ಮೈಸೂರು: ಇಲ್ಲಿನ ಮೈಮುಲ್ (ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನಿಯಮಿತ) ವತಿಯಿಂದ ಸೋಮವಾರ ವಿಶ್ವ ಹಾಲು ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ನೌಕರರು, ‘ನಮ್ಮ ನಂದಿನಿ ನಮ್ಮ ಹೆಮ್ಮೆ’, ‘ನಂದಿನಿ ಹಾಲು ಬಳಸಿ ರೈತರ ಹಿತ ಕಾಪಾಡಿ’, ಮೊದಲಾದ ಫಲಕಗಳನ್ನು ಹಿಡಿದು ಸಾರೋಟು ಹಾಗೂ ಬೈಕ್ಗಳಲ್ಲಿ ಮೆರವಣಿಗೆ ನಡೆಸಿದರು. ಆಲನಹಳ್ಳಿ ಬಡಾವಣೆಯಲ್ಲಿರುವ ಮೈಮುಲ್ ಆವರಣದಲ್ಲಿ ಒಕ್ಕೂಟದ ಆಡಳಿತಾಧಿಕಾರಿ ಸಿ. ಪ್ರಸಾದ್ ರೆಡ್ಡಿ ಚಾಲನೆ ನೀಡಿದರು.

ಬನ್ನೂರು ಮುಖ್ಯರಸ್ತೆ– ಟೆರೇಸಿಯನ್ ಕಾಲೇಜು ವೃತ್ತ, ನೂತನ ಜಿಲ್ಲಾಧಿಕಾರಿ ಕಚೇರಿ ರಸ್ತೆ, ನಜರ್ಬಾದ್ ಪೊಲೀಸ್ ಠಾಣೆ ಮಾರ್ಗವಾಗಿ ಕುಪ್ಪಣ್ಣ ಉದ್ಯಾನದವರೆಗೆ ಮೆರವಣಿಗೆ ನಡೆಯಿತು. ಏಳು ಸಾರೋಟಗಳಲ್ಲಿ ‘ನಂದಿನಿ’ ಉತ್ಪನ್ನದ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಹಾಲಿನ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಮೈಮುಲ್ನ ನೂರಾರು ಮಂದಿ ಬೈಕ್ಗಳಲ್ಲಿ ಬಂದರು.

ಆರೋಗ್ಯಕ್ಕೆ ಮುಖ್ಯ: ಪ್ರಸಾದ್ ರೆಡ್ಡಿ ಮಾತನಾಡಿ, ‘2001ರಿಂದ ವಿಶ್ವಸಂಸ್ಥೆಯು ವಿಶ್ವದಾದ್ಯಂತ ವಿಶ್ವ ಹಾಲು ದಿನ ಆಚರಿಸುತ್ತಿದೆ. ಇಂದು ಆರೋಗ್ಯ ಅತಿಮುಖ್ಯವಾಗಿದೆ. ಆರೋಗ್ಯವಾಗಿರಲು ಪೌಷ್ಟಿಕಾಂಶ ಬೇಕಾಗುತ್ತದೆ. ಇದು ದೊರೆಯಲು ಹಾಲು ಸೇವನೆ ಬಹುಮುಖ್ಯವಾಗಿದೆ. ಆರೋಗ್ಯವಾಗಿದ್ದಾಗ ಮಾತ್ರ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

‘ಕೆಲವು ಖಾಸಗಿ ಕಂಪನಿಗಳು ಹಾಲಿನ ಕಲಬೆರಕೆ ಮಾಡುತ್ತಿವೆ. ‘ನಂದಿನಿ’ ಹಾಲು ಶೇ 100ರಷ್ಟು ಶುದ್ಧವಾಗಿದೆ. ಪ್ರಪಂಚದಲ್ಲಿಯೇ 3ನೇ ಬ್ರಾಂಡ್ ಆಗಿ ಮಹತ್ವ ಪಡೆದಿದೆ. ವಿಶ್ವದಲ್ಲೇ ಅತಿಹೆಚ್ಚು ಹಾಲು ಉತ್ಪಾದನೆಯಲ್ಲಿ ದೇಶ ಮೊದಲ ಸ್ಥಾನದಲ್ಲಿದೆ. ಈ ಸಾಲಿನ ವಿಶ್ವ ಹಾಲು ದಿನವನ್ನು ಮಹಿಳಾ ಸಬಲೀಕರಣ ಎಂಬ ಧ್ಯೇಯದೊಂದಿಗೆ ಆಚರಿಸಲಾಗುತ್ತಿದೆ’ ಎಂದರು.

‘ಮೈಮುಲ್’ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಸುರೇಶ್ ನಾಯ್ಕ್, ‘ಹಾಲಿನ ಮಹತ್ವವನ್ನು ಸಾರುವ ಉದ್ದೇಶದಿಂದ ಕಾರ್ಯಕ್ರಮ ನಡೆಸಲಾಗುತ್ತಿದೆ. ಹಾಲು ಎಂದರೆ ರೈತರು ಎಂದರ್ಥ. ಅವರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ’ ಎಂದು ಹೇಳಿದರು.

ಸಂಪೂರ್ಣ ಆಹಾರ: ‘ಹಾಲು ಸಂಪೂರ್ಣ ಆಹಾರವಾಗಿದ್ದು, ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಅಂಶಗಳನ್ನೂ ಹೊಂದಿದೆ. ಒಂದೊಂದು ಧಾನ್ಯದಲ್ಲಿ ಒಂದೊಂದು ವಿಟಮಿನ್ ಇದೆ. ಆದರೆ, ಹಾಲಿನಲ್ಲಿ ಸಂಪೂರ್ಣ ವಿಟಮಿನ್ ದೊರೆಯುತ್ತದೆ’ ಎಂದು ತಿಳಿಸಿದರು.

‘ಜಿಲ್ಲೆಯಾದ್ಯಂತ 5.50 ಲಕ್ಷ ಜಾನುವಾರು ಹಾಲಿನ ಉತ್ಪಾದನೆಯಲ್ಲಿತೊಡಗಿವೆ. ನಗರದಲ್ಲೂ ಹಾಲಿನ ಉತ್ಪಾದನೆ ಜಾಸ್ತಿ ಇದೆ. ಗ್ರಾಮಾಂತರ ಭಾಗದಲ್ಲಿ ಮನೆಗೆ, ಸ್ಥಳೀಯವಾಗಿ ಬಳಸಿಕೊಂಡು ಉಳಿದುದ್ದನ್ನು ಮಾರುತ್ತಾರೆ’ ಎಂದರು.

‘ಮೈಮುಲ್’ ಎಂಜಿನಿಯರಿಂಗ್ ವಿಭಾಗದ ವ್ಯವಸ್ಥಾಪಕಿ ಗಿರಿಜಾ ಮಾತನಾಡಿದರು. ಪ್ರಧಾನ ವ್ಯವಸ್ಥಾಪಕ ಜಯಶಂಕರ್, ವ್ಯವಸ್ಥಾಪಕರಾದ ಗಿರಿಜಾ, ಕರಿಬಸವರಾಜು, ಎನ್. ಸೌಮ್ಯಾ, ಬಬಿತಾ, ಉಪ ವ್ಯವಸ್ಥಾಪಕರು,ಅಧಿಕಾರಿಗಳು, ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-39-673508626

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.