ಮೈಸೂರು: ‘ವೈದ್ಯಕೀಯ ಸಂಶೋಧನೆಗಳ ಮುಖ್ಯ ಉದ್ದೇಶ ಜನರ ಜೀವನಮಟ್ಟ ಸುಧಾರಣೆ ಹಾಗೂ ಅವರ ನೋವಿಗೆ ಸೂಕ್ತ ಉಪಶಮನ ನೀಡುವುದೇ ಆಗಿದೆ’ ಎಂದು ಇಲ್ಲಿನ ಜಯದೇವ ಹೃದ್ರೋಗ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಕೆ.ಎಸ್. ಸದಾನಂದ ಹೇಳಿದರು.

ಇಲ್ಲಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಭಾರತೀಯ ಕ್ಲಿನಿಕಲ್ ಪ್ರಯೋಗಗಳ ಸೊಸೈಟಿ ಸಹಯೋಗದಲ್ಲಿ ಶನಿವಾರ ನಡೆದ ಅಂತರರಾಷ್ಟ್ರೀಯ ಕ್ಲಿನಿಕಲ್ ಪ್ರಯೋಗಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವೈದ್ಯಕೀಯ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ನಮ್ಮಲ್ಲಿನ ಜ್ಞಾನವನ್ನು ಪ್ರಯೋಗಗಳ ಮೂಲಕ ಓರೆಗೆ ಹಚ್ಚಬೇಕು. ಆಗ ಮಾತ್ರ ಸಮಾಜಕ್ಕೆ ಒಳಿತಾಗುವ ಸಂಶೋಧನೆಗಳು ಸಾಧ್ಯ. ತಜ್ಞರು ಇದನ್ನು ಪ್ರತ್ಯೇಕ ಹೊರೆ ಎಂದು ಭಾವಿಸದೇ ಆರೋಗ್ಯ ರಕ್ಷಣೆಯ ಭಾಗವಾಗಿ ನೋಡಬೇಕು’ ಎಂದರು.

‘ಕ್ಲಿನಿಕಲ್ ಪ್ರಯೋಗಗಳಲ್ಲಿ ನೈತಿಕ ಮೌಲ್ಯಗಳನ್ನು ಪಾಲಿಸುವುದು ಅತ್ಯಗತ್ಯ. ಪ್ರಯೋಗದಲ್ಲಿ ಭಾಗಿಯಾಗುವ ಎಲ್ಲರಿಗೂ ಉದ್ದೇಶದ ಅರಿವು, ಪರಸ್ಪರ ನಂಬಿಕೆ ಇರಬೇಕು. ರೋಗಿಯ ಸಮ್ಮತಿ, ಆತನ ಹಕ್ಕುಗಳ ರಕ್ಷಣೆಗೆ ಎಲ್ಲರೂ ಕಾಳಜಿ ವಹಿಸಬೇಕು. ಸಂಶೋಧನೆ ಸಮಾಜಪರವಾಗಿರಬೇಕು’ ಎಂದು ಹೇಳಿದರು.

ಜೆಎಸ್ಎಸ್ ಆಸ್ಪತ್ರೆ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಸುನೀಲ್ ಕುಮಾರ್, ಯು.ವಿ. ರಿಸರ್ಚ್ ಸಂಸ್ಥೆಯ ಸಿಒಒ ಸಂಜಯ್ ಕಬ್ರಾ, ಬಯೊಟೆಕ್ ಫಾರ್ಮಾಸಿಟಿಕಲ್ಸ್ ಮತ್ತು ಮೆಡಿಕಲ್ ಡಿವೈಸಸ್ ಸಂಸ್ಥೆಯ ಸಲಹೆಗಾರ್ತಿ ಲಕ್ಷ್ಮಿ ಅಚ್ಯುತ ಅವರು ಕಾರ್ಯಕ್ರಮದ ಭಾಗವಾಗಿ ವಿವಿಧ ವಿಷಯಗಳನ್ನು ಮಂಡಿಸಿದರು.

ಆಯುಷ್ ಇಲಾಖೆ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀನಾರಾಯಣಶೆಣೈ, ಅಕ್ಷಯಸಾರಥಿ ಹೆಲ್ತ್ ಸಲ್ಯುಷನ್ಸ್ ಸಂಸ್ಥೆಯ ನಂಜರಾಜೇ ಎಸ್. ಅರಸ್, ಮೈಸೂರು ವಿಶ್ವವಿದ್ಯಾಲಯ ಜೆನೆಟಿಕ್ಸ್ ವಿಭಾಗದ ಮುಖ್ಯಸ್ಥೆ ಮಾಲಿನಿ ರಾವ್, ಸಂಚಾಲಕ ಡಾ.ಸಿ.ಜೆ. ದೇವರಾಜು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-39-966951847

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.