ಮೈಸೂರು: ಮಹಿಳಾ ಸಬಲೀಕರಣಕ್ಕೆ ಮೆಟ್ಟಿಲಾದ ಉನ್ನತ ಶಿಕ್ಷಣ ಕಲ್ಪಿಸುತ್ತಿರುವ ಇಲ್ಲಿನ ಜೆಎಲ್ಬಿ ರಸ್ತೆಯ ಮಹಾರಾಣಿ ಕಾಲೇಜುಗಳಿಗೆ ಅಭಿವೃದ್ಧಿಯ ಹೊಸ ರೂಪ ನೀಡುವ ಕಾರ್ಯ ನಡೆಯುತ್ತಿದೆ.

ಮಹಾರಾಣಿ ಮಹಿಳಾ ಕಲಾ ಹಾಗೂ ವಿಜ್ಞಾನ ಕಾಲೇಜು ಹಾಸ್ಟೆಲ್ ಮತ್ತು ಕಾಲೇಜು ಕಟ್ಟಡಗಳ ಸುಧಾರಣಾ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ಭರದಿಂದ ಸಾಗಿದೆ.

1917ರಲ್ಲಿ ಅಂದಿನ ಮಹಾರಾಣಿಯವರಾದ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನ ಅವರಿಂದ ಸ್ಥಾಪಿತವಾದ ಕಾಲೇಜುಗಳಿವು. ಯುವತಿಯರಿಗೆ ಅದರಲ್ಲೂ ಗ್ರಾಮೀಣ, ಬಡ ಮತ್ತು ಸಾಮಾಜಿಕವಾಗಿ ಹಿಂದುಳಿದ ಹಿನ್ನೆಲೆಯವರಿಗೆ ಉನ್ನತ ಶಿಕ್ಷಣ ದೊರೆಯಲೆಂದು ಸ್ಥಾಪಿಸಲಾಯಿತು. ಅಂದಿನಿಂದಲೂ ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರವನ್ನು ಈ ಕಾಲೇಜುಗಳು ವಹಿಸುತ್ತಿವೆ.

ವಿವಿಧೆಡೆಯಿಂದ: ಇಲ್ಲಿಗೆ ನಗರ, ಮೈಸೂರು ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಂದ, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಸೇರಿದಂತೆ ರಾಜ್ಯದ ಉತ್ತರ ಭಾಗದ ವಿವಿಧ ಜಿಲ್ಲೆಗಳಿಂದಲೂ ವಿದ್ಯಾರ್ಥಿನಿಯರು ಭವಿಷ್ಯ ಅರಸಿ ಬರುತ್ತಾರೆ. ತಮ್ಮ ಶಿಕ್ಷಣಕ್ಕಾಗಿ ಅವರು ಈ ಕಾಲೇಜುಗಳನ್ನು ಅವಲಂಬಿಸಿದ್ದಾರೆ. ಹೀಗಾಗಿ, ವರ್ಷದಿಂದ ವರ್ಷಕ್ಕೆ ಸಂಖ್ಯೆ ಹೆಚ್ಚುತ್ತಲೇ ಇದೆ. ಪರಿಣಾಮ, ಲಭ್ಯವಿರುವ ಸೌಲಭ್ಯಗಳು ಬೇಡಿಕೆಯನ್ನು ಪೂರೈಸುವುದುಕ್ಕೆ ಸಾಲುತ್ತಿಲ್ಲ. ವಿಶೇಷವಾಗಿ ಹಾಸ್ಟೆಲ್ಗೆ ಬೇಡಿಕೆ ಹೆಚ್ಚುತ್ತಿದೆ. ಈ ಕಾರಣದಿಂದಾಗಿ ಸುಧಾರಣೆಗೆ ಸರ್ಕಾರ ಕ್ರಮ ಕೈಗೊಂಡಿದೆ.

