ಮೈಸೂರು: ತೋಟಗಾರಿಕೆ ಇಲಾಖೆಯು ಈಚೆಗೆ ನಗರದ ಕುಪ್ಪಣ್ಣ ಉದ್ಯಾನದಲ್ಲಿ ಆಯೋಜಿಸಿದ್ದ ಮಾವು ಮೇಳದಲ್ಲಿ ₹20 ಲಕ್ಷ ಮೊತ್ತದ ಮಾವಿನ ಹಣ್ಣು ಮಾರಾಟವಾಗಿದೆ.

ಮೂರು ದಿನಗಳ ಈ ಮೇಳದಲ್ಲಿ 5 ಸಾವಿರಕ್ಕೂ ಹೆಚ್ಚು ಗ್ರಾಹಕರು ಭೇಟಿ ನೀಡಿದ್ದು, 28 ಮಳಿಗೆಗಳಲ್ಲಿ ವಿವಿಧ ತಳಿಯ ಹಣ್ಣುಗಳ ಮಾರಾಟ ನಡೆದಿತ್ತು. 100 ಟನ್ಗೂ ಅಧಿಕ ಮಾವು ಮಾರಾಟವಾಗಿದೆ ಎಂದು ತೋಟಗಾರಿಕೆ ಜಂಟಿ ನಿರ್ದೇಶಕ ಮಂಜುನಾಥ ಅಂಗಡಿ ತಿಳಿಸಿದರು.

ಮೇಳದಲ್ಲಿ ಮೈಸೂರು, ಮಂಡ್ಯ ಹಾಗೂ ರಾಮನಗರ ಜಿಲ್ಲೆಯ ಮಾವು ಬೆಳೆಗಾರರು ಪಾಲ್ಗೊಂಡಿದ್ದು, ಗ್ರಾಹಕರಿಗೆ ಕಾರ್ಬೈಡ್ ಮುಕ್ತ ಮಾವಿನ ಮಾರಾಟ ನಡೆಯಿತು.

2025ರ ಮೇನಲ್ಲಿ ನಡೆದಿದ್ದ ಮೇಳದಲ್ಲಿ 150 ಟನ್ ಹಾಗೂ 2024ರ ಮೇಳದಲ್ಲಿ 130 ಟನ್ ಮಾವು ಮಾರಾಟವಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-39-1033047217

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.