನಡೆದಿಲ್ಲ. 65 ವಾರ್ಡ್ಗಳನ್ನು ಹೊಂದಿರುವ ಈ ಮಹಾನಗರಪಾಲಿಕೆಗೆ ಯಾವಾಗ ಚುನಾವಣೆ ನಡೆಸಲಾಗುತ್ತದೆ ಎಂಬ ಸ್ಪಷ್ಟತೆ ಅಧಿಕಾರಿಗಳ ಮಟ್ಟದಲ್ಲೂ ಇಲ್ಲ. ಈ ಸ್ಥಳೀಯ ಸಂಸ್ಥೆಯಲ್ಲೂ ಬಡಾವಣೆ ಮಟ್ಟದಲ್ಲಿ ಜನರ ಬವಣೆಗಳನ್ನು ಆಲಿಸುವವರಿಲ್ಲ!

ಜಿಲ್ಲಾ, ತಾಲ್ಲೂಕು ಪಂಚಾಯಿತಿಗಳಲ್ಲೂ ಇಲ್ಲ

ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಲ್ಲಿ ಜನಪ್ರತಿನಿಧಿಗಳ ಅಧಿಕಾರದ ಅವಧಿ 2021ರಲ್ಲೇ ಮುಕ್ತಾಯವಾಗಿದೆ. ಅಂದಿನಿಂದಲೂ ಅಧಿಕಾರಿಗಳದ್ದೇ ಅಧಿಕಾರ ನಡೆಯುತ್ತಿದೆ. ಜನಪ್ರತಿನಿಧಿಗಳನ್ನು ಕಂಡುಕೊಳ್ಳುವುದು ಇಂದಿಗೂ ಸಾಧ್ಯವಾಗಿಲ್ಲ. ಪರಿಣಾಮ, ಯೋಜನೆಗಳ ನಿಯಮಿತ ಪ್ರಗತಿ ಪರಿಶೀಲನೆ, ಮೇಲ್ವಿಚಾರಣೆ, ಸಭೆಗಳು ಹಾಗೂ ಆಡಳಿತಾತ್ಮಕ ಪ್ರಗತಿಯ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ ಎನ್ನುವುದು ದೂರುಗಳಿವೆ.

ಮೈಸೂರು, ನಂಜನಗೂಡು, ತಿ.ನರಸೀಪುರ, ಹುಣಸೂರು, ಪಿರಿಯಾಪಟ್ಟಣ, ಕೃಷ್ಣರಾಜನಗರ, ಸಾಲಿಗ್ರಾಮ, ಎಚ್.ಡಿ. ಕೋಟೆ, ಸರಗೂರು ತಾಲ್ಲೂಕು ಪಂಚಾಯಿತಿಗಳಲ್ಲಿನ ಆಡಳಿತವನ್ನು ದೀರ್ಘಕಾಲದಿಂದಲೂ ಅಧಿಕಾರಿಗಳೇ ನಿರ್ವಹಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿಗಳಲ್ಲೂ ಜನಪ್ರತಿನಿಧಿಗಳ ಅಧಿಕಾರದ ಅವಧಿ ಪೂರ್ಣಗೊಂಡಿದೆ. ಇದರಿಂದಾಗಿ, ಗ್ರಾಮ ಸ್ವರಾಜ್ಯದ ಕಲ್ಪನೆ ಸಾಕಾರಕ್ಕೆ ಹಿನ್ನಡೆಯಾಗಿದೆ.

ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಶೀಘ್ರದಲ್ಲೇ ನಡೆಸುತ್ತೇವೆ. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ
ಸಿದ್ದರಾಮಯ್ಯ, ಮುಖ್ಯಮಂತ್ರಿ

ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಟುತ್ತಿವೆ. ಜನಪ್ರತಿನಿಧಿಗಳಿಲ್ಲದೇ ಆಡಳಿತ ವ್ಯವಸ್ಥೆ ಅತಂತ್ರವಾಗಿದೆ
ಸಂದೇಶ್ ಸ್ವಾಮಿ, ಮಾಜಿ ಮೇಯರ್

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-39-101664566

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.