ಮೈಸೂರಿನವರೇ ಆದ, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು (ಮೊದಲ ಅವಧಿಯಲ್ಲಿ) ಮಹಾರಾಣಿ ವಾಣಿಜ್ಯ ಕಾಲೇಜಿಗೆ ಪ್ರತ್ಯೇಕವಾಗಿ ಪಡುವಾರಹಳ್ಳಿಯಲ್ಲಿರುವ ವಾಲ್ಮೀಕಿ ರಸ್ತೆಯಲ್ಲಿ ಹೊಸದಾಗಿ ಭವ್ಯವಾದ ಕಟ್ಟಡ ನಿರ್ಮಿಸಿಕೊಟ್ಟು, ಸುಧಾರಿತ ಸೌಲಭ್ಯಗಳನ್ನು ಕಲ್ಪಿಸಿದ್ದರು. ಇದೀಗ, ಅವರು ಅಧಿಕಾರದಲ್ಲಿದ್ದ ಅವಧಿಯಲ್ಲೇ ಮಹಾರಾಣಿ ಮಹಿಳಾ ಕಲಾ ಹಾಗೂ ವಿಜ್ಞಾನ ಕಾಲೇಜು ಹಾಸ್ಟೆಲ್, ಕಟ್ಟಡಗಳಿಗೆ ಅಭಿವೃದ್ಧಿಯ ‘ಗ್ಯಾರಂಟಿ’ ದೊರೆತಿದೆ.

ಪಾರಂಪರಿಕ ಕಟ್ಟಡಗಳನ್ನು ಈ ಕಾಲೇಜುಗಳು ಹೊಂದಿವೆ. ವಿಜ್ಞಾನ ಕಾಲೇಜಿನ ಕಟ್ಟಡದ ಕೆಲವು ಭಾಗ ಶಿಥಿಲವಾಗಿದ್ದು, ಕಟ್ಟಡದ ವಾಯವ್ಯ ಭಾಗವು 2022ರ ಅ.21ರಂದು ಬಿದ್ದು ಹೋಗಿತ್ತು. ಶಾಸಕ ಕೆ.ಹರೀಶ್ಗೌಡ ಅವರ ಮನವಿ ಮೇರೆಗೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಗ ಉನ್ನತ ಶಿಕ್ಷಣ ಸಚಿವರಾಗಿದ್ದ ಎಂ.ಸಿ. ಸುಧಾಕರ್, ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ವಿದ್ಯಾರ್ಥಿನಿಯರೊಂದಿಗೆ ಸಂವಾದವನ್ನೂ ನಡೆಸಿದ್ದರು. ಇದಾದ ನಂತರ ಸರ್ಕಾರದಿಂದ ₹ 170 ಕೋಟಿ ಅನುದಾನವನ್ನೂ ಒದಗಿಸಿ ಸಮಗ್ರ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳಲಾಗಿದೆ.

ಅವಶ್ಯಕತೆ ಪೂರೈಸಲು: ಈ ಯೋಜನೆಯು ಕಾಲೇಜು ಮತ್ತು ಮೈಸೂರಿನ ಐತಿಹಾಸಿಕ ಸಾರವನ್ನು ಸಂರಕ್ಷಿಸುವುದಲ್ಲದೇ, ವಿದ್ಯಾರ್ಥಿನಿಯರು ಹಾಗೂ ಅಧ್ಯಾಪಕರ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಅವಶ್ಯಕತೆಗಳನ್ನು ಪೂರೈಸುತ್ತದೆ ಎನ್ನುತ್ತಾರೆ ಅಧಿಕಾರಿಗಳು.

