ಸ್ವಚ್ಛತೆ ಕಾಪಾಡುವಂತೆ ಬುದ್ಧಿ ಮಾತು, ಸೂಚನಾ ಫಲಕ, ದಂಡಗಳಿಗೆ ಬಗ್ಗದ ಸಾರ್ವಜನಿಕರಿಗೆ ಪ್ರಾಯೋಗಿಕ ಪಾಠ ಹೇಳಲು ಮೈಸೂರು ಮಹಾನಗರ ಪಾಲಿಕೆಯು ಹೊಸ ದಾರಿ ಕಂಡುಕೊಂಡಿದೆ. ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಮೋರಿಯ ಗೋಡೆಗೆ ಮೂತ್ರ ವಿಸರ್ಜನೆ ಮಾಡುವುದನ್ನು ತಪ್ಪಿಸಲು, 85 ಮೀಟರ್ ಉದ್ದಕ್ಕೆ ಸ್ಟೀಲ್ ಮಿರರ್ಗಳನ್ನು (ಕನ್ನಡಿ) ಅಳವಡಿಸಲಾಗಿದೆ. ಅವು ಒಡೆಯುವುದಿಲ್ಲ. ಪ್ರಸ್ತುತ 4 ಅಡಿ ಎತ್ತರದ ಸ್ಟೀಲ್ ಮಿರರ್ ಅಳವಡಿಸಿರುವುದರಿಂದ, ಅದರ ಮುಂಭಾಗ ನಡೆದು ಹೋಗುವವರ ಚಿತ್ರಣವು ಇನ್ನೊಂದು ಬದಿಯಲ್ಲಿ ನಡೆದು ಕೊಂಡು ಹೋಗುವವರಿಗೂ ಕಾಣಿಸುವಂತಿದೆ. ಮೂತ್ರ ವಿಸರ್ಜಿಸುವವರು, ಪಾನ್ ಮಸಾಲ ಉಗಿಯುವವರು ಅಲ್ಲಿ ನಿಂತಾಗ ತಮ್ಮ ಮುಖವನ್ನೇ ಕಂಡು, ಇತರರಿಗೂ ಕಾಣಿಸುತ್ತದೆ ಎಂಬ ನಾಚಿಕೆಯಿಂದ ವಾಪಸು ತೆರಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.