ಮೈಸೂರು: ‘ಪರಿಸರ, ಮೈಮಾಲಿನ್ಯಕ್ಕಿಂತ ಮನೋಮಾಲಿನ್ಯ ಹೆಚ್ಚು ಅಪಾಯಕಾರಿ’ ಎಂದು ಮಹಾರತ್ನ ಟ್ರಸ್ಟ್ ಸಂಸ್ಥಾಪಕ, ಗಾಯಕ ಮೈಸೂರು ಮಹಾಲಿಂಗ ಎಂ. ಲಕ್ಷ್ಮೀಪುರ ಹೇಳಿದರು.

ಇಲ್ಲಿನ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಂಸ್ಕೃತಿಕ, ಕ್ರೀಡಾ ವೇದಿಕೆ ಹಾಗೂ ಎನ್ಎಸ್ಎಸ್ ಘಟಕದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಮೊಬೈಲ್ ಫೋನ್ ಸಂಸ್ಕೃತಿ ಬಂದ ನಂತರ ಮನಸ್ಸುಗಳು ಛಿದ್ರ ಛಿದ್ರವಾಗಿವೆ. ಈ ಬಗ್ಗೆ ಜಾಗೃತವಾಗಿರಬೇಕು. ಕೃತಕ ಬುದ್ಧಿಮತ್ತೆ ಆವರಿಸುತ್ತಿರುವ ಈ ಕಾಲದಲ್ಲಿ ಮುಂದೆ ಸ್ಮರಣಾ ಶಕ್ತಿಯೂ ಕಡಿಮೆಯಾಗುತ್ತದೆ. ಇದನ್ನೆಲ್ಲಾ ಅರ್ಥಮಾಡಿಕೊಂಡು ಪದವಿಯ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಜವಾಬ್ದಾರಿಯುತವಾಗಿ ಬದುಕು ಕಟ್ಟಿಕೊಳ್ಳಬೇಕು’ ಎಂದರು.

‘ಅಡ್ಡದಾರಿಗಳ ಮೂಲಕ ಸಾಧನೆ ಅಸಾಧ್ಯ. ಇದು ಸ್ಪರ್ಧಾತ್ಮಕ ಯುಗ. ಅವಕಾಶಗಳ ಯುಗ. ನಮ್ಮ ಶಕ್ತಿ ಮತ್ತು ದೌರ್ಬಲ್ಯ ಏನು ಎಂಬುದನ್ನು ತಿಳಿದುಕೊಂಡು ಪರಿಶ್ರಮ ಮತ್ತು ಏಕಾಗ್ರತೆಯಿಂದ ಗುರಿ ತಲುಪುವ ಕಡೆಗೆ ಗಮನ ಕೇಂದ್ರೀಕರಿಸಬೇಕು. ಇದಕ್ಕಾಗಿ ಬುದ್ಧ, ಬಸವ, ಅಂಬೇಡ್ಕರ್, ವಿವೇಕಾನಂದ, ಅಕ್ಕಮಹಾದೇವಿ ಮೊದಲಾದವರ ಆತ್ಮಕಥನ ಓದಬೇಕು’ ಎಂದು ಸಲಹೆ ನೀಡಿದರು.

‘ಸಂಗೀತ ಮತ್ತು ಕಲೆ ಮನಸ್ಸಿಗೆ ಶಾಂತಿ ನೀಡಿದರೆ, ಕ್ರೀಡೆಯು ದೇಹಕ್ಕೆ ದೃಢತೆಯನ್ನು ಒದಗಿಸುತ್ತದೆ. ಆದ್ದರಿಂದ ಕಾಲೇಜಿನಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು’ ಎಂದರು.

ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಸಮಾರೋಪ ಭಾಷಣ ಮಾಡಿದರು. ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.

ಹೊಸಮಠದ ಕಿರಿಯ ಶ್ರೀ ಸಿದ್ಧಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಾಂಶುಪಾಲೆ ಎಂ. ಶಾರದಾ ಅಧ್ಯಕ್ಷತೆ ವಹಿಸಿದ್ದರು.

ಜಿ.ಎಂ. ಅಶ್ವಿನಿ ಪ್ರಾರ್ಥಿಸಿದರು. ನಿತ್ಯಾ ಸ್ವಾಗತಿಸಿದರು. ಹರ್ಷಿತಾ ನಿರೂಪಿಸಿದರು. ಲೀಲಮ್ಮ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.