ಮೈಸೂರು: ಇಲ್ಲಿನ ದೇವರಾಜ ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ ಮಾವಿನ ಘಮ ಮಾವು ಪ್ರಿಯರನ್ನು ಸೆಳೆಯುತ್ತಿದೆ. ವರ್ಷದ ಕೆಲವೇ ತಿಂಗಳು ಸವಿಯಲು ಸಿಗುವ ಮಾವು ಮಾರುಕಟ್ಟೆಯಲ್ಲಿ ನಳನಳಿಸುತ್ತಿದೆ.

‘ಹಣ್ಣುಗಳ ರಾಜ’ ಎಂದೇ ಗುರುತಿಸಲ್ಪಡುವ ಮಾವು ಮಾರುಕಟ್ಟೆ ಪ್ರವೇಶಿಸಿರುವುದು ಗ್ರಾಹಕರಲ್ಲೂ ಖುಷಿ ಹೆಚ್ಚಿಸಿದೆ. ಅನೇಕರು ಮಾವು ಖರೀದಿಯಲ್ಲಿ ತೊಡಗಿರುವ ದೃಶ್ಯಗಳು ಕಂಡುಬಂತು. ಮೈಸೂರು, ಮಂಡ್ಯ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಬಾದಾಮಿ, ರಸಪುರಿ, ಸಿಂಧೂರ ಜಾತಿಯ ಮಾವು ಮಾರುಕಟ್ಟೆಯಲ್ಲಿ ಹೆಚ್ಚಾಗಿ ಕಾಣಸಿಗುತ್ತಿದೆ. ಬಹುಪಾಲು ರೈತರು ‘ಬಾದಾಮಿ’ ಬೆಳೆಯುವುದರಿಂದ, ಅವೇ ಹೆಚ್ಚು ಚಾಲ್ತಿಯಲ್ಲಿವೆ.

ಸಿಹಿ ಚೆಲ್ಲುವ ರಸಪುರಿಯು ದೇವರಾಜ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹80ಕ್ಕೆ ಮಾರಾಟವಾದರೆ, ನಗರದ ವಿವಿಧ ಪ್ರದೇಶದಲ್ಲಿ ₹ 120, ₹150ರವರೆಗೂ ಬೆಲೆ ಹೊಂದಿದೆ. ಬಾದಾಮಿಗೆ ಮಾರುಕಟ್ಟೆಯಲ್ಲಿ ₹ 100ರಿಂದ ₹ 150 ಬೆಲೆಯಿದೆ. ಕೆಲವೆಡೆ ಮಳೆ ಹಾಗೂ ಗಾಳಿ ಮತ್ತು ಆಲಿಕಲ್ಲಿನಿಂದ ಕಾಯಿಗಳು ನೆಲಕ್ಕುರುಳಿ ರೈತರಿಗೆ ತೊಂದರೆಯಾಗಿದೆ ಎನ್ನುವ ಮಾತು ಇದೆ. ಇದರ ನಡುವೆಯೇ ಮಾವು ಮಾರುಕಟ್ಟೆಗೆ ಬಂದಿದೆ. ಕೆಲವು ಗ್ರಾಹಕರು ನೇರವಾಗಿ ರೈತರನ್ನು ಭೇಟಿಯಾಗಿ ಮಾವು ಖರೀದಿಸುತ್ತಿದ್ದಾರೆ.

ನಗರದ ವಿವಿಧ ಹಣ್ಣಿನ ಮಳಿಗೆಗಳಲ್ಲೂ ರಸಪುರಿ, ತೋತಾಪುರಿ ಹಾಗೂ ಬಾದಾಮಿ ಮಾವಿನ ಹಣ್ಣು ಮಾರಾಟವಾಗುತ್ತಿದ್ದು, ಗ್ರಾಹಕರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ.

‘ತಮಿಳುನಾಡು ಮತ್ತು ರಾಜ್ಯದ ವಿವಿಧ ಭಾಗಗಳಿಂದಲೂ ಮಾವು ಆಮದು ಆಗುತ್ತಿದೆ. ಆರಂಭದಲ್ಲಿ ಕಡಿಮೆ ಇಳುವರಿ ಕಾರಣದಿಂದ ಉತ್ತಮ ಬೇಡಿಕೆ ಇತ್ತು. ಈಗ ಮತ್ತೆ ಹಿಂದಿನ ವರ್ಷದಷ್ಟೇ ದರವಿದೆ. ಮುಂದೆ ನೀಲಂ, ಮಲಗೋವಾ, ಮತ್ತು ಆಪೂಸ್ ತಳಿಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಾಗ ರಸಪುರಿ, ಬಾದಮಿ ಹಣ್ಣು ದರ ಇಳಿಯುವ ಸಾಧ್ಯತೆಯೂ ಇದೆ’ ಎಂದು ಹಣ್ಣಿನ ವ್ಯಾಪಾರಿ ಮಂಜು ತಿಳಿಸಿದರು.

‘ಈಗಷ್ಟೇ ಹಣ್ಣಿನ ಸೀಸನ್ ಆರಂಭವಾಗಿದ್ದು, ಮುಂದಿನ ವಾರದಿಂದ ವ್ಯಾಪಾರ ಹೆಚ್ಚಾಗುತ್ತದೆ. ದರವೂ ಕಡಿಮೆಯಾಗುವ ಸಾಧ್ಯತೆ ಇದೆ’ ಎಂದರು. ಸೀಸನ್ ಆರಂಭವಾಗುವಾಗಲೇ ತನ್ನನ್ನು ನಂಬಿದವರಿಗೆ ‘ಮಾವು’ ಸಿಹಿಯಾಗಿದೆ ಎಂಬುದು ರೈತ, ವ್ಯಾಪಾರಿ ಮತ್ತು ಗ್ರಾಹಕರ ಮಾತುಗಳಲ್ಲಿ ವ್ಯಕ್ತವಾಗುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-39-1878718075

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.