ಮೈಸೂರು: ಇಲ್ಲಿನ ರೈಲ್ವೆ ನಿಲ್ದಾಣದ ಸಮೀಪವಿರುವ ಐತಿಹಾಸಿಕ 'ಮೈಸೂರು ನ್ಯೂ ಗೂಡ್ಸ್ ಟರ್ಮಿನಲ್' (ಎಂಎನ್ಜಿಟಿ) ಅನ್ನು ಪಾಂಡವಪುರಕ್ಕೆ ಸ್ಥಳಾಂತರಿಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತವಾಗಿದೆ. ಈ ನಿರ್ಧಾರದ ವಿರುದ್ಧ ಹೋರಾಟ ರೂಪಿಸಲು ಗುರುವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಬನ್ನಿಮಂಟಪದ ಗೂಡ್ಸ್ ಶೆಡ್ ಆವರಣದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ, ‘ಈ ಹಿಂದೆ ಅಕ್ಟೋಬರ್ 2024ರಲ್ಲೂ ಸ್ಥಳಾಂತರಕ್ಕೆ ಪ್ರಸ್ತಾವನೆ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸಚಿವರಿಗೆ ಪತ್ರ ಬರೆದು ತಡೆ ಹಿಡಿಸಿದ್ದರು. ಈಗ ಪುನಃ ಸ್ಥಳಾಂತರದ ಪ್ರಯತ್ನ ಶುರುವಾಗಿರುವುದು ಆತಂಕದ ಸಂಗತಿ. ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಸಚಿವ ವಿ. ಸೋಮಣ್ಣ ಮತ್ತು ಸಂಸದ ಯದುವೀರ್ ಒಡೆಯರ್ ಅವರು ಗುರುವಾರ ಪಾಂಡವಪುರದಲ್ಲಿ ಸ್ಥಳ ಪರಿಶೀಲನೆ ನಡೆಸಿರುವುದು ಕಾರ್ಮಿಕರು ಹಾಗೂ ವರ್ತಕರಲ್ಲಿ ಆತಂಕ ಮೂಡಿಸಿದೆ’ ಎಂದರು.

‘ಸರಕು ಸಾಗಣೆಯಿಂದ ಮೈಸೂರು ರೈಲ್ವೆ ವಿಭಾಗಕ್ಕೆ 2025-26ರಲ್ಲಿ ₹4,900 ಕೋಟಿ ಆದಾಯ ಬಂದಿದೆ. ಆದರೆ, ಪ್ರಯಾಣಿಕರ ರೈಲಿನಿಂದ ಬಂದಿರುವುದು ಕೇವಲ ₹450ಕೋಟಿ ಮಾತ್ರ. ಕೇವಲ ವಂದೇ ಭಾರತ್ ರೈಲುಗಳನ್ನು ರಾತ್ರಿ ವೇಳೆ ನಿಲ್ಲಿಸಿ ಸ್ವಚ್ಛಗೊಳಿಸಲು ಇಷ್ಟು ದೊಡ್ಡ ವ್ಯವಸ್ಥೆಯನ್ನು ಕಿತ್ತುಹಾಕುವುದು ಮೂರ್ಖತನ ಮತ್ತು ಬಡವರ ವಿರೋಧಿ ನೀತಿ’ ಎಂದು ಟೀಕಿಸಿದರು.

‘1882ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಸ್ಥಾಪನೆಯಾದ ಈ ಟರ್ಮಿನಲ್, ಮೈಸೂರು ಭಾಗದ ಆರ್ಥಿಕತೆಯ ನಾಡಿಮಿಡಿತವಾಗಿದೆ. ಇಲ್ಲಿಂದ ಪ್ರತಿದಿನ ಸುಮಾರು 600 ಲಾರಿಗಳು ಹತ್ತು ಜಿಲ್ಲೆಗಳಿಗೆ ಆಹಾರ ಧಾನ್ಯ ಮತ್ತು ರಸಗೊಬ್ಬರವನ್ನು ಸಾಗಿಸುತ್ತವೆ. ಎಫ್ಸಿಐ ಮೂಲಕ ರಾಜ್ಯದ 'ಅನ್ನಭಾಗ್ಯ' ಯೋಜನೆಗೆ ಬೇಕಾದ ಅಕ್ಕಿ ವಿತರಣೆಯ ಕೇಂದ್ರವೂ ಇದೇ ಆಗಿದೆ. ಸುಮಾರು 10 ಸಾವಿರ ಕೂಲಿ ಕಾರ್ಮಿಕರು ನೇರವಾಗಿ ಇದರ ಮೇಲೆ ಅವಲಂಬಿತರಾಗಿದ್ದಾರೆ. ಸ್ಥಳಾಂತರದಿಂದ ಇವರೆಲ್ಲರೂ ಬೀದಿಪಾಲಾಗಲಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ಸಭೆಯಲ್ಲಿ ಶಾಸಕ ತನ್ವೀರ್ ಸೇಠ್, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೋದಂಡರಾಮ, ಲೋಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಶಾಹೀದ್, ಕಾರ್ಮಿಕರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-38-2039261007

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.