‘ಮಹಾರಾಣಿ ಕಾಲೇಜುಗಳಲ್ಲಿ ಕಲಿತ ಅಸಂಖ್ಯಾತ ಯುವತಿಯರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಹಲವು ನೌಕರಿಗಳನ್ನು ಕಂಡುಕೊಂಡಿದ್ದಾರೆ. ಜೀವನವನ್ನು ಉತ್ತಮವಾಗಿ ರೂಪಿಸಿಕೊಂಡಿದ್ದಾರೆ. ಮುಂದೆಯೂ ಇಲ್ಲಿಗೆ ಉನ್ನತ ಶಿಕ್ಷಣಕ್ಕೆಂದು ಬರುವ ವಿದ್ಯಾರ್ಥಿನಿಯರಿಗೆ ಉತ್ತಮ ಸೌಲಭ್ಯಗಳೊಂದಿಗೆ ಕಲಿಕೆಗೆ ಪೂರಕವಾದ ವಾತಾವರಣ ಕಲ್ಪಿಸುವ ಸದುದ್ದೇಶದಿಂದ ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗುತ್ತಿದೆ. ನಮ್ಮ ಸರ್ಕಾರವು ಮಹಿಳಾ ಶಿಕ್ಷಣ ಹಾಗೂ ಸಬಲೀಕರಣಕ್ಕೆ ನೀಡುತ್ತಿರುವ ಉತ್ತೇಜನಕ್ಕೆ ಇಂತಹ ಯೋಜನೆಗಳು ಸಾಕ್ಷಿಯಾಗಿವೆ’ ಎನ್ನುತ್ತಾರೆ ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ.

ಕಾಲೇಜು ಕಟ್ಟಡ ನಿರ್ಮಾಣದ ವಿವರ

lವಿಸ್ತೀರ್ಣ– 9292 ಚ.ಮೀ. (100020 ಚ.ಅಡಿ)– ಜಿ+3

lಯೋಜನಾ ಮೊತ್ತ– ₹54 ಕೋಟಿ

lಕಾಲೇಜು ಮುಂಭಾಗದಲ್ಲಿರುವ ಹಾಲಿ ಪಾರಂಪರಿಕ ಕಟ್ಟಡ ಮತ್ತು ಗ್ರಂಥಾಲಯ ಒಳಗೊಂಡಂತೆ ನವೀಕರಣ

lಪಾರಂಪರಿಕ ಕಟ್ಟಡದ ಮುಂಭಾಗಕ್ಕೆ ಹೊಂದಿಕೆ ಆಗುವಂತೆ ಸೆಮಿನಾರ್ ಹಾಲ್ ಬ್ಲಾಕ್ಗಳ ನಿರ್ಮಾಣ (4 ಸಂಖ್ತೆ–120 ವಿದ್ಯಾರ್ಥಿನಿಯರ ಸಾಮರ್ಥ್ಯ)

lಹಿಂಭಾಗದಲ್ಲಿನ ನೂತನ ಕಟ್ಟಡದಲ್ಲಿ (ಜಿ+3) 20 ತರಗತಿ ಕೊಠಡಿ (ತಲಾ 60 ವಿದ್ಯಾರ್ಥಿಗಳ ಸಾಮರ್ಥ್ಯ)

l10 ಪ್ರಯೋಗಾಲಯಗಳು

lವಿವಿಧೋದ್ದೇಶ ಕೊಠಡಿಗಳು (100 ವಿದ್ಯಾರ್ಥಿನಿಯರ ಸಾಮರ್ಥ್ಯದ್ದು)

ಕಾಲೇಜು ಹಾಸ್ಟೆಲ್ ಕಟ್ಟಡ

lವಿಸ್ತೀರ್ಣ 21758 ಚ.ಮೀ. (2,34,165 ಚ.ಅಡಿ) ಜಿ+5

lಯೋಜನಾ ಮೊತ್ತ ₹ 116 ಕೋಟಿ

lಎರಡು ಪ್ರತ್ಯೇಕ ಹಾಸ್ಟೆಲ್ ಬ್ಲಾಕ್ಗಳು– ಒಟ್ಟು 1,400 ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶ (ಎರಡೂ ವಿಭಾಗಕ್ಕೆ ತಲಾ 700).

lಹೊಸ ಹಾಸ್ಟೆಲ್ ಕಟ್ಟಡವು ಐದಂತಸ್ತಿನ 4 ಟವರ್ಗಳಲ್ಲಿ ನಿರ್ಮಾಣಗೊಳ್ಳಲಿದ್ದು, ಒಟ್ಟು 306 ಕೊಠಡಿಗಳನ್ನು ಹೊಂದಿರುತ್ತದೆ, ಪಿಜಿ ಬ್ಲಾಕ್ ಹಾಸ್ಟೆಲ್ ಕಟ್ಟಡ 48 ಸೇರಿದಂತೆ 354 ಕೊಠಡಿಗಳು ಲಭ್ಯವಾಗಲಿವೆ.

