ಮೈಸೂರು: ಇಲ್ಲಿನ ಮೈಸೂರು ಆರ್ಗನೈಸೇಷನ್ ಆಫ್ ಜೆನಿಟೋಯೂರ (ಮೂತ್ರಕೋಶ) ಶೆಡ್ಯೂಲ್ ಸರ್ಜನ್ಸ್ (ಎಂವೈಎಸ್ಒಜಿಯುಎಸ್) ಮತ್ತುಕರ್ನಾಟಕ ಯೂರಾಲಜಿ ಅಸೋಸಿಯೇಷನ್ (ಕೆಯುಎ) ಸಹಯೋಗದಲ್ಲಿ ಶನಿವಾರ ‘ಮೂತ್ರ ವಿಸರ್ಜನೆ ನಿಯಂತ್ರಣ ತಪ್ಪುವಿಕೆ’ ಕುರಿತು 7ನೇ ವಾರ್ಷಿಕ ನೇರ ಶಸ್ತ್ರಚಿಕಿತ್ಸೆ ಕಾರ್ಯಾಗಾರ– ‘ಕೆಯುಎ– ಎಂವೈಎಸ್ಒಜಿಯುಎಸ್ 2026’ ನಡೆಸಲಾಯಿತು.

ಇಲ್ಲಿನ ಮಣಿಪಾಲ್ ಆಸ್ಪತ್ರೆಯ ಯೂರಾಲಜಿ ವಿಭಾಗದಿಂದ ನಡೆದಕಾರ್ಯಾಗಾರದಲ್ಲಿ ದೇಶದ ವಿವಿಧೆಡೆಯಿಂದ ಬಂದಿದ್ದ ಮೂತ್ರರೋಗ ತಜ್ಞರು, ಸಂಕೀರ್ಣ ಪ್ರಕರಣಗಳ ಶಸ್ತ್ರಚಿಕಿತ್ಸೆಗಳನ್ನುನೆರವೇರಿಸಿದರು. ಮಣಿಪಾಲ್ ಆಸ್ಪತ್ರೆಯಲ್ಲಿ ನಡೆದ ಪ್ರಕ್ರಿಯೆಯ ನೇರ ಪ್ರಸಾರ ವೀಕ್ಷಿಸಲು ಜೆಎಸ್ಎಸ್ ಆಸ್ಪತ್ರೆಯ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. 120 ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಸೂಪರ್ ಸ್ಪೆಷಾಲಿಟಿ ಅಸ್ಪತ್ರೆ: ಉದ್ಘಾಟಿಸಿದ ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ನೆಫ್ರೋ ಯೂರಾಲಜಿಯ ಸಂಸ್ಥಾಪಕ ನಿರ್ದೇಶಕಪ್ರೊ.ಜಿ.ಕೆ. ವೆಂಕಟೇಶ್, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಅತ್ಯಾಧುನಿಕ 500 ಹಾಸಿಗೆಗಳಸೂಪರ್-ಸ್ಪೆಷಾಲಿಟಿ ಯೂರಾಲಜಿ ಆಸ್ಪತ್ರೆಯನ್ನು ನಿರ್ಮಿಸಲು ಗುಂಜೂರಿನಲ್ಲಿ 5 ಎಕರೆ ಜಮೀನನ್ನು ಇನ್ಸ್ಟಿಟ್ಯೂಟ್ ಆಫ್ ನೆಫ್ರೋ ಯೂರಾಲಜಿಗೆ ಮಂಜೂರು ಮಾಡಲಾಗಿದೆ’ ಎಂದರು.

ಮಣಿಪಾಲ್ ಆಸ್ಪತ್ರೆಯ ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ.ಉಪೇಂದ್ರ ಶೆಣೈ, ‘ಮಣಿಪಾಲ್ ಫೌಂಡೇಷನ್ ವತಿಯಿಂದ ಬಿಪಿಎಲ್ ಚೀಟಿಹೊಂದಿರುವ ರೋಗಿಗಳಿಗೆ ಮುಂದುವರಿದ ಯೂರಾಲಜಿ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಲಾಗುತ್ತಿದೆ’ ಎಂದರು.

ಯೂರಾಲಜಿಕಲ್ ಸೊಸೈಟಿ ಆಫ್ ಇಂಡಿಯಾ ಅಧ್ಯಕ್ಷ ಡಾ.ಕೇಶವಮೂರ್ತಿ ಆರ್. ಮಾತನಾಡಿದರು. ಡಾ.ಉಮೇಶ್ ಕೆ. ನೇತೃತ್ವದಲ್ಲಿ ನಡೆದ ರಸಪ್ರಶ್ನೆಯಲ್ಲಿ, ಎಂವೈಎಸ್ಒಜಿಯುಎಸ್ ಸದಸ್ಯರು ಹಾಗೂ ಕೌನ್ಸಿಲ್ ಪದಾಧಿಕಾರಿಗಳು ಭಾಗವಹಿಸಿದ್ದರು. ಕೆಯುಎ ಅಧ್ಯಕ್ಷ ಡಾ.ನವೀನ್ ಎಚ್.ಎನ್. ಉದ್ಘಾಟಿಸಿದರು. ಜೆಎಸ್ಎಸ್ ಆಸ್ಪತ್ರೆಯ ಉಪ ನಿರ್ದೇಶಕರಾದ ಡಾ.ಸುಮನ ಎಂ.ಎನ್., ಎಂವೈಎಸ್ಒಜಿಯುಎಸ್ ಅಧ್ಯಕ್ಷ ಡಾ.ನರೇಂದ್ರ ಜೆ.ಬಿ., ಕಾರ್ಯದರ್ಶಿ ಡಾ.ಪ್ರಸಾದ್ ಎಚ್.ಎಲ್. ಮತ್ತು ಕೆಯುಎ ಕಾರ್ಯದರ್ಶಿ ಡಾ.ಸಚಿನ್ ಧಾರವಾಡಕರ್ ಇದ್ದರು.

ಕಾರ್ಯಕ್ರಮದ ಸಂಘಟನಾ ಅಧ್ಯಕ್ಷ ಡಾ.ಪ್ರಕಾಶ್ ಕೆ. ಪ್ರಭು ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ.ದಿನೇಶ್ಕುಮಾರ್ ಟಿ.ಪಿ. ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-39-1273887786

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.