ಸಾಲಿಗ್ರಾಮ: ರಾಜ್ಯ ಸರ್ಕಾರ ರೈತರಿಗೆ ಪ್ರತಿ ದಿನ 7 ಗಂಟೆ ವಿದ್ಯುತ್ ಸರಬರಾಜು ಮಾಡುವಂತೆ ಆದೇಶ ನೀಡಿದ್ದರೂ ಸಾಲಿಗ್ರಾಮ ಸೆಸ್ಕ್ ಎಇಇ ಮಧುಸೂದನ್ ಹಾಗೂ ಮಿರ್ಲೆ ಸೆಕ್ಷನ್ ಆಫೀಸರ್ ರಾಮಚಂದ್ರ ಅವರು ಉದಾಸೀನತೆಗೆ ನೂರಾರು ಎಕರೆ ಜಮೀನಿನಲ್ಲಿ ಬೆಳೆಗಳು ಒಣಗುತ್ತಿರುವುದನ್ನು ಖಂಡಿಸಿ ರೈತರು ಬುಧವಾರ ಮಿರ್ಲೆ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಸರ್ಕಾರ ರೈತರ ಪರವಾಗಿ ಇದ್ದರೂ ಇಲ್ಲಿನ ಎಂಜಿನಿಯರ್ಗಳು ರೈತ ವಿರೋಧಿ ನೀತಿ ಅನುಸರಿಸಿ ರೈತರ ಬದುಕಿಗೆ ಬೆಂಕಿ ಇಟ್ಟು ಉಡಾಫೆಯಿಂದ ವರ್ತಿಸುತ್ತಿದ್ದಾರೆ ಎಂದು ಪ್ರತಿಭಟನ ನಿರತರು ಆಕ್ರೋಶ ವ್ಯಕ್ತಪಡಿಸಿ, ಎಂಜಿನಿಯರ್ಗಳ ವಿರುದ್ಧ ಧಿಕ್ಕಾರ ಕೂಗಿದರು.

ರೈತರು ದಿಢೀರ್ ಪ್ರತಿಭಟನೆ ಮಾಡುತ್ತಿದ್ದಂತೆ ಕಕ್ಕಾಬಿಕ್ಕಿಯಾದ ಮಿರ್ಲೆ ಸೆಕ್ಷನ್ ಆಫೀಸರ್ ರಾಮಚಂದ್ರ ಅವರಿಗೆ ಪ್ರತಿಭಟನನಿರತರ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗಲಿಲ್ಲ.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ವ್ಯವಸಾಯ ಸಹಕಾರ ಸಂಘದ ಮಾಜಿ ಅಧ್ಯಕ್ಷ ಭಾಸ್ಕರ್ ದೂರವಾಣಿಯಲ್ಲಿ ಎಇಇ ಮಧುಸೂದನ್ ಅವರಿಗೆ ತರಾಟೆ ತೆಗೆದುಕೊಂಡಾಗ, ಮಿರ್ಲೆ ವ್ಯಾಪ್ತಿಯಲ್ಲಿ ಹೆಚ್ಚು ಸಂಪರ್ಕಗಳಿದ್ದು ಎರಡು ಹಂತಗಳಲ್ಲಿ ರೈತರಿಗೆ ವಿದ್ಯುತ್ ಸರಬರಾಜು ಮಾಡುತ್ತೇವೆ ಎಂದು ಭರವಸೆ ನೀಡಿದರು.

ಇದಕ್ಕೆ ಸಮಾಧಾನವಾಗದ ಪ್ರತಿಭಟನನಿರತರು, ಇನ್ನು 20 ದಿನಗಳ ಒಳಗೆ ರಾಜ್ಯ ಸರ್ಕಾರ ಸೂಚಿಸಿರುವಂತೆ ರೈತರಿಗೆ 7 ಗಂಟೆಗಳ ಕಾಲ ವಿದ್ಯುತ್ ನೀಡದಿದ್ದರೆ ಸೆಸ್ಕಾಂ ಕಚೇರಿ ಮುಂದೆ ಧರಣಿ ಮಾಡುವುದಾಗಿ ಎಚ್ಚರಿಕೆ ಕೊಟ್ಟರು.

ಸೆಸ್ಕ್ ಎಂಜಿನಿಯರ್ಗಳ ಉಡಾಫೆಯಿಂದ ರೈತರು ಕೈಗೆ ಬಂದ ಬೆಳೆಯನ್ನು ಕಳೆದುಕೊಳ್ಳುವಂತೆ ಆಗಿದೆ. ಇದೇ ರೀತಿ ಎಂಜಿನಿಯರ್ಗಳು ವರ್ತಿಸಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುಧಾಕರ, ರಮೇಶ್, ಕೃಷ್ಣೇಗೌಡ, ಪಿಂಕಿ ಮಹೇಶ್, ವಸಂತ, ಪ್ರಸಾದ್, ಉಮೇಶ್, ರಘು,ಬಾಬು, ಮುರಳಿ, ಅಪ್ಪು, ಚಂದ್ರಹಾಸ, ಶಿವು, ಅನಿಲ್, ಮಧು, ತುಕಾರಾಂ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-38-580138960

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.