lಏಕಕಾಲಕ್ಕೆ 500 ಮಂದಿ ಕೂರಬಹುದಾದ ಸಾಮರ್ಥ್ಯದ 2 ಡೈನಿಂಗ್ ಹಾಲ್, 2 ಅಡುಗೆ ಕೋಣೆ ನಿರ್ಮಾಣಗೊಳ್ಳುತ್ತಿದೆ.

lಕಟ್ಟಡದ ವಿನ್ಯಾಸವನ್ನು ಮೈಸೂರಿನ ಪಾರಂಪರಿಕ ಶೈಲಿ ಹಾಗೂ ಆಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸಿದ್ದು, ಅದರಂತೆ ನಿರ್ಮಾಣ ಮಾಡಲಾಗುತ್ತಿದೆ.

lಎಲ್ಲ ಕೊಠಡಿಗಳಿಗೂ ಪೀಠೋಪಕರಣ ವ್ಯವಸ್ಥೆ ಮಾಡುವುದನ್ನು ಯೋಜನೆ ಒಳಗೊಂಡಿದೆ.

lಎಸ್ಟಿಪಿ, ಮಳೆ ನೀರು ಸಂಗ್ರಹ ನಿರ್ಮಾಣ

lಯುಪಿಎಸ್, ಸಿಸಿಟಿವಿ ಕ್ಯಾಮೆರಾ, ಅಗ್ನಿಶಾಮಕ ವ್ಯವಸ್ಥೆ

lಲ್ಯಾಂಡ್ಸ್ಕೇಪ್ ಮತ್ತು ಪಾರ್ಕಿಂಗ್ ವ್ಯವಸ್ಥೆ, ಕಾಂಪೌಂಡ್, ರಸ್ತೆ ನಿರ್ಮಾಣ

l320 ಕೆವಿಎ ಜನರೇಟರ್, 12 ಲಿಫ್ಟ್

lಬಿಸಿನೀರಿಗಾಗಿ ಸೋಲಾರ್ ಚಾವಣಿ ಅಳವಡಿಕೆ

2027ರ ಅಂತ್ಯಕ್ಕೆ ಪೂರ್ಣಗೊಳಿಸುವ ಉದ್ದೇಶ

ವಿಜ್ಞಾನ ಕಾಲೇಜು ಕಟ್ಟಡದ ಕಾಮಗಾರಿಗೆ 2025ರ ಫೆ.13ರಂದು ಚಾಲನೆ ನೀಡಲಾಗಿದ್ದು, 2027ರ ಫೆಬ್ರುವರಿ ವೇಳೆಗೆ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಪೂರ್ಣಗೊಂಡಲ್ಲಿ, ಮಹಾರಾಣಿ ವಿಜ್ಞಾನ ಕಾಲೇಜು ಕಟ್ಟಡ ನೆಲಮಹಡಿಯೊಂದಿಗೆ ಮೂರಂತಸ್ತಿನ ಕಟ್ಟಡವನ್ನು ಹೊಂದಲಿದೆ.

ಅಂತೆಯೇ, ಮಹಾರಾಣಿ ವಿಜ್ಞಾನ ಮತ್ತು ಕಲಾ ಕಾಲೇಜು ಹಾಸ್ಟೆಲ್ ಕಟ್ಟಡಗಳ ಕಾಮಗಾರಿ 2025ರ ಅ.10ರಂದು ಪ್ರಾರಂಭವಾಗಿದ್ದು, 2027ರ ಅಕ್ಟೋಬರ್ನಲ್ಲಿ ಪೂರ್ಣಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ನಿರ್ಮಾಣದ ಹೊಣೆಯನ್ನು ಉನ್ನತ ಶಿಕ್ಷಣ ಇಲಾಖೆಯ ಮೂಲಕ ಕರ್ನಾಟಕ ಗೃಹ ಮಂಡಳಿಗೆ ವಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.