ನವದೆಹಲಿ: ದೇಶದಾದ್ಯಂತ ಹಲವು ಶಾಲೆ, ಹೈಕೋರ್ಟ್ಗಳಿಗೆ ಹಾಗೂ ಸರ್ಕಾರಿ ಕಚೇರಿಗಳಿಗೆ 1,100ಕ್ಕೂ ಅಧಿಕ ಹುಸಿ ಬಾಂಬ್ ಬೆದರಿಕ ಹಾಕಿದ ವ್ಯಕ್ತಿಯನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
.ಕೋಲಾರ: ಆರ್ಟಿಒ ಕಚೇರಿಗೆ ಬಾಂಬ್ ಬೆದರಿಕೆ.
ಶ್ರೀನಿವಾಸ್ ಲೂಯಿಸ್ (47) ಬಂಧಿತ. ದೆಹಲಿ ಹಾಗೂ ಸ್ಥಳೀಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಾಡಿಗೆ ಮನೆಯಲ್ಲಿದ್ದ ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯ ಶಾಲೆ, ಹೈಕೋರ್ಟ್, ವಿಧಾನಸಭೆ ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಈತ ಬೆದರಿಕೆ ಹಾಕಿದ್ದ.

ಬೆಂಗಳೂರು ಮೂಲದ ಆರೋಪಿ, ಉನ್ನತ ಶಿಕ್ಷಣ ಪಡೆದಿದ್ದು ಇತ್ತೀಚೆಗಷ್ಟೇ ಕೆಲಸ ಕಳೆದುಕೊಂಡಿದ್ದ. ನಿವೃತ್ತ ಸರ್ಕಾರಿ ಉದ್ಯೋಗಿಯಾಗಿರುವ ತಾಯಿಯೊಂದಿಗೆ ವಾಸವವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
.ಮೆಕ್ಸಿಕೊ | ಎಲ್ ಮೆಂಚೊ ವಿರುದ್ಧ ಕಾರ್ಯಾಚರಣೆ, ಹಿಂಸಾಚಾರ: 74 ಮಂದಿ ಹತ್ಯೆ.
‘ಆತ ಮಾನಸಿಕ ಒತ್ತಡದಲ್ಲಿದ್ದ ಹಾಗೆ ಕಾಣುತ್ತದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಅಲ್ಲದೆ ಹುಸಿ ಬಾಂಬ್ ಬೆದರಿಕೆ ಹಾಕಿದ್ದರ ಬಗ್ಗೆ ಆತ ಒಪ್ಪಿಕೊಂಡಿದ್ದಾನೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಾಂಬ್ ಬೆದರಿಕೆ ಬಗ್ಗೆ ವಿವಿಧ ರಾಜ್ಯಗಳಲ್ಲಿ ಹಲವು ಎಫ್ಐಆರ್ಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
.ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.